ಫೋಕ್ಸ್‌ವ್ಯಾಗನ್ ಎಲೆಕ್ಟ್ರಿಕ್ ಕಾರು 'ಇ-ಗಾಲ್ಫ್' ಹೇಗೆ ಭಿನ್ನ?

Written By:

ವಿಶ್ವದ ಮುಂಚೂಣಿಯ ವಾಹನ ತಯಾರಕ ಸಂಸ್ಥೆಯಾಗಿರುವ ಫೋಕ್ಸ್‌ವ್ಯಾಗನ್, ನೂತನ ಇ-ಗಾಲ್ಫ್ ವಿದ್ಯುತ್ ಚಾಲಿತ ಕಾರನ್ನು ಅನಾವರಣಗೊಳಿಸಿದೆ. ಅಲ್ಲದೆ 2015ರ ಸಾಲಿನಲ್ಲಿ ಈ ಮಹತ್ವಕಾಂಕ್ಷಿ ಕಾರನ್ನು ಲಾಂಚ್ ಮಾಡುವ ಇರಾದೆ ಹೊಂದಿದೆ.

ನಿಮ್ಮ ಮಾಹಿತಿಗಾಗಿ, ಫೋಕ್ಸ್‌ವ್ಯಾಗನ್ ಇ-ಗಾಲ್ಫ್ ಕಾರಲ್ಲಿ ಹೈಬ್ರಿಡ್ ತಂತ್ರಗಾರಿಕೆ ಆಳವಡಿಸಲಾಗುವುದಿಲ್ಲ. ಬದಲಾಗಿ ಇಂದೊಂದು ಪಕ್ಕಾ ವಿದ್ಯುತ್ ಚಾಲಿತ ಕಾರು. ನೂತನ ಫೋಕ್ಸ್ ಇ-ಗಾಲ್ಫ್ ಕಾರು, ನಿಸ್ಸಾನ್ ಲೀಫ್ ಹಾಗೂ ಫೋರ್ಡ್, ಷೆವರ್ಲೆ ಸ್ಪಾರ್ಕ್, ಫಇಯೆಟ್ 500ಇ ಹಾಗೂ ಹೋಂಡಾ ಫಿಟ್ ಎಲೆಕ್ಟ್ರಿಕ್ ಕಾರಿನ ಜತೆ ಸ್ಪರ್ಧಿಸಲಿದೆ.

ಅಂದ ಹಾಗೆ ಫೋಕ್ಸ್‌ವ್ಯಾಗನ್ ಇ-ಗಾಲ್ಫ್ 22.4 ಕೆಡಬ್ಲ್ಯುಎಚ್ ಲಿಥಿಯಂ ಇಯಾನ್ ಬ್ಯಾಟರಿ ಹೊಂದಿರಲಿದ್ದು, 114 ಅಶ್ವಶಕ್ತಿ ಉತ್ಪಾದಿಸುವ ಸಾಮರ್ಥ್ಯ ಹೊಂದಿರಲಿದೆ. ಸದ್ಯ ಇದು ಯುರೋಪ್ ಮಾದರಿಯಲ್ಲಿ ಅಲಭ್ಯವಿದ್ದು, ಮುಂದಕ್ಕೆ ಭಾರತದಲ್ಲೂ ಪರಿಚಯವಾಗುವ ಸಾಧ್ಯತೆಯಿದೆ.

To Follow DriveSpark On Facebook, Click The Like Button
ಫೋಕ್ಸ್‌ವ್ಯಾಗನ್ ಎಲೆಕ್ಟ್ರಿಕ್ ಕಾರು 'ಇ-ಗಾಲ್ಫ್' ಹೇಗೆ ಭಿನ್ನ?

ನೂತನ ಫೋಕ್ಸ್‌ವ್ಯಾಗನ್ ಇ-ಗಾಲ್ಫ್ 2015ನೇ ಸಾಲಿನಲ್ಲಿ ಲಾಂಚ್ ಆಗಲಿದೆ. ಸಂಪೂರ್ಣ ವಿದ್ಯುತ್ ಚಾಲಿತ ಕಾರಾಗಿರುವ ಫೋಕ್ಸ್‌ವ್ಯಾಗನ್ ಗಾಲ್ಫ್ 2014 ಜಿನೆವಾ ಮೋಟಾರು ಶೋದಲ್ಲಿ ಅನಾವರಣಗೊಳಿಸಲಾಗಿತ್ತು.

ಫೋಕ್ಸ್‌ವ್ಯಾಗನ್ ಎಲೆಕ್ಟ್ರಿಕ್ ಕಾರು 'ಇ-ಗಾಲ್ಫ್' ಹೇಗೆ ಭಿನ್ನ?

ನೂತನ ಫೋಕ್ಸ್‌ವ್ಯಾಗನ್ ಇ-ಗಾಲ್ಫ್ ವಿದ್ಯುತ್ ಚಾಲಿತ ಕಾರು ಸಿ ಆಕಾರದ ಡೇಟೈಮ್ ರನ್ನಿಂಗ್ ಲೈಟ್ಸ್ ಪಡೆದುಕೊಂಡಿದೆ. ಇನ್ನು ಫೋಕ್ಸ್‌ವ್ಯಾಗನ್ ಲಾಂಛನ ವಿಶೇಷವಾಗಿ ಎದ್ದು ಕಾಣಿಸುವ ನಿಟ್ಟಿನಲ್ಲಿ ಕೆಳಮುಖವಾಗಿ ನೀಲಿ ಲಂಬ ರೇಖೆ ಕೊಡಲಾಗಿದೆ.

ಫೋಕ್ಸ್‌ವ್ಯಾಗನ್ ಎಲೆಕ್ಟ್ರಿಕ್ ಕಾರು 'ಇ-ಗಾಲ್ಫ್' ಹೇಗೆ ಭಿನ್ನ?

ಮೇಲ್ನೋಟಕ್ಕೆ ಫೋಕ್ಸ್‌ವ್ಯಾಗನ್ ಇ-ಗಾಲ್ಫ್ ಕಾರು, ಇತರ ಗಾಲ್ಫ್ ಮಾದರಿಗಳಂತೆಯೇ ಗೋಚರಿಸುತ್ತಿದ್ದರೂ, ಅತ್ಯಾಧುನಿಕ ತಂತ್ರಾಂಶಗಳನ್ನು ಒಳಗೊಂಡಿರಲಿದೆ. ಅಲ್ಲದೆ ಏರೋಡೈನಾಮಿಕ್ ಚಕ್ರಗಳು ಇವೆರಡು ನಡುವಣ ವ್ಯತ್ಯಾಸವನ್ನು ಎತ್ತಿ ಹಿಡಿಯಲಿದೆ.

ಫೋಕ್ಸ್‌ವ್ಯಾಗನ್ ಎಲೆಕ್ಟ್ರಿಕ್ ಕಾರು 'ಇ-ಗಾಲ್ಫ್' ಹೇಗೆ ಭಿನ್ನ?

ಹೊಸ ಟ್ರೆಂಡ್‌ಗೆ ಅನುಗುಣವಾಗಿ ಟ್ರೆಂಡಿ ಟೈಲ್‌ಲ್ಯಾಂಪ್ ಜತೆ ಎಲ್‌ಇಡಿ ಲೈಟ್ಸ್ ನೋಡಬಹುದಾಗಿದೆ. ಇನ್ನು ಹೆಸರಲ್ಲೇ ಸೂಚಿಸಿರುವಂತೆಯೇ ಎಲೆಕ್ಟ್ರಿಕ್ ಕಾರಾಗಿದ್ದರಿಂದ ಎಕ್ಸಾಸ್ಟ್‌ನ ಅಗತ್ಯವಿರುವುದಿಲ್ಲ.

ಫೋಕ್ಸ್‌ವ್ಯಾಗನ್ ಎಲೆಕ್ಟ್ರಿಕ್ ಕಾರು 'ಇ-ಗಾಲ್ಫ್' ಹೇಗೆ ಭಿನ್ನ?

ಒಟ್ಟಿನಲ್ಲಿ ಸಾಂಪ್ರದಾಯಿಕ ವಿನ್ಯಾಸವನ್ನು ಕಾಪಾಡಿಕೊಳ್ಳುವಲ್ಲಿ ಫೋಕ್ಸ್‌ವ್ಯಾಗನ್ ಯಶಸ್ಸನ್ನು ಕಂಡಿದೆ. ಅಲ್ಲದೆ ಎಲೆಕ್ಟ್ರಿಕ್ ಮೋಟಾರು ಹೊಂದಿರುವ ಹೊರತಾಗಿಯೂ 10.4 ಸೆಕೆಂಡುಗಳಲ್ಲಿ ಗಂಟೆಗೆ 0-100 ಕೀ.ಮೀ. ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿರಲಿದೆ.

English summary
Volkswagen has revealed to us their new electric car the E-Golf, which they plan to launch in the coming year of 2015.
Story first published: Thursday, March 20, 2014, 13:56 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark