ಜಿನೆವಾದಲ್ಲಿ ಸ್ಕೋಡಾ ವಿಷನ್ ಸಿ ಕಾನ್ಸೆಪ್ಟ್

Written By:

ಪ್ರತಿಷ್ಠಿತ ಜಿನೆವಾ ಮೋಟಾರು ಶೋ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಇದರಂತೆ ಈ ಪ್ರಖ್ಯಾತ ಮೋಟಾರು ಶೋದಲ್ಲಿ ತನ್ನ ನೂತನ ವಿಷನ್ ಸಿ ಕಾನ್ಸೆಪ್ಟ್ ಪ್ರದರ್ಶಿಸುತ್ತಿರುವುದಾಗಿ ಸ್ಕೋಡಾ ವಾಹನ ತಯಾರಕ ಸಂಸ್ಥೆ ಪ್ರಕಟಿಸಿದೆ.

ಇದರಂತೆ ಈ ಚೆಕ್ ಗಣರಾಜ್ಯ ರಾಷ್ಟ್ರವು ಐದು ಬಾಗಿಲುಗಳ ಕೂಪೆ ವಿನ್ಯಾಸದ ಟೀಸರ್ ಚಿತ್ರವನ್ನು ಬಿಡುಗಡೆಗೊಳಿಸಿದೆ. ಸ್ಪೋರ್ಟಿ ಡಿಸೈನ್ ತತ್ವಶಾಸ್ತ್ರದಲ್ಲಿ ನೂತನ ಕಾರಿನ ವಿನ್ಯಾಸ ರೂಪಿಸಲಾಗಿದೆ.

ಪ್ರಸ್ತುತ ಕಾರು ಮುಂದಿನ ದಿನಗಳಲ್ಲಿ ತಮ್ಮ ಬ್ರಾಂಡ್ ಇಮೇಜ್ ಬದಲಾಯಿಸುವ ಭರವಸೆಯನ್ನು ಸ್ಕೋಡಾ ವ್ಯಕ್ತಪಡಿಸಿದೆ. ಮುಂಭಾಗದಲ್ಲಿ ಆಕ್ರಮಣಕಾರಿ ವಿನ್ಯಾಸ ಪಡೆದುಕೊಂಡಿರುವ ಸ್ಕೋಡಾ ಭವಿಷ್ಯದತ್ತ ದಿಟ್ಟ ಹೆಜ್ಜೆಯನ್ನಿಡುತ್ತಿದೆ.

ಇನ್ನು ವಿಷನ್ ಸಿ ಕಾನ್ಸೆಪ್ಟ್ ಕಾರು ಸಿಎನ್‌ಜಿ-ಪೆಟ್ರೋಲ್ ಟರ್ಬೊ 1.4 ಟಿಎಸ್‌ಐ ಎಂಜಿನ್ ಹೊಂದಿರುವ ಸಾಧ್ಯತೆಯಿದೆ. ಇದು ಹೆಚ್ಚು ಪರಿಸರ ಸ್ನೇಹಿಯಾಗಿರಲಿದೆ.

Skoda Vision C concept
English summary
The Geneva Motor Show is round the corner and Skoda has confirmed it will reveal their Vision C. The Czech manufacturer has teased us with images of a 5-door coupe design.
Story first published: Friday, February 28, 2014, 14:36 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark