ಟಾಟಾ ಕಾರುಗಳ ಮಾರಾಟಕ್ಕೆ ಚುರುಕು ಮುಟ್ಟಿಸಿದ ಜೆಸ್ಟ್

ದೇಶದ ಅತಿ ದೊಡ್ಡ ವಾಹನ ತಯಾರಕ ಸಂಸ್ಥೆಯಾಗಿರುವ ಟಾಟಾ ಮೋಟಾರ್ಸ್ ಇತ್ತೀಚೆಗಷ್ಟೇ ಜೆಸ್ಟ್ ಕಾಂಪಾಕ್ಟ್ ಸೆಡಾನ್ ಕಾರನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಿತ್ತು. ಇದು ಮಾರಾಟದಲ್ಲಿ ಪ್ರತಿಫಲಿಸುವಲ್ಲಿ ನೆರವಾಗಿದೆ. [ಟಾಟಾ ಜೆಸ್ಟ್ ಪುಟಕ್ಕೆ ಭೇಟಿ ಕೊಡಿ]

ಒಂದು ತಿಂಗಳ ಹಿಂದೆ ಬಿಡುಗಡೆಯಾದ ಜೆಸ್ಟ್ 2014 ಆಗಸ್ಟ್ ತಿಂಗಲಲ್ಲಿ ಒಟ್ಟು 2671 ಯುನಿಟ್ ಬುಕ್ಕಿಂಗ್ ದಾಖಲಿಸಿದೆ. ಅಲ್ಲದೆ ಟಾಟಾ ಪಾಲಿನ ಅತಿ ಹೆಚ್ಚು ಮಾರಾಟವಾದ ಕಾರೆಂಬ ಹೆಗ್ಗಳಿಗೆಕೂ ಪಾತ್ರವಾಗಿದೆ.

tata zest

ಈ ಮೂಲಕ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿರುವ ಮೊದಲ ತಿಂಗಳಲ್ಲಿ ಜೆಸ್ಟ್ ಮೋಡಿ ಮಾಡಿದೆ. ಹೊಸ ತಂತ್ರಜ್ಞಾನಗಳೊಂದಿಗೆ ಟಾಟಾ ಜೆಸ್ಟ್ ಕಾಂಪಾಕ್ಟ್ ಕಾರನ್ನು ಮಾರುಕಟ್ಟೆಗೆ ಪರಿಚಯಿಸಿದ್ದ ಟಾಟಾ ಸಂಸ್ಥೆಯು ಅನೇಕ ನಿರೀಕ್ಷೆಗಳನ್ನು ಇಟ್ಟುಕೊಂಡಿತ್ತು.

ವರದಿಗಳ ಪ್ರಕಾರ ಜೆಸ್ಟ್ ಈಗಾಗಲೇ 10,000 ಬುಕ್ಕಿಂಗ್‌ಗಿಂತಲೂ ಹೆಚ್ಚು ಬುಕ್ಕಿಂಗ್ ಗಿಟ್ಟಿಸಿಕೊಂಡಿದ್ದು, ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಆಗಸ್ಟ್ 12ರಂದು ಬಿಡುಗಡೆಯಾಗಿದ್ದ ಜೆಸ್ಟ್ ಇದುವರೆಗೆ 2671 ಯುನಿಟ್ ಮಾರಾಟವಾಗಿದ್ದು, ಮುಂಬರುವ ಹಬ್ಬದ ಆವೃತ್ತಿಯಲ್ಲಿ ಈ ಸಂಖ್ಯೆ ಇನ್ನಷ್ಟು ಹೆಚ್ಚುವುದು ಖಚಿತವಾಗಿದೆ.

ಟಾಟಾ ಜೆಸ್ಟ್‌ನಲ್ಲಿ ಆಳವಡಿಸಲಾಗಿರುವ ರೆವೊಟ್ರಾನ್ ಪೆಟ್ರೋಲ್ ವೆರಿಯಂಟ್ ಕಾಯುವಿಕೆ ಅವಧಿ 4ರಿಂದ 6 ವಾರಗಳಷ್ಟು ವೃದ್ಧಿಸಿದಿ. ಇನ್ನೊಂದೆಡೆ ಆಟೋಮ್ಯಾಟಿಕ್ ವೆರಿಯಂಟ್‌ಗೆ ಇನ್ನು ಹೆಚ್ಚಿನ ಬೇಡಿಕೆ ಕಂಡುಬಂದಿದ್ದು, ವೇಟಿಂಗ್ ಪಿರೀಡ್ 3ರಿಂದ 4 ತಿಂಗಳ ವರೆಗೆ ವರ್ಧಿಸಿದೆ.

ಹೋಂಡಾ ಅಮೇಜ್, ಮಾರುತಿ ಸ್ವಿಫ್ಟ್ ಡಿಜೈರ್ ಮತ್ತು ಹ್ಯುಂಡೈ ಎಕ್ಸ್‌ಸೆಂಟ್‌ಗಳಂತಹ ಮಾದರಿಗಳೊಂದಿಗೆ ನೇರ ಪೈಪೋಟಿ ನಡೆಸುತ್ತಿರುವ ಟಾಟಾ ಜೆಸ್ಟ್ ಸ್ಪರ್ಧಾತ್ಮಕ ದರಗಳಲ್ಲಿ ಬಿಡುಗಡೆಗೊಳಿಸಲಾಗಿತ್ತು.

Most Read Articles

Kannada
English summary
All new Zest compact sedan has become the best selling Tata car for the month August, 2014 registering sales of 2671 units.
Story first published: Friday, September 12, 2014, 14:23 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X