ಬೆಂಝ್ ಸೂಪರ್ ಹೈ ಡೆಕ್ ಬಸ್ ಭಾರತದಲ್ಲಿ ಬಿಡುಗಡೆ

Written By:

ಡೈಮ್ಲರ್ ಇಂಡಿಯಾ ಸಂಸ್ಥೆಯು ಭಾರತದಲ್ಲಿ ಮರ್ಸಿಡಿಸ್ ಬೆಂಝ್ ಎಸ್‌ಡಿಎಚ್ 2436 ಸೂಪರ್ ಹೈ ಡೆಕ್ ಬಸ್ಸನ್ನು ಬಿಡುಗಡೆ ಮಾಡಿದೆ. ಇದರಂತೆ ಮೊದಲ ಕೀಲಿಯನ್ನು ಚೆನ್ನೈ ತಳಹದಿಯ ಕೆಪಿಎನ್ ಟ್ರಾವೆಲ್ಸ್ ಗೆ ಹಂಚಿಕೊಂಡಿದೆ.

ಚೆನ್ನೈನ ಸಮೀಪ ಸ್ಥಿತಗೊಂಡಿರುವ ಓರಗಡಂ ಘಟಕದಲ್ಲಿ ಡೈಮ್ಲರ್ ಬಸ್ಸುಗಳು ನಿರ್ಮಾಣವಾಗಲಿದೆ. ಇದು ವಿಶಿಷ್ಟವಾದ ಅಲ್ಯೂಮಿನಿಯಂ ದೇಹ ರಚನೆಯನ್ನು ಪಡೆಯಲಿದೆ.

ಮರ್ಸಿಡಿಸ್ ಬೆಂಝ್

ಕಡಿಮೆ ಭಾರದ ಈ ಬಸ್ ಗರಿಷ್ಠ ಇಂಧನ ಕ್ಷಮತೆಯನ್ನು ಕಾಪಾಡಿಕೊಳ್ಳಲಿದೆ. ಅಲ್ಲದೆ ಇದರಲ್ಲಿ ಆಕ್ಟಿವ್ ಸ್ಟೀಯರೇಬಲ್ ಟ್ಯಾಗ್ ಚಕ್ರ ವ್ಯವಸ್ಥೆಯಿದ್ದು, ಕಡಿಮೆ ಟರ್ನಿಂಗ್ ರೇಡಿಯಸ್ ಕಾಪಾಡಿಕೊಳ್ಳಲು ನೆರವಾಗಲಿದೆ.

ಇನ್ನುಳಿದಂದೆ 61 ಪುಶ್ ಬ್ಯಾಕ್ ಸೀಟುಗಳು, ಅಡ್ವಾನ್ಸ್ ಬ್ರೇಕಿಂಗ್ ಸಿಸ್ಟಂ ಹಾಗೂ ಯೋಜನಬದ್ಧವಾಗಿ ಜೋಡಣೆ ಮಾಡಲಾಗಿರುವ ಇಂಧನ ಟ್ಯಾಂಕ್ ಗಳು ಹೆಚ್ಚು ಸುರಕ್ಷತೆಯನ್ನು ನೀಡಲಿದೆ.

English summary
Daimler Launches Mercedes-Benz SHD 2436: Super High Deck coach
Story first published: Wednesday, December 23, 2015, 11:59 [IST]
Please Wait while comments are loading...

Latest Photos