ಭ್ರಷ್ಟ ಆರ್‌ಟಿಓಗೆ ಕಡಿವಾಣ; ಶೀಘ್ರದಲ್ಲೇ ಪರ್ಯಾಯ ವ್ಯವಸ್ಥೆ

By Nagaraja

ಪ್ರಾದೇಶಿಕ ಸಾರಿಗೆ ಕಚೇರಿಗಳಲ್ಲಿ (ಆರ್‌ಟಿಒ) ಭ್ರಷ್ಟತೆಯ ಪ್ರಮಾಣ ತೀವ್ರ ಸ್ವರೂಪ ಪಡೆದಿರುವುದರ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ಕೇಂದ್ರ ಸಾರಿಗೆ ಹಾಗೂ ಹೆದ್ದಾರಿ ಖಾತೆ ಸಚಿವ ನಿತಿನ್ ಗಡ್ಕರಿ, ಆರ್‌ಟಿಒ ಮುಟ್ಟುಗೋಲುಗೊಳಿಸಿ ಶೀಘ್ರದಲ್ಲೇ ಪರ್ಯಾಯ ವ್ಯವಸ್ಥೆ ಆಳವಡಿಸುವ ಬಗ್ಗೆ ಸೂಚನೆ ರವಾನಿಸಿದ್ದಾರೆ.

ಪ್ರಾದೇಶಿಕ ಸಾರಿಗೆ ಕಚೇರಿಗಳಲ್ಲಿ ಕಾನೂನು ಬಾಹಿರ ಚಟುವಟಿಕೆ ಹೆಚ್ಚಾಗುತ್ತಿದೆ. ಈ ನಿಟ್ಟಿನಲ್ಲಿ ಮುಂದಿನ ಸಂಸತ್ ಅಧಿವೇಶನದಲ್ಲಿ ಮೋಟಾರು ವಾಹನಗಳ ತಿದ್ದುಪಡಿ ಮಸೂದೆಯನ್ನು ಮಂಡಿಸಲಾಗುವುದು ಎಂದು ಗಡ್ಕರಿ ತಿಳಿಸಿದ್ದಾರೆ.

rto

ದೇಶದಲ್ಲಿ ಹಳೆಯ ಕಾನೂನುಗಳು ಹಾಗೂ ವ್ಯವಸ್ಥೆಗಳು ಜಾರಿಯಲ್ಲಿದ್ದು, ಅವುಗಳನ್ನು ವಿಸರ್ಜಿಸಬೇಕಾದ ಸಂದರ್ಭ ಬಂದಿದೆ. ಸದ್ಯ ಆರ್‌ಟಿಎ ಅಗತ್ಯ ಎದ್ದು ಕಾಣಿಸುತ್ತಿಲ್ಲ. ಇಂತಹ ಕೆಲವು ವ್ಯವಸ್ಥೆಗಳನ್ನು ಶೀಘ್ರದಲ್ಲೇ ರದ್ದುಗೊಳಿಸಲಾಗುವುದು. ಈ ನಿಟ್ಟಿನಲ್ಲಿ ದಕ್ಷ ಪರ್ಯಾಯ ವ್ಯವಸ್ಥೆ ಜಾರಿಗೆ ತರಲಾಗುವುದು ಎಂದು ಗಡ್ಕರಿ ವ್ಯಕ್ತಪಡಿಸಿದ್ದಾರೆ.

ಅಮೆರಿಕ, ಕೆನಡಾ, ಸಿಂಗಾಪುರ, ಜಪಾನ್ ಮತ್ತು ಬ್ರಿಟನ್‌ಗಳಂತಹ ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿರುವ ಮೋಟಾರು ವಾಹನಗಳ ಕಾಯ್ದೆಗಳನ್ನು ಅಭ್ಯಸಿಸಿ ಹೊಸ ಮಸೂದೆ ಸಿದ್ಧಪಡಿಸಲಾಗಿದೆ. ಹೆಚ್ಚು ಪಾರದರ್ಶಕವಾಗಿರುವ ಈ ವ್ಯವಸ್ಥೆಯು ಆರ್‌ಟಿಒದಲ್ಲಿರುವ ಭ್ರಷ್ಟಚಾರವನ್ನು ಕಿತ್ತೊಗೆಯುವುದು ಎಂಬುದಾಗಿ ಗಡ್ಕರಿ ಸೇರಿಸಿದರು.

ಆಧುನಿಕ ತಂತ್ರಜ್ಞಾನದೊಂದಿಗೆ ಕೂಡಿರುವ ಹೊಸ ಮಸೂದೆ ಆರ್‌ಟಿಒ ವ್ಯವಸ್ಥೆಗೆ ಬದಲಿಯಾಗಲಿದ್ದು, ಸಂಚಾರ ಉಲ್ಲಂಘನೆಯ ಮೇಲೆ ಪರಿಣಾಮಕಾರಿ ಎನಿಸಿಕೊಳ್ಳಲಿದೆ. ಹೊಸ ಕಾಯ್ದೆಯನ್ವಯ ನೀವು ಟ್ರಾಫಿಕ್ ಉಲ್ಲಂಘಿಸಿದರೆ ನಿಮ್ಮ ಮನೆಬಾಗಿಲಿಗೆ ನೋಟಿಸ್ ಬರಲಿದೆ. ಇದರ ವಿರುದ್ಧ ನೀವು ಕೋರ್ಟ್ ಮೆಟ್ಟಿಲೇರಿ ಪ್ರಕರಣ ಸೋತು ಹೋದ್ದಲ್ಲಿ ಮೂರು ಪಟ್ಟು ಹೆಚ್ಚು ದಂಡ ಕಟ್ಟಬೇಕಾಗುತ್ತದೆ ಎಂದವರು ವಿವರಿಸಿದರು.

Most Read Articles

Kannada
English summary
Nitin Gadkari to replace corrupt RTOs with new system
Story first published: Wednesday, August 20, 2014, 11:32 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X