ಪ್ಯೂಜೊದಿಂದ ಭವಿಷ್ಯದ ಎಸ್‌ಯುವಿ ಕಾನ್ಸೆಪ್ಟ್ ಪ್ರದರ್ಶನ

Written By:

ಫ್ರಾನ್ಸ್‌ನ ದೈತ್ಯ ಹಾಗೂ ಅತಿ ಜನಪ್ರಿಯ ವಾಹನ ಬ್ರಾಂಡ್‌ಗಳಲ್ಲಿ ಒಂದಾಗಿರು ಪ್ಯೂಜೊ ನಿರಂತರವಾಗಿ ವಾಹನ ಜಗತ್ತಿಗೆ ತನ್ನ ಕೊಡುಗೆ ನೀಡುತ್ತಲೇ ಬಂದಿದೆ. ಇದೀಗ ಈ ಐಕಾನಿಕ್ ಸಂಸ್ಥೆಯು ಭವಿಷ್ಯದ ಎಸ್‌ಯುವಿ ಪರಿಕಲ್ಪನೆಯೊಂದಿಗೆ ಮುಂದೆ ಬಂದಿದೆ.

2014 ಪ್ಯಾರಿಸ್ ಮೋಟಾರು ಶೋದಲ್ಲಿ ಅಧಿಕೃತವಾಗಿ ತನ್ನ ಹೊಸ ಎಸ್‌ಯುವಿ ಕಾನ್ಸೆಪ್ಟ್ ಪ್ರದರ್ಶಿಸಲಿರುವ ಪ್ಯೂಜೊ ಇದಕ್ಕೆ ಕ್ವಾರ್ಟ್ಜ್ ಎಂಬ ಕೋಡ್ ಹೆಸರು ನೀಡಿದೆ.

ಈ ಸಂಬಂಧ ವಿನೂತನ ಕಾನ್ಸೆಪ್ಟ್ ಚಿತ್ರವನ್ನು ಸಂಸ್ಥೆ ಬಿಡುಗಡೆ ಮಾಡಿದೆ. ತನ್ನ ಸಲೂನ್ (ಸೆಡಾನ್) ಮಾದರಿಯ ವಾಹನದಿಂದ ಈ ಕಾನ್ಸೆಪ್ಟ್ ಆರಿಸಲಾಗಿದೆ. ಅಲ್ಲದೆ ಖರೀದಿಗಾರರ ಬೇಡಿಕೆಗಳಿಗೆ ಆದ್ಯತೆಯನ್ನು ಕೊಡಲಾಗಿದೆ.

ಒಟ್ಟಿನಲ್ಲಿ ಹೈ ಎಂಡ್ ಕಾರುಗಳ ಸಾಲಿನಲ್ಲಿ ಪ್ಯೂಜೊ ಹೊಸ ಮೈಲುಗಲ್ಲು ಸ್ಥಾಪಿಸುವ ಸ್ಪಷ್ಟ ಇರಾದೆ ಹೊಂದಿದೆ. ಹಾಗೆಯೇ ಇದಕ್ಕಾಗಿ 1.6 ಲೀಟರ್ ಟಿಎಚ್‌ಪಿ 270 ಎಂಜಿನ್ ಅಭಿವೃದ್ಧಿಪಡಿಸುವ ಯೋಜನೆ ಹೊಂದಿದೆ. ಇದರ ನಾಲ್ಕು ಸಿಲಿಂಡರ್ ಎಂಜಿನ್ 170 ಅಶ್ವಶಕ್ತಿ ಹಾಗೂ 330 ಎನ್‌ಎಂ ಟಾರ್ಕ್ ಉತ್ಪಾದಿಸಲಿದೆ.

Peugeot Quartz Concept

ಇನ್ನು ವಿಶೇಷವಾದ ಸಂಗತಿ ಏನೆಂದರೆ ಪ್ಯೂಜೊ ಭವಿಷ್ಯದ ಎಸ್‌ಯುವಿ ಕಾನ್ಸೆಪ್ಟ್‌ನಲ್ಲಿ ಎಲೆಕ್ಟ್ರಿಕ್ ಮೋಟಾರು ಸಹ ಇರಲಿದೆ. ಇದು ಡೈರಕ್ಟ್ ಡ್ರೈವ್ 85ಕೆಡಬ್ಲ್ಯು ಎಲೆಕ್ಟ್ರಿಕ್ ಮೋಟಾರು ಪಡೆಯಲಿದೆ.

English summary
French automobile manufacturer Peugeot has been developing their future SUV codenamed the Quartz. It is still in the concept phase and will be officially showcased at the upcoming 2014 Paris Motor Show. They have revealed to us the pictures of their concept SUV.
Story first published: Thursday, September 18, 2014, 16:51 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark