ಮಹೀಂದ್ರ, ಟಾಟಾದಿಂದಲೂ ಬೆಲೆಯೇರಿಕೆ ಸಾಧ್ಯತೆ

Written By:

ಹೋಂಡಾ ಕಾರ್ಸ್ ಇಂಡಿಯಾ ಬೆನ್ನಲ್ಲೇ ದೇಶದ ಮುಂಚೂಣಿಯ ವಾಹನ ತಯಾರಕ ಸಂಸ್ಥೆಗಳಾದ ಮಹೀಂದ್ರ ಆಂಡ್ ಮಹೀಂದ್ರ ಹಾಗೂ ಟಾಟಾ ಮೋಟಾರ್ಸ್ ಸಂಸ್ಥೆಗಳು ಸಹ ಬೆಲೆಯೇರಿಕೆ ನೀತಿ ಅನುಸರಿಸುವ ಸಾಧ್ಯತೆಯಿದೆ.

ವರದಿಗಳ ಪ್ರಕಾರ ಹೋಂಡಾ ದರ ಏರಿಕೆ ನೀತಿಯು ಎಪ್ರಿಲ್ 1ರಂದು ಜಾರಿಗೆ ಬರಲಿದೆ. ಇದರ ಬೆನ್ನಲ್ಲೇ ಮಹೀಂದ್ರ ಹಾಗೂ ಟಾಟಾ ಸಹ ಇದೇ ಹಾದಿ ಅನುಸರಿಸುವ ಬಗ್ಗೆ ಗಂಭೀರ ಚಿಂತನೆಯಲ್ಲಿ ತೊಡಗಿದೆ ಎಂಬುದು ತಿಳಿದು ಬಂದಿದೆ.

To Follow DriveSpark On Facebook, Click The Like Button
tata bolt

ಹಾಗಿದ್ದರೂ ಎಷ್ಟು ಪ್ರಯಾಣದ ದರ ಏರಿಕೆ ಕಂಡುಬರಲಿದೆ ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿ ದೊರಕಿಲ್ಲ. ದೇಶದ ಅತಿದೊಡ್ಡ ವಾಹನ ತಯಾರಕ ಸಂಸ್ಥೆಯಾಗಿರುವ ಟಾಟಾ ಮೋಟಾರ್ಸ್ ಶೇಕಡಾ 1ರಿಂದ 2ರಷ್ಟು ದರ ಏರಿಕೆಗೊಳಿಸುವ ಸಾಧ್ಯತೆಯಿದೆ.

ಇಲ್ಲಿ ಆಸಕ್ತಿದಾಯಕ ವಿಚಾರವೆಂದರೆ ಕಳೆದ ತಿಂಗಳಷ್ಟೇ ಮಧ್ಯಂತರ ಬಜೆಟ್ ಮಂಡಿಸಿರುವ ಬೆನ್ನಲ್ಲೇ ಟಾಟಾ ಹಾಗೂ ಮಹೀಂದ್ರ ಸಂಸ್ಥೆಗಳು ರು. 45,000ರಿಂದ 49,000 ರು.ಗಳ ವರೆಗೆ ದರ ಇಳಿಕೆಗೊಳಿಸಿದ್ದವು.

English summary
To add to the bad news, it now turns out it is not just Honda, but also Mahindra and Tata Motors who are seriously considering a price hike.
Story first published: Tuesday, March 25, 2014, 15:05 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark