ಭಾರತ ರಸ್ತೆಯಲ್ಲಿ ಹೊಸ ಅಧ್ಯಾಯ ತೆರೆದ ಭಾರತ್ ಬೆಂಝ್ ಬಸ್

By Nagaraja

ಮುಂಚೂಣಿಯ ಟ್ರಕ್ ತಂಯಾರಕ ಸಂಸ್ಥೆ ಡೈಮ್ಲರ್ ಎಜಿ ಭಾಗವಾಗಿರುವ ಡೈಮ್ಲರ್ ಇಂಡಿಯಾ ಕಮರ್ಷಿಯಲ್ ವೆಹಿಕಲ್ ಪ್ರೈವೇಟ್ ಲಿಮಿಟೆಡ್ (ಡಿಐಸಿವಿ) ಸಂಸ್ಥೆಯು ದೇಶದಲ್ಲಿ ಭಾರತ್ ಬೆಂಜ್ ಸ್ಟಾಫ್ ಬಸ್ಸುಗಳನ್ನು ಬಿಡುಗಡೆ ಮಾಡಿದೆ. ಅಲ್ಲದೆ ಮೊದಲ ಶ್ರೇಣಿಯ ಬಸ್ಸುಗಳನ್ನು ಮುಂಬೈನ ಗ್ರಾಹಕರಿಗೆ ಹಸ್ತಾಂತರಿಸಿದೆ.

Also Read: ಜಗತ್ತಿನ ಅತಿ ಉದ್ದದ ರೈಲ್ವೇ ಬಸ್

ಭಾರತ್ ಬೆಂಝ್ ಸ್ಟಾಫ್ (ಕಚೇರಿ ಸಿಬ್ಬಂದಿ) ಶ್ರೇಣಿಯ ಬಸ್ಸುಗಳು ಅಲ್ಟ್ರಾ ಇಂಧನ ಕ್ಷಮತೆಯನ್ನು ಪಡೆದುಕೊಳ್ಳಲಿದ್ದು, ವಾಣಿಜ್ಯ ವಿಭಾಗದಲ್ಲಿ ಹೊಸ ಅಧ್ಯಾಯವನ್ನು ತೆರೆದುಕೊಳ್ಳಲಿದೆ. ಭಾರತ್ ಬೆಂಝ್ ಸ್ಟಾಫ್ ಬಸ್, 9 ಟನ್ ತೂಕ ಹಾಗೂ 39 ಮಂದಿಗೆ ಆರಾಮದಾಯಕವಾಗಿ ಕುಳಿತುಕೊಳ್ಳುವ ವ್ಯವಸ್ಥೆಯನ್ನು ಮಾಡಲಾಗಿದೆ.

ಭಾರತ ರಸ್ತೆಯಲ್ಲಿ ಹೊಸ ಅಧ್ಯಾಯ ತೆರೆದ ಭಾರತ್ ಬೆಂಝ್ ಬಸ್

ಈ ಸಂದರ್ಭದಲ್ಲಿ ಪ್ರತಿಕ್ರಿಯಿಸಿರುವ ಡೈಮ್ಲರ್ ಬಸ್ ಇಂಡಿಯಾ ವ್ಯವಸ್ಥಾಪಕ ನಿರ್ದೇಶಕ ಮಾರ್ಕಸ್ ವಿಲ್ಲಿಂಗರ್, "ಸ್ಮಾರ್ಟ್ ಸಿಟಿ ಹಾಗೂ ಮೂಲಭೂತ ಸೌಕರ್ಯಗಳಲ್ಲಿ ಭಾರತೀಯ ಮಾರುಕಟ್ಟೆಯು ಆಗಾಧ ಸಾಮರ್ಥ್ಯವನ್ನು ಹೊಂದಿದ್ದು, ನೌಕರರು ಕಚೇರಿಗೆ ಹೋಗಿ ಬರಲು ಸಮಯ ವ್ಯಯ ಮಾಡುತ್ತಿರುವುದು ಕಂಡುಬಂದಿದೆ. ಈ ನಿಟ್ಟಿನಲ್ಲಿ ಪ್ರಯಾಣಿಕರಿಗೆ ಸುರಕ್ಷಿತ ಹಾಗೂ ಆರಾಮದಾಯಕ ಸಂಚಾರವನ್ನು ಒದಗಿಸಲು ಬಯಸುತ್ತಿದ್ದೇವೆ" ಎಂದಿದ್ದಾರೆ.

ಭಾರತ ರಸ್ತೆಯಲ್ಲಿ ಹೊಸ ಅಧ್ಯಾಯ ತೆರೆದ ಭಾರತ್ ಬೆಂಝ್ ಬಸ್

ಭಾರತೀಯ ರಸ್ತೆ ಹಾಗೂ ವಿಶೇಷವಾಗಿ ಸಜ್ಜೀಕರಿಸಲಾದ ಟೆಸ್ಟಿಂಗ್ ಟ್ರ್ಯಾಕ್ ಗಳ ತೀವ್ರ ಪರಿಸ್ಥಿತಿಗಳಲ್ಲಿ ಇದನ್ನು ಪರೀಕ್ಷಿಸಲಾಗಿದ್ದು, ವಿಶ್ವಾಸಾರ್ಹತೆ ಹಾಗೂ ಆರಾಮವನ್ನು ಖಾತ್ರಿಪಡಿಸಲಾಗಿದೆ ಎಂದಿದೆ.

ಭಾರತ ರಸ್ತೆಯಲ್ಲಿ ಹೊಸ ಅಧ್ಯಾಯ ತೆರೆದ ಭಾರತ್ ಬೆಂಝ್ ಬಸ್

ಭಾರತ ಬಸ್ ವಿಭಾಗದಲ್ಲಿ ಹೊಸ ಅಧ್ಯಾಯ ತೆರೆದುಕೊಳ್ಳುವ ಇರಾದೆಯಲ್ಲಿರುವ ಡೈಮ್ಲರ್‌ಗೆ ಭಾರತ್ ಬೆಂಝ್ ಸ್ಟಾಪ್ ಬಸ್ಸುಗಳು ಸಹಕಾರಿಯಾಗಲಿದೆ. ವಿಶಿಷ್ಟ ‘Aluminique' ಫ್ರೊಫೈಲ್ ಗಾಗಿ ಹಕ್ಕು ಸ್ವಾಮ್ಯ ಪಡೆದಿದರುವ ಭಾರತ್ ಬೆಂಝ್ ಸ್ಟಾಪ್ ಬಸ್ಸಿನ ಏರೋಡೈನಾಮಿಕ್ ವಿನ್ಯಾಸದಿಂದ ಗರಿಷ್ಠ ಇಂಧನ ಕ್ಷಮತೆ ಹಾಗೂ ಬಲಿಷ್ಠ ದೇಹ ರಚನೆಯನ್ನು ಕಾಪಾಡಿಕೊಂಡಿದೆ.

ಭಾರತ ರಸ್ತೆಯಲ್ಲಿ ಹೊಸ ಅಧ್ಯಾಯ ತೆರೆದ ಭಾರತ್ ಬೆಂಝ್ ಬಸ್

ಘನ ವಾಹನ ಆಗಿರುವುದರಿಂದ ಸುರಕ್ಷತೆಯು ಅತಿ ಪ್ರಾಮುಖ್ಯ ಘಟಕವೆನಿಸಿಕೊಳ್ಳುತ್ತದೆ. ಇಲ್ಲಿ ಭಾರತ್ ಬೆಂಝ್ ಬಸ್ಸು, ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಂ (ಎಬಿಎಸ್), ಮುಂಭಾಗ ಮತ್ತು ಹಿಂಭಾಗದಲ್ಲಿ ಆ್ಯಂಟಿ ರೋಲ್ ಬಾರ್, ಅಗ್ನಿ ಶಾಮಕ ಉಪಕರಣ ಮುಂತಾದ ವ್ಯವಸ್ಥೆಯನ್ನು ಪಡೆಯಲಿದೆ.

ಭಾರತ ರಸ್ತೆಯಲ್ಲಿ ಹೊಸ ಅಧ್ಯಾಯ ತೆರೆದ ಭಾರತ್ ಬೆಂಝ್ ಬಸ್

ಮುಂದಿನ ದಿನಗಳಲ್ಲಿ ಮತ್ತಷ್ಟು ಭಾರತ್ ಬೆಂಝ್ ಶ್ರೇಣಿಯ ಬಸ್ಸುಗಳನ್ನು ಹೊರತರುವುದಾಗಿಯೂ ಈ ಬಗ್ಗೆ ಯೋಜನಾಬದ್ಧ ನೀತಿಯನ್ನು ಅನುಸರಿಸುವುದಾಗಿಯೂ ಸಂಸ್ಥೆ ತಿಳಿಸಿದೆ.

ಭಾರತ ರಸ್ತೆಯಲ್ಲಿ ಹೊಸ ಅಧ್ಯಾಯ ತೆರೆದ ಭಾರತ್ ಬೆಂಝ್ ಬಸ್

ಚೆನ್ನೈನ ಓರಗಡಂ ಘಟಕದಲ್ಲಿ ಬರೋಬ್ಬರಿ 425 ಕೋಟಿ ರುಪಾಯಿಗಳ ಹೂಡಿಕೆ ಮಾಡಿರುವ ಸಂಸ್ಥೆಯು ಭಾರತ್ ಬೆಂಝ್ ಹಾಗೂ ಮರ್ಸಿಡಿಸ್ ಬೆಂಝ್ ಬಸ್ಸುಗಳನ್ನು ನಿರ್ಮಿಸುತ್ತಿದೆ. ಇದರಡಿಯಲ್ಲಿ ಐರ್ಲೆಂಡ್ ತಳಹದಿಯ ವ್ರೈಟ್ ಬಸ್ ಸಹ ಬಾಡಿ ಬಿಡಿಭಾಗವನ್ನು ತಯಾರಿಸುತ್ತಿದೆ.

ಭಾರತ ರಸ್ತೆಯಲ್ಲಿ ಹೊಸ ಅಧ್ಯಾಯ ತೆರೆದ ಭಾರತ್ ಬೆಂಝ್ ಬಸ್

ಈ ಪೈಕಿ ಫ್ರಂಟ್ ಎಂಜಿನ್ ನಿಯಂತ್ರಿತ ಭಾರತ್ ಬೆಂಝ್ ನಗರದೊಳಗೆ ಕಚೇರಿ ಸಿಬ್ಬಂದಿಗಳು, ಶಾಲಾ ಮಕ್ಕಳು ಹಾಗೂ ಸಣ್ಣ ಪುಟ್ಟ ಪ್ರವಾಸವನ್ನು ಹಮ್ಮಿಕೊಳ್ಳಲು ನೆರವಾಗಲಿದೆ. ಇನ್ನೊಂದೆಡೆ ರಿಯರ್ ಎಂಜಿನ್ ನಿಯಂತ್ರಿತ ಮರ್ಸಿಡಿಸ್ ಬೆಂಝ್ ಪ್ರೀಮಿಯಂ ಶೈಲಿಯ ಬಸ್ಸುಗಳಾಗಿರಲಿದ್ದು, ಅಂತರ ನಗರ ಬೇಡಿಕೆಗಳನ್ನು ಈಡೇರಿಸಲಿದೆ.

ಭಾರತ ರಸ್ತೆಯಲ್ಲಿ ಹೊಸ ಅಧ್ಯಾಯ ತೆರೆದ ಭಾರತ್ ಬೆಂಝ್ ಬಸ್

ಇವೆಲ್ಲದರೊಂದಿಗೆ ದೇಶದ್ಯಾಂತ 80 ವಿತರಕ ಜಾಲವನ್ನು ಪಸರಿಸಿದ್ದು, ಗರಿಷ್ಠ ಮಾರಾಟವನ್ನು ಗುರಿಯಾಗಿರಿಸಿಕೊಂಡಿದೆ. ಅಲ್ಲದೆ ದಿನದ 24 ಗಂಟೆಯೂ ಸರ್ವೀಸ್ ಸೇವೆಯೂ ಲಭ್ಯವಾಗಲಿದೆ.

ಇವನ್ನೂ ಓದಿ

ಭಾರತದಲ್ಲೂ ಓಡಾಡಲಿರುವ ಬಯೋ ಬಸ್

Most Read Articles

Kannada
Read more on ಬಸ್ bus
English summary
BharatBenz buses hits Indian roads
Story first published: Tuesday, November 17, 2015, 15:06 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X