2015 ಬಿಎಂಡಬ್ಲ್ಯು ಎಕ್ಸ್‌ಪೀರಿಯನ್ಸ್ ಟೂರ್‌ಗೆ ವೇದಿಕೆ ಸಜ್ಜು
ದೇಶದ್ಯಾಂತ ನಗರಗಳಲ್ಲಿ ಕಳೆದ ವರ್ಷ ಭಾರಿ ಯಶಸ್ಸನ್ನು ಕಂಡಿರುವ ಬಿಎಂಡಬ್ಲ್ಯು ಎಕ್ಸ್‌ಪೀರಿಯನ್ಸ್ ಟೂರ್ ಮಗದೊಂದು ವರ್ಷಕ್ಕೆ ಕಾಲಿಡಲು ಸಜ್ಜಾಗುತ್ತಿದೆ. ಇದರಂತೆ ಜರ್ಮನಿಯ ಐಷಾರಾಮಿ ಕಾರು ತಯಾರಿಕ ಸಂಸ್ಥೆಯಾಗಿರುವ ಬಿಎಂಡಬ್ಲ್ಯು ಇಂಡಿಯಾ, 2015 ಬಿಎಂಡಬ್ಲ್ಯು ಎಕ್ಸ್‌ಪೀರಿಯನ್ಸ್ ಟೂರ್ ಘೋಷಣೆ ಮಾಡಿದೆ.
ಬಿಎಂಡಬ್ಲ್ಯು ಎಕ್ಸ್‌ಪೀರಿಯನ್ಸ್ ಟೂರ್ ಮುಖಾಂತರ ಸಂಸ್ಥೆಯ ಗರಿಷ್ಠ ನಿರ್ವಹಣೆಯ ವಾಹನಗಳ ಚಾಲನಾ ಅನುಭವ ಪಡೆದುಕೊಳ್ಳಲು ಇದೊಂದು ಸುವರ್ವಣಾವಕಾಶವಾಗಿದೆ. ದೇಶದ ಪ್ರಮುಖ ನಗರಗಳಾದ ಬೆಂಗಳೂರು ಜೊತೆಗೆ, ಅಹಮದಾಬಾದ್, ಚಂಡೀಗಡ, ಚೆನ್ನೈ, ದೆಹಲಿ, ಗುರ್ಗಾಂವ್, ಹೈದರಾಬಾಬ್, ಇಂಧೋರ್, ಜೈಪುರ, ಕೊಚ್ಚಿ, ಲಕ್ನೇ, ಮುಂಬೈ, ನಾಗ್ಪುರ, ಪುಣೆ, ರಾಯ್‌ಪುರ, ಸೂರತ್ ಮತ್ತು ವಿಜಯವಾಡದಲ್ಲಿ ಆಯೋಜನೆಯಾಗಿತ್ತು.

ಕಳೆದ ವರ್ಷ ವಿಶೇಷವಾಗಿ ಸಜ್ಜುಗೊಳಿಸಿದ ಟ್ರ್ಯಾಕ್‌ನಲ್ಲಿ ಬಿಎಂಡಬ್ಲ್ಯು ಗರಿಷ್ಠ ನಿರ್ವಹಣೆಯ ಸೆಡಾನ್ ಹಾಗೂ ಎಸ್‌ಯುವಿ ವಾಹನಗಳು ಪ್ರಮುಖ ಆಕರ್ಷಣೆಯಾಗಿದ್ದವು. ದೇಶದ 18 ನಗರಗಳಲ್ಲೂ ಇದಕ್ಕೆ ಉತ್ತಮ ಬೆಂಬಲ ವ್ಯಕ್ತವಾಗಿದ್ದವು.
ಬಿಎಂಡಬ್ಲ್ಯು ವಾಹನ ಪ್ರೇಮಿಗಳು ತಮ್ಮ ಫ್ಯಾಮಿಲಿ ಸಮೇತ ಇದರ ಅದ್ಭುತ ಆಫ್ ರೋಡ್ ಅನುಭವವನ್ನು ಸವಿದಿದ್ದರು. ಇದರಲ್ಲಿ ಎಕ್ಸ್ ಡ್ರೈವ್ ಪ್ರಮುಖ ಆಕರ್ಷಣೆಯಾಗಿತ್ತು. ಒಟ್ಟಾರೆಯಾಗಿ ಈ ಬಾರಿ ಹೆಚ್ಚೆಚ್ಚು ವಾಹನ ಪ್ರೇಮಿಗಳನ್ನು ಸೆಳೆಯುವ ಇರಾದೆಯನ್ನು ಬಿಎಂಡಬ್ಲ್ಯು ಹೊಂದಿದೆ.


Click it and Unblock the Notifications








