ಸೋಷಿಯಲ್ ವಾರ್; ಕೆಎಸ್ಆರ್‌ಟಿಸಿ ಫೇ‌ಸ್‌ಬುಕ್ ಪುಟದಲ್ಲಿ 'ಮಲ್ಲು' ದಾಂಧಲೆ

Written By:

ಬ್ರಾಂಡ್ ಹೆಸರಿಗೆ ಸಂಬಂಧಿಸಿದಂತೆ ಕಾನೂನು ಸಮರ ಒಂದೆಡೆ ನಡೆಯುತ್ತಿರುವುವಂತೆಯೇ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್ಆರ್‌ಟಿಸಿ) ಅಧಿಕೃತ ಫೇಸ್‌ಬುಕ್ ಪುಟದಲ್ಲಿ 'ಮಲ್ಲು'ಗಳ ದಾಂಧಲೆ ನಡೆದಿದೆ.

ಇವನ್ನೂ ಓದಿ: KSRTC ಇನ್ಮುಂದೆ ಕರ್ನಾಟಕದ್ದೇ ಸ್ವತ್ತು!

ಈ ಹಿಂದೆ ಸಚಿನ್ ತೆಂಡೂಲ್ಕರ್ ಯಾರೆಂದು ಗೊತ್ತಿಲ್ಲ ಎಂಬ ವಿವಾದತ್ಮಾಕ ಹೇಳಿಕೆ ನೀಡಿದ ಬೆನ್ನಲ್ಲೇ ಖ್ಯಾತ ಟೆನಿಸ್ ಆಟಗಾರ್ತಿ ಮರಿಯಾ ಶರಪೋವಾ ಪುಟದಲ್ಲಿ ಯದ್ವಾ ತದ್ವಾ ಪೋಸ್ಟ್‌ಗಳನ್ನು ಹಾಕಿದ್ದ ಅದೇ ಮಲಯಾಳಿಗರ ದಾಂಧಲೆ ಕರ್ನಾಟಕ ಕೆಎಸ್‌ಆರ್‌ಟಿಸಿ ಪುಟದಲ್ಲೂ ನಡೆದಿದೆ. ಅಷ್ಟಕ್ಕೂ ಏನಿದು ವಿವಾದ? ಸಂಪೂರ್ಣ ವಿವರಗಳಿಗಾಗಿ ಫೋಟೊ ಸ್ಲೈಡ್‌ನತ್ತ ಮುಂದುವರಿಯಿರಿ.

ಬ್ರಾಂಡ್ ವಾರ್; ಕೆಎಸ್ಆರ್‌ಟಿಸಿ ಫೇ‌ಸ್‌ಬುಕ್ ಪುಟದಲ್ಲಿ 'ಮಲ್ಲು' ದಾಂಧಲೆ

ನಿಮಗೆಲ್ಲರಿಗೂ ತಿಳಿದಿರುವುವಂತೆಯೇ ಕರ್ನಾಟಕ ಹಾಗೂ ಕೇರಳ ಸಾರಿಗೆ ಸಂಸ್ಥೆಗಳು ತಮ್ಮ ತಮ್ಮ ಬಸ್ಸುಗಳಲ್ಲಿ 'ಕೆಎಸ್‌ಆರ್‌ಟಿಸಿ' ಎಂಬ ಸಮಾನ ಮೊನೊಗ್ರಾಂ (monogram, ಸಂಯುಕ್ತಾಕ್ಷರ, ಸಂಕ್ಷಿಪ್ತ ರೂಪ) ಬಳಕೆ ಮಾಡುತ್ತಿದೆ. ಇದಕ್ಕೆ ಸಂಬಂಧಿಸಿದಂತೆ 2013ರಲ್ಲೇ ಟ್ರೇಡ್ ಮಾರ್ಕ್ ರಿಜಿಸ್ಟ್ರೇಷನ್‌ಗಾಗಿ ಅರ್ಜಿ ಸಲ್ಲಿಸಿದ್ದ ಕರ್ನಾಟಕ ಇದೀಗ ಕೆಎಸ್‌ಆರ್‌ಟಿಸಿ ಬ್ರಾಂಡ್ ಹೆಸರು ಗಿಟ್ಟಿಸಿಕೊಳ್ಳಲು ಯಶಸ್ವಿಯಾಗಿದೆ. ಇದರಂತೆ ಕೇರಳಕ್ಕೆ ಕೆಎಸ್‌ಆರ್‌ಟಿಸಿ ಮೊನೊಗ್ರಾಂ ಬಳಕೆ ಮಾಡದಂತೆ ಕರ್ನಾಟಕ ಸೂಚಿಸಿತ್ತು.

ಬ್ರಾಂಡ್ ವಾರ್; ಕೆಎಸ್ಆರ್‌ಟಿಸಿ ಫೇ‌ಸ್‌ಬುಕ್ ಪುಟದಲ್ಲಿ 'ಮಲ್ಲು' ದಾಂಧಲೆ

ಈ ಸುದ್ದಿ ಕೇರಳಗರ ಕಿವಿಗೆ ಬಿದ್ದಿದ್ದೆ ತಡ ಯಾವುದೇ ಕಾರಣಕ್ಕೂ ಕೆಎಸ್‌ಆರ್‌ಟಿಸಿ ಬಿಟ್ಟು ಕೊಡಲ್ಲ ನಾವು ಎಂಬ ಘೋಷ ವಾಕ್ಯದೊಂದಿಗೆ ಕರ್ನಾಟಕ ಅಧಿಕೃತ ಪುಟದಲ್ಲಿ ಕಾಮೆಂಟ್‌ಗಳ ಮೇಲೆ ಕಾಮೆಂಟ್‌ಗಳನ್ನು ಪೋಸ್ಟ್ ಮಾಡುತ್ತಿದ್ದಾರೆ.

ಬ್ರಾಂಡ್ ವಾರ್; ಕೆಎಸ್ಆರ್‌ಟಿಸಿ ಫೇ‌ಸ್‌ಬುಕ್ ಪುಟದಲ್ಲಿ 'ಮಲ್ಲು' ದಾಂಧಲೆ

ಇನ್ನೊಂದೆಡೆ ಕರ್ನಾಟಕ ಕೆಎಸ್‌ಆರ್‌ಟಿಸಿಗಿಂತಲೂ ಮೊದಲೇ ಅಸ್ತಿತ್ವಕ್ಕೆ ಬಂದಿರುವ ಕೇರಳ ಕೆಎಸ್‌ಆರ್‌ಟಿಸಿ (1953ರಲ್ಲಿ) ಸಂಸ್ಥೆ ಆರ್ಥಿಕ ಸಂಕಷ್ಟದಲ್ಲಿದ್ದು ಅಲ್ಲಿನ ಬಸ್ಸುಗಳು ಕೋಟಿಗಟ್ಟಲೆ ನಷ್ಟದಲ್ಲಿ ಓಡಾಡುತ್ತಿದೆ. ಈ ಎಲ್ಲದರ ನಡುವೆ ಕರ್ನಾಟಕ ಕೆಆಸ್ಆರ್‌ಟಿಸಿ ವಿರುದ್ಧ ಕಾನೂನು ಸಮರಕ್ಕೆ ಮುಂದಾಗಿದೆ.

ಬ್ರಾಂಡ್ ವಾರ್; ಕೆಎಸ್ಆರ್‌ಟಿಸಿ ಫೇ‌ಸ್‌ಬುಕ್ ಪುಟದಲ್ಲಿ 'ಮಲ್ಲು' ದಾಂಧಲೆ

ಕರ್ನಾಟಕ ಕೆಎಸ್‌ಆರ್‌ಟಿಸಿ ಪುಟದಲ್ಲಿ ನಿರಂತರ ಕಾಮೆಂಟ್‌ಗಳು ಬೀಳುತ್ತಲೇ ಇದ್ದು, ಸೋಷಿಯಲ್ ವಾರ್‌ಗೆ ಕಾರಣವಾಗುತ್ತಿದೆ. ಇನ್ನೊಂದು ಪೋಸ್ಟ್ ಪ್ರಕಾರ ಬೇಕಿದ್ದರೆ ಕೇರಳ ಮುಖ್ಯಮಂತ್ರಿ ಉಮ್ಮನ್ ಚಾಂಡಿಯನ್ನು ಉಚಿತವಾಗಿ ಪಡೆಯಿರಿ. ಆದರೆ ಯಾವುದೇ ಕಾರಣಕ್ಕೂ ಕೇರಳ ಕೆಆಸ್‌ಆರ್‌ಟಿಸಿ ಬಿಟ್ಟು ಕೊಡುವ ಪ್ರಶ್ನೆಯೇ ಉದ್ಬವಿಸುವುದಿಲ್ಲ ಎಂಬುದು ದಾಖಲಾಗಿದೆ.

ಬ್ರಾಂಡ್ ವಾರ್; ಕೆಎಸ್ಆರ್‌ಟಿಸಿ ಫೇ‌ಸ್‌ಬುಕ್ ಪುಟದಲ್ಲಿ 'ಮಲ್ಲು' ದಾಂಧಲೆ

ಒಟ್ಟಿನಲ್ಲಿ ಸೋಷಿಯಲ್ ನೆಟ್‌ವರ್ಕ್‌ನಲ್ಲಿ ಪ್ರಬಲರಾಗಿರುವ ಕೇರಳಗಿರ ಈ ಪೋಸ್ಟ್‌ಗಳಿಂದಾಗಿ ಎರಡು ರಾಜ್ಯಗಳ ನಡುವಣ ಸಂಬಂಧ ಹದೆಗೆಡದಿರಲಿ ಎಂಬುದೇ ನಮ್ಮ ಆಶಯವಾಗಿದೆ. ನೀವು ಕೂಡಾ ಕರ್ನಾಟಕ ಕೆಎಸ್‌ಆರ್‌ಟಿಸಿ ಅಧಿಕೃತ ಪುಟವನ್ನು ಇಲ್ಲಿ ಪರೀಶೀಲಿಸಬಹುದು.

 

English summary
Kerala, Karnataka starts legal war over use of the monogram 'KSRTC'

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark