1964 ಫೆರಾರಿ 250 ಎಲ್‌ಎಂ ಬರೋಬ್ಬರಿ 60 ಕೋಟಿಗೆ ಹರಾಜು

By Nagaraja

ಯಾವತ್ತೂ ವಿಂಟೇಜ್ ಹಾಗೂ ಕ್ಲಾಸಿಕ್ ಕಾರುಗಳಿಗೆ ಮಾರುಕಟ್ಟೆಯಲ್ಲಿ ಅತಿ ಹೆಚ್ಚಿನ ಬೇಡಿಕೆಯಿರುತ್ತದೆ. ಶ್ರೀಮಂತರು ತಮ್ಮ ಜೀವನ ಶೈಲಿಯ ಭಾಗವಾಗಿ ಇಂತಹ ಕಾರುಗಳನ್ನು ತಮ್ಮದಾಗಿಸಲು ಬಯಸುತ್ತಾರೆ.

ಇಂತಹದೊಂದು ಸುದ್ದಿ ಈಗ ವರದಿಯಾಗಿದೆ. ಇತ್ತೀಚೆಗಷ್ಟೇ ನಡೆದ ಆರ್‌ಎಂ ಅರಿಜೋನಾ ಹರಾಜು ಮೇಳ (RM Auctions of Arizona) ಹಲವಾರು ಕಾರಣಗಳಿಂದಾಗಿ ಗಮನಸೆಳೆದಿತ್ತು.

Ferrari 250 LM

ಅಂತೆಗೆ 1964ನೇ ಇಸವಿಯ ಫೆರಾರಿ 250 ಎಲ್ಎಂ ಮಾದರಿಯು ಬರೋಬ್ಬರಿ 60 ಕೋಟಿ ರು.ಗಳಿಗೆ ಮಾರಾಟವಾಗಿದೆ. ಇದೇ ವೇಳೆ ಹರಾಜಿನಲ್ಲಿದ್ದ 1966 ಫೆರಾರಿ 275 ಜಿಟಿಎಸ್ ಅಂದಾಜು 15 ಕೋಟಿ ಹಾಗೂ 1984 ಫೆರಾರಿ 288 ಜಿಟಿಒ ಮಾದರಿಯು 17 ಕೋಟಿ ರು.ಗಳಿಗೆ ಮಾರಾಟವಾಗಿದೆ.

ಉಳಿದಂತೆ ಆಡಿ ಸ್ಪೋರ್ಟ್ಸ್ ಕ್ವಾಟ್ರೊ 2.5 ಕೋಟಿ ರು. 1969 ಪೋರ್ಷೆ 911 ಎಸ್ ಸಾಫ್ಟ್ ವಿಂಡೋ ಟಾರ್ಗಾ ಮಾದರಿಯು 1.8 ಕೋಟಿ ರು. 1975 ಲಂಬೋರ್ಗಿನಿ ಯುರಕೊ ಮಾದರಿಯು 78 ಲಕ್ಷ ರು.ಗಳಿಗೆ ಮಾರಾಟವಾಗಿದ್ದವು.

Most Read Articles

Kannada
English summary
RM Auctions of Arizona recently enjoyed their best ever auction in the state, with over 17 cars selling for more than a million dollars each. That's plenty of moolah to smile about, but there were some very special cars that went under the hammer.
Story first published: Wednesday, January 21, 2015, 18:25 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X