ಮುಂದಿನ ತಿಂಗಳಲ್ಲಿ 2014 ಸ್ಕೋಡಾ ಯೆಟಿ ಎಸ್‌ಯುವಿ ಲಾಂಚ್

Written By:

ಜೆಕ್ ಗಣರಾಜ್ಯ ಮೂಲದ ವಾಹನ ತಯಾರಕ ಸಂಸ್ಥೆಯಾಗಿರುವ ಸ್ಕೋಡಾ, ಭಾರತಕ್ಕೆ ನೂತನ ಯೆಟಿ ಕ್ರೀಡಾ ಬಳಕೆಯ ವಾಹನವನ್ನು (ಎಸ್‌ಯುವಿ) ಪರಿಚಯಿಸಲಿದೆ. ಸದ್ಯ ಬಂದಿರುವ ಮಾಹಿತಿಗಳ ಪ್ರಕಾರ ಸ್ಕೋಡಾ ಯೆಟಿ 2014 ಜುಲೈ ತಿಂಗಳಲ್ಲಿ ಲಾಂಚ್ ಆಗಲಿದೆ.

2014 ಫೆಬ್ರವರಿ ತಿಂಗಳಲ್ಲಿ ನಡೆದ ಆಟೋ ಎಕ್ಸ್ ಪೋದಲ್ಲಿ ಬಹುನಿರೀಕ್ಷಿತ 2014 ಸ್ಕೋಡಾ ಯೆಟಿ ಎಸ್‌ಯುವಿ ಮಾದರಿಯನ್ನು ಸಂಸ್ಥೆಯು ಅನಾವರಣಗೊಳಿಸಿತ್ತು. ತದಾ ಸಮಯದಲ್ಲೇ ಭಾರತಕ್ಕೆ ಪ್ರಸಕ್ತ ಸಾಲಿನಲ್ಲೇ ಪರಿಚಯಿಸುವ ಬಗ್ಗೆ ಯೋಜನೆ ಪ್ರಕಟಿಸಲಾಗಿತ್ತು. ಈ ಹಿಂದೆ ಭಾರತಕ್ಕೆ ಪರಿಚಯವಾಗಿದ್ದ ಸ್ಕೋಡಾ ಯೆಟಿ ಹೆಚ್ಚಿನ ಅಪ್‌ಗ್ರೇಡ್‌ಗೊಂಡಿರಲಿಲ್ಲ. ಹಾಗಾಗಿ ಹೊಸ ಯೆಟಿಯೊಂದಿಗೆ ಗ್ರಾಹಕರ ನಿರೀಕ್ಷೆ ಮುಟ್ಟುವ ನಂಬಿಕೆಯನ್ನು ಸ್ಕೋಡಾ ಹೊಂದಿದೆ.

Skoda

ಹಾಗಿದ್ದರೂ ಹೊಸ ತಲೆಮಾರಿನ ಸ್ಕೋಡಾ ಯೆಟಿ ಎಸ್‌ಯುವಿ ಎಂಜಿನ್ ಮಾನದಂಡಗಳಲ್ಲಿ ಯಾವುದೇ ವ್ಯತ್ಯಾಸವಿರುವುದಿಲ್ಲ. ಜೆಕ್ ಗಣರಾಜ್ಯ ರಾಷ್ಟ್ರವು ಇದರಲ್ಲಿ ಆಲ್ ವೀಲ್ ಡ್ರೈವ್ ಜತೆ ಫ್ರಂಟ್ ವೀಲ್ ಡ್ರೈವ್ ಒದಗಿಸಲಿದೆ. ಇದರ ಆಲ್ ವೀಲ್ ಡ್ರೈವ್ 138 ಅಶ್ವಶಕ್ತಿ (320 ಎನ್‌ಎಂ ಟಾರ್ಕ್) ಉತ್ಪಾದಿಸುವ 2.0 ಲೀಟರ್ ಡೀಸೆಲ್ ಎಂಜಿನ್‌ನಿಂದ ನಿಯಂತ್ರಿಸ್ಪಡಲಿದೆ. ಹಾಗೆಯೇ ಫ್ರಂಟ್ ವೀಲ್ ಡ್ರೈವ್, 2.0 ಲೀಟರ್ ಎಂಜಿನ್ (108 ಅಶ್ವಶಕ್ತಿ, 250 ಎನ್‌ಎಂ ಟಾರ್ಕ್) ಉತ್ಪಾದಿಸಲಿದೆ. ಆದರೆ ಪೆಟ್ರೋಲ್ ವರ್ಷನ್ ಲಭ್ಯವಾಗಿರುವುದಿಲ್ಲ.

ಇನ್ನು ಹಿಂದಿನ ಮಾದರಿಯನ್ನು ಹೋಲಿಸಿದಾಗ ವಿನ್ಯಾಸದಲ್ಲೂ ಗಮನಾರ್ಹ ಬದಲಾವಣೆ ತರಲಾಗಿದ್ದು, ಆಯಾತಕಾರದ ಹೆಡ್‌ಲೈಟ್ ಜತೆ ಬೈ-ಕ್ಸೆನಾನ್, ಎಲ್‌ಇಡಿ ಡೇಟೈಮ್ ರನ್ನಿಂಗ್ ಲೈಟ್, ಹೊಸತಾದ ಫಾಗ್ ಲ್ಯಾಂಪ್ ಮತ್ತು ಫ್ರಂಟ್ ಗ್ರಿಲ್ ಪಡೆದುಕೊಳ್ಳಲಿದೆ. ಹಾಗೆಯೇ ಹಿಂದುಗಡೆ ಸಿ ಆಕಾರದ ಟೈಲ್ ಲ್ಯಾಂಪ್ ಪಡೆಯಲಿದ್ದು, ಎಲ್‌ಇಡಿ ಐಚ್ಛಿಕವಾಗಿರಲಿದೆ.

ಬಲ್ಲ ಮೂಲಗಳ ಪ್ರಕಾರ ಅನೇಕ ಬಣ್ಣಗಳಲ್ಲಿ ಲಭ್ಯವಾಗಲಿರುವ ಸ್ಕೋಡಾ ಯೆಟಿ 17 ಲಕ್ಷ ರು.ಗಳಷ್ಟು ದುಬಾರಿಯೆನಿಸಲಿದೆ. ಇದೀಗ ನಿಮ್ಮ ಅನಿಸಿಕೆಗಳನ್ನು ನಮ್ಮ ಜೊತೆ ಹಂಚಿಕೊಳ್ಳಿರಿ...

English summary
The Czech Republic manufacturer of automobiles Skoda has decided to introduce the new Yeti SUV in India. They plan to launch the SUV somewhere in July, 2014.
Story first published: Wednesday, June 11, 2014, 11:49 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark