ಬೆಂಝ್ ಎಸ್ ಕ್ಲಾಸ್ ಡೀಸೆಲ್, ಜಿಎಲ್‌ಎ ಕ್ಲಾಸ್ ಬುಕ್ಕಿಂಗ್ ಆರಂಭ

Written By:

ಮುಂಬರುವ ಎಸ್ ಕ್ಲಾಸ್ ಡೀಸೆಲ್, ಎಸ್ 350 ಸಿಡಿಐ ಹಾಗೂ ಜಿಎಲ್‌ಎ ಕ್ಲಾಸ್ ಕ್ರಾಸೋವರ್ ಮಾದರಿಗಳ ಬುಕ್ಕಿಂಗ್ ಪ್ರಕ್ರಿಯೆಯನ್ನು ಮರ್ಸಿಡಿಸ್ ಬೆಝ್ ಆರಂಭಿಸಿದೆ.

ಎ ಕ್ಲಾಸ್ ಹ್ಯಾಚ್‌ಬ್ಯಾಕ್ ತಲಹದಿಯ ಜಿಎಲ್‌ಇ ಕ್ಲಾಸ್, ಫ್ರಂಟ್ ವೀಲ್ ಚಾಲನೆಯ ಹ್ಯಾಚ್‌ಬ್ಯಾಕ್ ಕಾರಾಗಿದೆ. ಜಿಎಲ್‌ಎ 220 ಸಿಡಿಐ, 2.0 ಲೀಟರ್ ಡೀಸೆಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದ್ದು, 167 ಅಶ್ವಶಕ್ತಿ ಉತ್ಪಾದಿಸಲಿದೆ. ಇದು ಎ ಕ್ಲಾಸ್ ಹ್ಯಾಚ್‌ಬ್ಯಾಕ್‌ನಲ್ಲಿರುವುದಕ್ಕೆ (107 ಬಿಎಚ್‌ಪಿ) ಸಮಾನವಾಗಿದೆ.

Mercedes Benz

ಮುಂಬರುವ ಹಬ್ಬದ ಆವೃತ್ತಿ ವೇಳೆ ಜಿಎಲ್‌ಇ ಕ್ಲಾಸ್ ಲಾಂಚ್ ಆಗಲಿದೆ. ಇದರ ಬುಕ್ಕಿಂಗ್ ದರ 50,000 ರು.ಗಳಾಗಿವೆ.

ಮರ್ಸಿಡಿಸ್ ಬೆಂಝ್ ಎಸ್ 500 ಪೆಟ್ರೋಲ್ ಹಾಗೂ ಎಸ್ ಕ್ಲಾಸ್ ಈಗಾಗಲೇ ದೇಶದಲ್ಲಿ ಮಾರಾಟದಲ್ಲಿದೆ. ಮುಂಬರುವ ಎಸ್ 350 ಸಿಡಿಐ, ಈ ಐಷಾರಾಮಿ ಸೆಡಾನ್ ಕಾರಿನ ಬೇಸ್ ವೆರಿಯಂಟ್ ಆಗಿ ಗುರುತಿಸಲ್ಪಡಲಿದೆ. ಇದು ತೆರಿಗೆ ರಹಿತವಾಗಿ 1.25 ಕೋಟಿ ರು.ಗಳಷ್ಟು ದುಬಾರಿಯಾಗುವ ಸಾಧ್ಯತೆಯಿದೆ.

ಜುಲೈ ಆರಂಭದಲ್ಲಿ ಬೆಂಝ್ ಎಸ್ 350 ಸಿಡಿಐ, ವಿತರಣೆ ಪ್ರಕ್ರಿಯೆ ಆರಂಭವಾಗುವ ನಿರೀಕ್ಷೆಯಿದ್ದು, 5 ಲಕ್ಷ ರು. ಪಾವತಿಸಿ ಬುಕ್ಕಿಂಗ್ ಮಾಡಿಸಿಕೊಳ್ಳಬಹುದಾಗಿದೆ.

English summary
Mercedes-Benz has started accepting bookings for two of its upcoming models - S-Class diesel/S 350 CDI and the GLA-Class crossover.
Story first published: Monday, May 26, 2014, 16:13 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark