ಹರಾಜಿಗಿದೆ ಪಾಪ್ ಬಳಕೆ ಮಾಡಿದ್ದ ಕೊನೆಯ ಎನ್ಜೊ ಕಾರು
ಜಗತ್ತಿನ ಅತಿ ವಿಶಿಷ್ಟ ಸೂಪರ್ ಕಾರನ್ನು ನಿಮ್ಮದಾಗಿಸುವ ಸುವರ್ಣಾವಕಾಶ ಒದಗಿ ಬಂದಿದೆ. ಹೌದು, ಇಟಲಿಯ ಐಕಾನಿಕ್ ಕಾರು ಸಂಸ್ಥೆಯ ಸ್ಥಾಪಕ ಎನ್ಜೊ ಫೆರಾರಿ ಹೆಸರಲ್ಲಿ ನಿರ್ಮಾಣವಾಗಿರುವ ಪಾಪ್ ಜಾನ್ ಪೌಲ್ II ಅವರ ಕಾರನ್ನು ಹರಾಜಿಡಲಾಗುತ್ತಿದೆ.
ಈ ಮೂಲಕ ಕೊನೆಯ ಫೆರಾರಿ ಎನ್ಜೊ ಸೂಪರ್ ಕಾರನ್ನು ನಿಮ್ಮದಾಗಿಸಿಕೊಳ್ಳುವ ಅವಕಾಶವೊದಗಿ ಬರಲಿದೆ. ಈ ಎನ್ಜೊ ಕಾರನ್ನು ಮರನೆಲೊ ಅವರು ಪಾಪ್ ಅವರಿಗೆ ಉಡುಗೊರೆಯಾಗಿ ನೀಡಿದ್ದರು.

10 ವರ್ಷಗಳೇ ಕಳೆದರೂ ಫೆರಾರಿ ಎನ್ಜೊ ಹೊಚ್ಚ ಹೊಸ ಕಾರಿನಂತಿದೆ. ಯಾಕೆಂದರೆ ಇದು ಕೇವಲ 180 ಕೀ.ಮೀ. ದೂರಗಳನ್ನಷ್ಟೇ ಕ್ರಮಿಸಿರುತ್ತದೆ.

ಈಗ ಆಗಸ್ಟ್ 13 ಹಾಗೂ 15ರಂದು ನಡೆಯಲಿರುವ ಆರ್ ಎಂ ಹರಾಜು ಮಾಂಟೆರಿ ಈವೆಂಟ್ ನಲ್ಲಿ ಮಾರಾಟಕ್ಕೆ ಲಭ್ಯವಾಗಲಿದೆ.

ಪ್ರಸ್ತುತ ಫೆರಾರಿ ಎನ್ಜೊ ಸೂಪರ್ ಕಾರಿನ ಅಡಿಯಲ್ಲಿ 6.0 ಲೀಟರ್ ವಿ12 ಎಂಜಿನ್ ಲಗತ್ತಿಸಲಾಗಿದ್ದು, ಗರಿಷ್ಠ 651 ಅಶ್ವಶಕ್ತಿ (657 ತಿರುಗುಬಲ) ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಇನ್ನು ಆರು ಸ್ಪೀಡ್ ಜೊತೆ ಸೆಮಿ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಸಹ ಇರಲಿದೆ.

ಅಂದ ಹಾಗೆ ಗಂಟೆಗೆ ಗರಿಷ್ಠ 355 ಕೀ.ಮೀ. ಹಾಗೂ ಕೇವಲ ಮೂರು ಸೆಕಂಡುಗಳಲ್ಲೇ 0-100 ಕೀ.ಮೀ. ವೇಗವರ್ಧಿಸುವ ಸಾಮರ್ಥ್ಯವನ್ನು ಇದು ಹೊಂದಿದೆ.

ವಿಶ್ವ ಪ್ರಸಿದ್ಧ ಪಿನಿನ್ ಫರಿನಾ ಡಿಸೈನ್ ಕೇಂದ್ರದಲ್ಲಿ ಪಳಗಿರುವ ಫೆರಾರಿ ಎನ್ಜೊ 2002ರಿಂದ 2004ನೇ ಇಸವಿಯ ಅವಧಿಯಲ್ಲಿ ನಿರ್ಮಾಣವಾಗಿತ್ತು.

ಫೆರಾರಿ ಸಂಸ್ಥಾಪಕ ಎನ್ಜೊ ಫೆರಾರಿ ಅವರ ನಾಮಕರಣನ್ನು ಇದಕ್ಕೆ ಮಾಡಲಾಗಿದೆ. ಅಲ್ಲದೆ ಸೀಮಿತ 400 ಯುನಿಟ್ ಗಳಷ್ಟು ತಯಾರಿಸಲಾಗಿತ್ತು.

ಈಗ ಎನ್ಜೊ ಫೆರಾರಿ ಹೆಸರಿನ ಕೊನೆಯ ಹಾಗೂ 400ನೇ ಕಾರನ್ನು ಹರಾಜಿಡಲಾಗುತ್ತಿದ್ದು, ಭಾರಿ ಮೊತ್ತ ಸಂಗ್ರಹಿಸುವ ನಿರೀಕ್ಷೆಯಿದೆ.


Click it and Unblock the Notifications








