ತಡೀರಿ, ಈ 6 ಕಾರುಗಳನ್ನು ಕೊಳ್ಳದಿರುವುದೇ ಲೇಸು!

Written By:

ನೀವು ಹೊಸ ಕಾರು ಖರೀದಿ ಮಾಡುವ ಇರಾದೆಯಲ್ಲಿದ್ದೀರಾ? ಸ್ವಲ್ಪ ತಡೀರಿ, ಡಿಸ್ಕೌಂಟ್ ಮಾಯೆಗೆ ಒಳಗಾಗದಿರಿ! ನಾವಿಲ್ಲಿ ಬೊಟ್ಟು ಮಾಡಿ ತೋರಿಸುವ ಆರು ಮಾದರಿಗಳನ್ನು ಸದ್ಯಕ್ಕೆ ಖರೀದಿಸದಿರುವುದೇ ಲೇಸು. ಅಬ್ಬಬ್ಬಾ, ಯಾಕೆ ಅಂತೀರಾ?

ಇಲ್ಲಿದೆ ನೋಡಿ, ಈ ಎಲ್ಲ ಮಾದರಿಗಳ ನಿರ್ಮಾಣವನ್ನು ಪ್ರಸಕ್ತ ಸಾಲಿನಲ್ಲೇ ನಿಲುಗಡೆಗೊಳಿಸಲು ವಾಹನ ತಯಾರಕ ಸಂಸ್ಥೆಗಳು ನಿರ್ಧರಿಸುತ್ತಿದೆ. ಹಾಗಾಗಿ ಬಾಕಿ ಉಳಿದಿರುವ ಸ್ಟೋಕ್ ಮುಗಿಸುವ ತವಕದಲ್ಲಿ ಭಾರಿ ಡಿಸ್ಕೌಂಟ್ ನೀಡುವ ಸಾಧ್ಯತೆಯಿದ್ದು, ಇಂತಹ ಮೋಹಪಾಶಕ್ಕೆ ಒಳಗಾಗದಿರಿ. ಅಷ್ಟಕ್ಕೂ ಪ್ರಸಕ್ತ ಸಾಲಿನಲ್ಲೇ ತನ್ನ ಓಟವನ್ನು ನಿಲ್ಲಿಸಲಿರುವ ಈ ಜನಪ್ರಿಯ ಮಾದರಿಗಳು ಯಾವುವು? ಉತ್ತರಕ್ಕಾಗಿ ಫೋಟೊ ಸ್ಲೈಡ್ ನತ್ತ ಮುಂದುವರಿಯಿರಿ.

To Follow DriveSpark On Facebook, Click The Like Button
06. ಫೋರ್ಡ್ ಫಿಗೊ

06. ಫೋರ್ಡ್ ಫಿಗೊ

ಕಳೆದ ವರ್ಷವಷ್ಟೇ ಐಕಾನಿಕ್ ಮಾರುತಿ ಆಲ್ಟೊ 800 ಹಾಗೂ ಹ್ಯುಂಡೈ ಸ್ಯಾಂಟ್ರೊ ತನ್ನ ಓಟವನ್ನು ನಿಲುಗಡೆಗೊಳಿಸಿತ್ತು. ಈಗ ಇದೇ ಸಾಲಿಗೆ ಅಮೆರಿಕ ಮೂಲದ ಫೋರ್ಡ್ ಫಿಗೊ ಸಹ ಸೇರಿಕೊಳ್ಳಲಿದೆ. ಅಷ್ಟಕ್ಕೂ ಫಿಗೊ ಇಂತಹದೊಂದು ನಡೆ ಹಿಂದೆ ಕಾರಣವೊಂದಿದೆ. ಅದೇನು ಗೊತ್ತೇ?

ಫೋರ್ಡ್ ಫಿಗೊ

ಫೋರ್ಡ್ ಫಿಗೊ

ಹೌದು, ಎಲ್ಲ ಹೊಸತನದ ಫಿಗೊ ಹ್ಯಾಚ್ ಬ್ಯಾಕ್ ಕಾರನ್ನು ಬಿಡುಗಡೆಗೊಳಿಸುವ ಯೋಜನೆಯನ್ನು ಫೋರ್ಡ್ ಸಂಸ್ಥೆ ಹೊಂದಿದೆ. ಇದರೊಂದಿಗೆ 2012 ಆರ್ಥಿಕ ಸಾಲಿನಲ್ಲಿ 70,000 ಯುನಿಟ್ ಗಳಷ್ಟು ಮಾರಾಟ ಹೊಂದಿದ್ದ ಫಿಗೊ ಕಾರು ನೂತನ ಮಾದರಿಗೆ ತನ್ನ ಹಾದಿ ಬಿಟ್ಟುಕೊಡಲಿದೆ. ಫಿಗೊ ಕಾರಿನ ಮಾರಾಟವು 2015 ಆರ್ಥಿಕ ಸಾಲಿನಲ್ಲಿ 17,000ಕ್ಕೆ ಇಳಿಕೆಯಾಗಿತ್ತು.

05. ಫೋರ್ಡ್ ಕ್ಲಾಸಿಕ್

05. ಫೋರ್ಡ್ ಕ್ಲಾಸಿಕ್

ಫೋರ್ಡ್ ಸಂಸ್ಥೆಯು ಮಗದೊಂದು ಕಾರಿಗೆ ಗುಡ್ ಬೈ ಹೇಳಲು ಸಿದ್ಧತೆ ನಡೆಸುತ್ತಿದೆ. ಅದುವೇ ಫೋರ್ಡ್ ಕ್ಲಾಸಿಕ್. ಇದರೊಂದಿಗೆ ಫೋರ್ಡ್ ಕ್ಲಾಸಿಕ್ ಓಡಾಟ ನಿಲ್ಲಲಿದೆ. 2012ರ ಆರ್ಥಿಕ ಸಾಲಿನಲ್ಲಿ 20,350ರಷ್ಟಿದ್ದ ಫೋರ್ಡ್ ಕ್ಲಾಸಿಕ್ ಮಾರಾಟವು 2015 ಆರ್ಥಿಕ ಸಾಲಿನ ವೇಳೆಯಾಗುವಾಗ 5850ಕ್ಕೆ ಇಳಿಕೆಯಾಗಿತ್ತು.

ಫೋರ್ಡ್ ಕ್ಲಾಸಿಕ್

ಫೋರ್ಡ್ ಕ್ಲಾಸಿಕ್

ಈಗ ಫೋರ್ಡ್ ಕ್ಲಾಸಿಕ್ ಸ್ಥಾನವನ್ನು ನೂತನ ಫೋರ್ಡ್ ಆಸ್ಪೈರ್ ಕಾಂಪಾಕ್ಟ್ ಸೆಡಾನ್ ಕಾರು ತುಂಬಲಿದೆ. ಇದು ಗುಜರಾತ್ ನಲ್ಲಿ ತೆರೆದುಕೊಂಡಿರುವ ಸಂಸ್ಥೆಯ ಹೊಸ ಘಟಕದಲ್ಲಿ ನಿರ್ಮಾಣವಾಗಲಿದ್ದು, ಅತಿ ಶೀಘ್ರದಲ್ಲೇ ಬಿಡುಗಡೆ ಭಾಗ್ಯವನ್ನು ಕಾಣಲಿದೆ.

04. ಟಾಟಾ ವಿಸ್ಟಾ

04. ಟಾಟಾ ವಿಸ್ಟಾ

ದೇಶದ ಅತಿ ದೊಡ್ಡ ವಾಹನ ತಯಾರಿಕ ಸಂಸ್ಥೆಯಾಗಿರುವ ಟಾಟಾ ಮೋಟಾರ್ಸ್ ಕೂಡಾ ಕ್ರಾಂತಿಯ ಪರ್ವದಲ್ಲಿದ್ದು, ಆಧುನಿಕತೆಗೆ ತಕ್ಕಂತೆ ಹೊಸ ಹೊಸ ಮಾದರಿಗಳನ್ನು ಬಿಡುಗಡೆ ಮಾಡಲಿದೆ. ಇದರಂತೆ ಕಳೆಗುಂದಿರುವ ವಿಸ್ಟಾ ಹೊಸ ಮಾದರಿಗಳಿಗೆ ಹಾದಿ ಬಿಟ್ಟುಕೊಡಲಿದೆ. ನಿಮ್ಮ ಮಾಹಿತಿಗಾಗಿ 2012ನೇ ಆರ್ಥಿಕ ಸಾಲಿನಲ್ಲಿ 72,000 ಯುನಿಟ್ ಗಳಷ್ಟಿದ್ದ ಟಾಟಾ ವಿಸ್ಟಾ ಮಾರಾಟವು 2015ನೇ ಆರ್ಥಿಕ ಸಾಲಿಗೆ ತಲುಪುವಾಗ 14,100ಕ್ಕೆ ಇಳಿಕೆಯಾಗಿತ್ತು.

03. ಟಾಟಾ ವಿಸ್ಟಾ

03. ಟಾಟಾ ವಿಸ್ಟಾ

ಅಂದ ಹಾಗೆ ಟಾಟಾ ವಿಸ್ಟಾ ಮಾದರಿಯನ್ನು ಹೊಸತದ ಕೈಟ್ ಹ್ಯಾಚ್ ಬ್ಯಾಕ್ ಕಾರು ತುಂಬಲಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಸಣ್ಣ ಕಾರುಗಳಿಗೆ ಅತಿ ಹೆಚ್ಚಿನ ಬೇಡಿಕೆಯಿದೆ. ಇದನ್ನು ಪರಿಗಣಿಸಿರುವ ಸಂಸ್ಥೆಯು ಕೈಟ್ ಕೋಡ್ ಹೆಸರಿನಲ್ಲಿ ನೂತನ ಮಾದರಿ ಅಭಿವೃದ್ಧಿಪಡಿಸುತ್ತಿದ್ದು, ಇದು ನ್ಯಾನೋ ಹಾಗೂ ಬೋಲ್ಟ್ ನಡುವೆ ಕಾಣಿಸಿಕೊಳ್ಳಲಿದೆ.

 03. ಟಾಟಾ ಮಾಂಝಾ

03. ಟಾಟಾ ಮಾಂಝಾ

ಇನ್ನು ಟಾಟಾ ಮಾಂಝಾ ಕೂಡಾ ಮಾರುಕಟ್ಟೆಯಲ್ಲಿ ಅಂತದ್ದೇನು ಸಾಧನೆ ಮಾಡುತ್ತಿಲ್ಲ. ಇದರ ಮಾರಾಟ ಅಂಕಿಅಂಶವು ಅತ್ಯಂತ ಕಳಪೆ ಮಟ್ಟದಲ್ಲಿದ್ದು, 2012ನೇ ಆರ್ಥಿಕ ಸಾಲಿನಲ್ಲಿ 20,250 ಯುನಿಟ್ ಗಳಿಂದ 2015ರ ವೇಳೆಯಾಗುವಾಗ 1300ಕ್ಕೆ ಇಳಿಕೆಯಾಗಿದೆ.

ಟಾಟಾ ಮಾಂಝಾ

ಟಾಟಾ ಮಾಂಝಾ

ಇದಕ್ಕೂ ಪರಿಹಾರದೊಂದಿಗೆ ಮುಂದೆ ಬಂದಿರುವ ಟಾಟಾ ಸಂಸ್ಥೆಯು ಮಗದೊಂದು ಕೈಟ್ ಸೆಡಾನ್ ಮಾದರಿಯನ್ನು ಸಿದ್ಧಪಡಿಸುತ್ತದೆ. ಅಂತೆಯೇ 2016 ದೆಹಲಿ ಆಟೋ ಎಕ್ಸ್ ಪೋದಲ್ಲಿ ಅನಾವರಣಗೊಳ್ಳುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಈ ನಿಟ್ಟಿನಲ್ಲಿ ಬೋಲ್ಟ್, ಜೆಸ್ಟ್ ಮಾದರಿಗಳ ಯಶಸ್ಸು ಟಾಟಾಗೆ ಸ್ಪೂರ್ತಿಯಾಗಲಿದೆ.

02. ಟಾಟಾ ಸುಮೋ ಗ್ರಾಂಡ್/ಮೂವಸ್

02. ಟಾಟಾ ಸುಮೋ ಗ್ರಾಂಡ್/ಮೂವಸ್

ಇಂತಹದೊಂದು ಕಾರು ಮಾರುಕಟ್ಟೆಯಲ್ಲಿತ್ತು ಅಂದರೆ ನಿಮ್ಮಿಂದ ನಂಬಲು ಸಾಧ್ಯವೇ? ಹೌದು, ಈಗ ಟಾಟಾ ಮೂವಸ್ ಸಹ ತನ್ನ ಹಾದಿ ಬಿಟ್ಟುಕೊಡಲು ತಯಾರಾಗುತ್ತಿದೆ.

 ಟಾಟಾ ಸುಮೋ ಗ್ರಾಂಡ್/ಮೂವಸ್

ಟಾಟಾ ಸುಮೋ ಗ್ರಾಂಡ್/ಮೂವಸ್

ಪ್ರಸ್ತುತ ಟಾಟಾ ಮೂವಸ್ ಮಾರಾಟವು (2015 ಆರ್ಥಿಕ ಸಾಲಿನಲ್ಲಿ) ಬರಿ 3150ಕ್ಕೆ ಇಳಿಕೆಯಾಗಿದೆ. ಇದು 2012ರ ಆರ್ಥಿಕ ಸಾಲಿನಲ್ಲಿ 11,400 ಯುನಿಟ್ ಗಳಿಷ್ಟಿತ್ತು. ಈಗ ಟಾಟಾದ ಹೊಸ ಉಪಯುಕ್ತ ವಾಹನ ಬರಮಾಡಿಕೊಳ್ಳಲು ಸಜ್ಜಾಗಿರಿ.

01. ಮಾರುತಿ ಸುಜುಕಿ ರಿಟ್ಜ್

01. ಮಾರುತಿ ಸುಜುಕಿ ರಿಟ್ಜ್

ಅಚ್ಚರಿಯೆಂಬಂತೆ ಅತ್ಯಂತ ಜನಪ್ರಿಯ ಮಾದರಿಗಳಲ್ಲಿ ಒಂದಾಗಿರುವ ಟಾಟಾ ಸುಜುಕಿ ರಿಟ್ಜ್ ಮಾದರಿಯ ನಿರ್ಮಾಣವನ್ನು ನಿಲುಗಡೆಗೊಳಿಸಲು ದೇಶದ ಅತಿ ದೊಡ್ಡ ವಾಹನ ತಯಾರಿಕ ಸಂಸ್ಥೆಯಾಗಿರುವ ಮಾರುತಿ ಸುಜುಕಿ ಯೋಜನೆ ಹಾಕಿಕೊಂಡಿದೆ. ಇಲ್ಲಿ ಗಮನಾರ್ಹವೆಂದರೆ 2012ರಲ್ಲಿ 63250 ಯುನಿಟ್ ಗಳಷ್ಟು ಮಾರಾಟವಿದ್ದ ರಿಟ್ಜ್ 2015ರ ವೇಳೆಯಾಗುವಾಗ 34500 ಯುನಿಟ್ ಗಳಿಗೆ ಇಳಿಕೆಯಾಗಿತ್ತು.

 ಮಾರುತಿ ಸುಜುಕಿ ರಿಟ್ಜ್

ಮಾರುತಿ ಸುಜುಕಿ ರಿಟ್ಜ್

ಈಗ ರಿಟ್ಜ್ ಸ್ಥಾನವನ್ನು ವೈಆರ್ ಎ ಪ್ರೀಮಿಯಂ ಹ್ಯಾಚ್ ಬ್ಯಾಕ್ ಕಾರು ಸ್ಥಾನ ತುಂಬಲಿದೆ ಎಂಬುದು ಖುಷಿ ಸುದ್ದಿ. ಈಗ ದೇಶದ ಮಾರುಕಟ್ಟೆಯಿಂದ ದೂರವಾಗಲಿರುವ ಈ ಎಲ್ಲ ಮಾದರಿಗಳ ಬಗ್ಗೆ ಗ್ರಾಹಕರು ಜಾಗರೂಕರಾದರೆ ಒಳಿತು.

Read more on ಕಾರು cars
English summary
Better To Avoid To Buy These 6 Cars in India This Year
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark