ಇನ್ನಷ್ಟು ಐಷಾರಾಮಿ ಸ್ಪರ್ಶ ಪಡೆಯಲಿರುವ ಜಾಗ್ವಾರ್
ಎಕ್ಸ್‌ಕೆ ಆವೃತ್ತಿಯನ್ನು ಬದಲಾಯಿಸಿರುವ ಜಾಗ್ವಾರ್ ಇನ್ನಷ್ಟು ಐಷಾರಾಮಿ ಸ್ಪರ್ಶ ಪಡೆಯಲಿದೆ. ಇದು ಎಫ್-ಟೈಪ್ ತಲಹದಿಯಲ್ಲಿ ರೂಪುಗೊಳ್ಳಲಿದೆ.
ಮೂಲಗಳ ಪ್ರಕಾರ ಪ್ರಸಕ್ತ ಬೇಸಿಗೆ ಕಾಲದ ಅಂತ್ಯದಲ್ಲಿ ಎಕ್ಸ್‌ಕೆ ಉತ್ಪಾದನೆಯನ್ನು ಜಾಗ್ವಾರ್ ನಿಲುಗಡೆಗೊಳಿಸಲಿದೆ. ಅಲ್ಲದೆ ಎಕ್ಸ್‌ಕೆ ಉತ್ತರಾಧಿಕಾರಿ ಅಭಿವೃದ್ಧಿ ಕಾರ್ಯಗಳು ಈಗಾಗಲೇ ಆರಂಭಗೊಂಡಿದೆ.

ಈ ಬೃಹತ್ ಕಾರು, ಮರ್ಸಿಡಿಸ್ ಬೆಂಝ್ ಎಸ್-ಕ್ಲಾಸ್ ಕೂಪೆ ಹಾಗೂ ಬೆಂಟ್ಲಿ ಕಾಂಟಿನೆಂಟಲ್ ಜಿಟಿ ಆವೃತ್ತಿಗಳಿಗೆ ಪ್ರತಿಸ್ಪರ್ಧಿಯಾಗಿರಲಿದೆ.
ಜಾಗ್ವಾರ್ ಎಕ್ಸ್‌ಕೆ ಉತ್ತರಾಧಿಕಾರಿ ಎಕ್ಸ್‌ಜೆ ಕೂಪೆ ಆಗಿರಲಿದ್ದು, ಎಫ್-ಟೈಪ್‌ನಿಂದ ಸ್ಪೂರ್ತಿ ಪಡೆದು ವಿನ್ಯಾಸಗೊಳಿಸಲಾಗಿದೆ. ನೂತನ ಎಕ್ಸ್‌ಜೆ ಕೂಪೆ ವಿ6 ಅಥವಾ ವಿ8 ಸೂಪರ್ ಚಾರ್ಜ್ಡ್ ಪೆಟ್ರೋಲ್ ಹಾಗೂ ಡೀಸೆಲ್ ಸಿಕ್ಸ್ ಸಿಲಿಂಡರ್‌ನಿಂದ ನಿಯಂತ್ರಿಸಲ್ಪಡುವ ಸಾಧ್ಯತೆಯಿದೆ.


Click it and Unblock the Notifications








