ಫೋಕ್ಸ್‌ವ್ಯಾಗನ್ ಮುಡಿಗೆ 'ವರ್ಷದ ಎಂಜಿನ್' ಗೌರವ

By Nagaraja

ಇದು ಟರ್ಬೊ ಪೆಟ್ರೋಲ್ ಎಂಜಿನ್‌ಗಳ ಕಾಲ ಅನಿಸುತ್ತಿದೆ. ಇತ್ತೀಚೆಗಷ್ಟೇ ಫೋರ್ಡ್ ಇಕೊಬೂಸ್ಟ್ ವರ್ಷದ ಎಂಜಿನ್ 2014 ಪ್ರಶಸ್ತಿಗೆ ಅರ್ಹವಾಗಿರುವ ಬಗ್ಗೆ ವರದಿ ಮಾಡಿದ್ದೆವು. ಇದರ ಬೆನ್ನಲ್ಲೇ ಫೋಕ್ಸ್‌ವ್ಯಾಗನ್ 1.4 ಟಿಎಸ್‌ಐ ಅಂತರಾಷ್ಟ್ರೀಯ ವರ್ಷದ ಎಂಜಿನ್ 2014 ಪ್ರಶಸ್ತಿಗೆ ಭಾಜವಾಗಿದೆ.

ಈ ಮೂಲಕ 1.0-1.4 ಲೀಟರ್ ವಿಭಾಗದಲ್ಲಿ ಫೋಕ್ಸ್‌ವ್ಯಾಗನ್ ಸತತ ಒಂಬತ್ತನೇ ಬಾರಿಗೆ ಈ ಸಾಧನೆ ಮಾಡಿದಂತಾಗಿದೆ. ಫೋಕ್ಸ್‌ವ್ಯಾಗನ್ ಜನಪ್ರಿಯ ಆವೃತ್ತಿಗಳಾದ ಬೀಟ್ಲ್, ಜೆಟ್ಟಾ, ಟೈಗನ್, ಪೊಲೊ ಹಾಗೂ ಪಸ್ಸಾಟ್ ಆವೃತ್ತಿಗಳಲ್ಲಿ ಈ ಎಂಜಿನ್ ಬಳಕೆಯಾಗುತ್ತಿದೆ.

Volkswagen

ಫೋಕ್ಸ್‌ವ್ಯಾಗನ್ ಟಿಎಸ್‌ಐ ಎಂಜಿನ್ ಎರಡು ವರೆಯಂಟ್‌ಗಳಲ್ಲಿ ಲಭ್ಯವಿದ್ದು, ಅನುಕ್ರಮವಾಗಿ 90 ಹಾಗೂ 300 ಪಿಎಸ್ ಪವರ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.

ಇಂಟರ್ ನ್ಯಾಷನಲ್ ಎಂಜಿನ್ ಆಫ್ ದಿ ಇಯರ್ ಪ್ರಶಸ್ತಿ ಪ್ಯಾನೆಲ್‌ನಲ್ಲಿ 80ಕ್ಕೂ ಹೆಚ್ಚು ಪ್ರತ್ರಕರ್ತರಿದ್ದು, ಜಾಗತಿಕವಾಗಿ ವಿಧದ ವಿಭಾಗಗಳಲ್ಲಾಗಿ ಪ್ರಶಸ್ತಿಯನ್ನು ಆರಿಸುತ್ತದೆ. ಅಲ್ಲದೆ ವೈಯಕ್ತಿಕ ಚಾಲನೆ, ಇಂಧನ ಕ್ಷಮತೆ ನಿಖರವಾಗಿ ಗಮನಿಸುವ ಮೂಲಕ ಪ್ರಶಸ್ತಿಗೆ ಆಯ್ಕೆ ಮಾಡುತ್ತದೆ.

Most Read Articles

Kannada
English summary
Volkswagen received the esteemed "Engine of The Year Award" again for its 1.4-litre TSI engine. Being awarded the honour for the ninth time in a row for the 1.0 to 1.4-litre category, the engine sets new standards in engine building technology.
Story first published: Thursday, July 3, 2014, 14:13 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X