ಸದ್ಯದಲ್ಲೇ ಮಾರುತಿ ಸುಜುಕಿ ಸ್ವಿಫ್ಟ್ ಪರಿಷ್ಕೃತ ಆವೃತ್ತಿ ಬಿಡುಗಡೆ

Written By:

ದೇಶದ ಅತಿ ದೊಡ್ಡ ಪ್ರಯಾಣಿಕ ಕಾರು ತಯಾರಕ ಸಂಸ್ಥೆಯಾಗಿರುವ ಮಾರುತಿ ಸುಜುಕಿ, ಅತಿ ಶೀಘ್ರದಲ್ಲೇ ಮಾರುತಿ ಸುಜುಕಿ ಸ್ವಿಫ್ಟ್ ಪರಿಷ್ಕೃತ ಆವೃತ್ತಿಯನ್ನು ಬಿಡುಗಡೆಗೊಳಿಸಲಿದೆ. ದೇಶದ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಜನಪ್ರಿಯತೆ ಗಿಟ್ಟಿಸಿಕೊಂಡಿರುವ ಮಾರುತಿ ಸುಜುಕಿ ಸ್ವಿಫ್ಟ್ ಹೊಸ ಮಾದರಿಯಲ್ಲಿ ಕೆಲವೊಂದು ಕಾಸ್ಮೆಟಿಕ್ ಬದಲಾವಣೆ ಕಂಡಬರಲಿದೆ.

ಈ ಹ್ಯಾಚ್‌ಬ್ಯಾಕ್ ಕಾರಿನ ನೈಜತೆಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಹೊರ ಭಾಗದಲ್ಲಿ ಕೆಲವೊಂದು ಬದಲಾವಣೆಗಳು ಮಾತ್ರ ಕಂಡುಬರಲಿದೆ. ವರದಿಗಳ ಪ್ರಕಾರ, ಭಾರತದಲ್ಲಿ ಯುರೋಪ್ ಮಾದರಿಯು ಪರಿಚಯವಾಗಲಿದೆ.

ಅಂದರೆ ಈಗಿರುವ ಮಾದರಿಗಿಂತಲೂ ಹೆಚ್ಚು ಪ್ರೀಮಿಯಂ ವೈಶಿಷ್ಟ್ಯಗಳನ್ನು ಗಿಟ್ಟಿಸಿಕೊಳ್ಳಲಿದೆ. ಜೊತೆಗೆ 2014 ಮಾದರಿಯು ಅತ್ಯಾಕರ್ಷಕ ಮೈ ಬಣ್ಣದೊಂದಿಗೆ ಆಗಮನವಾಗಲಿದೆ. ಅಂತೆಯೇ ಕಾರಿನೊಳಗೆ ಹೊಸತಾದ ಟಚ್ ಸ್ಕ್ರೀನ್ ಮಾಹಿತಿ ಮನರಂಜನಾ ವ್ಯವಸ್ಥೆಯು ಹೆಚ್ಚು ಗ್ರಾಹಕ ಸ್ನೇಹಿ ಎನಿಸಿಕೊಳ್ಳಲಿದೆ.

ಮಾರುತಿ ಸುಜುಕಿ ಸ್ವಿಫ್ಟ್ ಮಾದರಿಯಲ್ಲಿ ಸ್ಟೈಲಿಷ್ ಅಲಾಯ್ ವೀಲ್ ಕಂಡುಬರಲಿದೆ. ಹಾಗೆಯೇ ಮುಂಭಾಗ ಹಾಗೂ ಹಿಂಭಾಗದಲ್ಲಿ ಬಂಪರ್ ಪರಿಷ್ಕರಣೆಯಾಗಲಿದೆ. ಇನ್ನುಳಿದಂತೆ ಎಲ್‌ಇಡಿ ಡೇಟೈಮ್ ರನ್ನಿಂಗ್ ಲೈಟ್ ಸಹ ಇರಲಿದೆ.

Maruti Suzuki Swift

ಹಾಗಿದ್ದರೂ ಎಂಜಿನ್ ಮಾನದಂಡಗಳಲ್ಲಿ ಯಾವುದೇ ಬದಲಾವಣೆ ಕಂಡುಬರುವುದಿಲ್ಲ. ಇದು ಹಿಂದಿನ ಆವೃತ್ತಿಗೆ ಸಮಾನವಾದ ಪೆಟ್ರೋಲ್ ಹಾಗೂ ಡೀಸೆಲ್ ಮಾದರಿಗಳನ್ನು ಹೊಂದಿರಲಿದೆ.

ಪ್ರಸಕ್ತ ಸಾಲಿನಲ್ಲಿ ಬಿಡುಗಡೆಯಾದ ಫೇಸ್‌ಲಿಫ್ಟ್ ಮಾದರಿಗಳು ಇಂತಿದೆ:

2014 ಫೋಕ್ಸ್‌ವ್ಯಾಗನ್ ಪೊಲೊ,

2014 ಫಿಯೆಟ್ ಪುಂಟೊ ಇವೊ,

ಹ್ಯುಂಡೈ ಎಲೈಟ್ ಐ20

English summary
Major four wheeler manufacturers have introduced facelifts and refreshed variants of their hatchback offering in India. However, it is surprising that Maruti Suzuki will be the last to introduce a refreshed model of its Swift hatchback for India.
Story first published: Wednesday, August 20, 2014, 12:46 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark