ಡಿಸೆಂಬರ್‌ನಲ್ಲಿ ಎಚ್ಚೆತ್ತುಕೊಂಡ ಕಾರು ಮಾರಾಟ

By Nagaraja

2014 ವರ್ಷಾಂತ್ಯದಲ್ಲಿ ಕಾರು ಮಾರುಕಟ್ಟೆ ಎಚ್ಚೆತ್ತುಕೊಳ್ಳಲು ಪ್ರಮುಖ ಕಾರಣವೊಂದಿದೆ. ಇದು ನಿಜಕ್ಕೂ ಕಾರು ಮಾರಾಟ ವರ್ಧಿಸಲು ಸಹಕಾರಿಯಾಗಿತ್ತು ಅಂದರೆ ತಪ್ಪಾಗಲಾರದು.

ಕೇಂದ್ರ ಸರಕಾರ ವಿಸ್ತರಿಸಿದ್ದ ಅಬಕಾರಿ ಸುಂಕ ವಿನಾಯಿತಿ ಡಿಸೆಂಬರ್‌ 31ಕ್ಕೆ ಅಂತ್ಯಗೊಂಡಿತ್ತು. ಇದರಿಂದಾಗಿ ಹೊಸ ಕಾರು ಗ್ರಾಹಕರಲ್ಲಿ ಹೊಸ ವರ್ಷದಲ್ಲಿ ವಾಹನಗಳ ಅಬಕಾರಿ ಸುಂಕ ಹೆಚ್ಚಳವಾದಿತೆಂಬ ಆತಂಕ ಕಾಡಿತ್ತು.

Alto K10 amt

ಇದಾದ ಮೇಲೆ ದೇಶದ ಪ್ರಮುಖ ವಾಹನ ತಯಾರಕ ಸಂಸ್ಥೆಗಳು 2015 ಜನವರಿ 1ರಂದು ಅನ್ವಯವಾಗುವಂತೆ ತಮ್ಮ ತಮ್ಮ ನಿರ್ದಿಷ್ಟ ಮಾದರಿಗಳಿಗೆ ಬೆಲೆ ಏರಿಕೆ ಘೋಷಿಸಿತ್ತು. ಈ ಎಲ್ಲದರಿಂದಾಗಿ ವರ್ಷಾಂತ್ಯದಲ್ಲಿ ಹೆಚ್ಚು ವಾಹನ ಮಾರಾಟ ಕಾಣಿಸಿಕೊಳ್ಳುವಲ್ಲಿ ಯಶ ಕಂಡಿದೆ.

ವಾಹನ ತಯಾರಕ ಸಂಸ್ಥೆಗಳು 20,000 ರು.ಗಳ ವರೆಗೆ ಬೆಲೆ ಏರಿಕೆಗೊಳಿಸಿರುವುದು ಮುಂಬರುವ ದಿನಗಳಲ್ಲಿ ವಾಹನ ಮಾರಾಟ ಮಗದೊಮ್ಮೆ ಕುಸಿತಕ್ಕೆ ಕಾರಣವಾಗುವ ಭೀತಿಯಿದೆ.

ನಾಲ್ಕು ಚಕ್ರದ ವಾಹನ

ದೇಶೀಯ ಮಾರಾಟ (ಯುನಿಟ್‌ಗಳಲ್ಲಿ)

ಮಾರುತಿ ಸುಜುಕಿ
2014 ಡಿಸೆಂಬರ್ - 98,109
2013 ಡಿಸೆಂಬರ್ - 86,613
ಏರಿಕೆ - ಶೇ. 13

ಹ್ಯುಂಡೈ ಮೋಟಾರು
2014 ಡಿಸೆಂಬರ್ - 32,504
2013 ಡಿಸೆಂಬರ್ - 28,345
ಏರಿಕೆ - ಶೇ. 15

ಮಹೀಂದ್ರ ಆಂಡ್ ಮಹೀಂದ್ರ
2014 ಡಿಸೆಂಬರ್ - 17,311
2013 ಡಿಸೆಂಬರ್ - 16,436
ಏರಿಕೆ - ಶೇ. 5

ಟೊಯೊಟಾ
2014 ಡಿಸೆಂಬರ್ - 11,740
2013 ಡಿಸೆಂಬರ್ - 10,648
ಏರಿಕೆ - ಶೇ. 10

ಜನರಲ್ ಮೋಟಾರ್ಸ್
2014 ಡಿಸೆಂಬರ್ - 3,619
2013 ಡಿಸೆಂಬರ್ - 5,705
ಇಳಿಕೆ - ಶೇ. 37

ದ್ವಿಚಕ್ರ ವಾಹನ

ದೇಶೀಯ ಮಾರಾಟ (ಯುನಿಟ್‌ಗಳಲ್ಲಿ)

ಹೀರೊ ಮೊಟೊಕಾರ್ಪ್
2014 ಡಿಸೆಂಬರ್ - 5,26,097
2013 ಡಿಸೆಂಬರ್ - 5,24,990
ಏರಿಕೆ - ಶೇ. 0.2

ಟಿವಿಎಸ್ ಮೋಟಾರ್ಸ್
2014 ಡಿಸೆಂಬರ್ - 1,57,438
2013 ಡಿಸೆಂಬರ್ - 1,32,664
ಏರಿಕೆ - ಶೇ. 19

ರಾಯಲ್ ಎನ್‌ಫೀಲ್ಡ್
2014 ಡಿಸೆಂಬರ್ - 28,179
2013 ಡಿಸೆಂಬರ್ - 19,067
ಏರಿಕೆ - ಶೇ. 48

Most Read Articles

Kannada
English summary
Car sales grew at a healthy pace in December 2014
Story first published: Friday, January 2, 2015, 15:09 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X