ಭಾರತಕ್ಕೆ ರಿ ಎಂಟ್ರಿ ಕೊಟ್ಟ ಐಕಾನಿಕ್ ಫೆರಾರಿ

By Nagaraja

ಬಹುತೇಕ ಎರಡು ವರ್ಷಗಳ ಬಳಿಕ ಫೆರಾರಿ ಶೋ ರೂಂ ಭಾರತಕ್ಕೆ ರಿ ಎಂಟ್ರಿ ಕೊಟ್ಟಿದೆ. ಇಟಲಿಯ ಈ ಐಕಾನಿಕ್ ಕಾರಿನ ನೂತನ ಶೋ ರೂಂ ಮುಂಬೈನಲ್ಲಿ ತೆರೆದುಕೊಂಡಿದೆ. ಇದರೊಂದಿಗೆ ಮುಂಬೈನಲ್ಲಿ ಸ್ಥಿತಗೊಂಡಿರುವ ಫೆರಾರಿಯ ನವನೀತ್ ಮೋಟಾರ್ಸ್ ಶೋ ರೂಂನಿಂದ ತಮ್ಮ ಕನಸಿನ ಕಾರನ್ನು ಪಡೆಯುವ ಅದೃಷ್ಟವನ್ನು ಗ್ರಾಹಕರು ಪಡೆಯಲಿದೆ. ನೂತನ ಫೆರಾರಿ ಶೋ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ ನಲ್ಲಿ ಸ್ಥಿತಗೊಂಡಿದೆ.

Also Read: ಒಂದಲ್ಲ, ಎರಡಲ್ಲ ಬರೋಬ್ಬರಿ 40 ಹಳದಿ ಫೆರಾರಿ ಕಾರುಗಳು

ಈಗ ತೆರೆದುಕೊಂಡಿರುವ ನೂತನ ಶೋ ರೂಂ ಪಶ್ಚಿಮ ಹಾಗೂ ದಕ್ಷಿಣ ಭಾರತದಿಂದ ದೊರಕುವ ಗ್ರಾಹಕರ ಬೇಡಿಕೆಗಳನ್ನು ಈಡೇರಿಸಲಿದೆ. ಇದು ವಾಣಿಜ್ಯ ನಗರಿ ಮುಂಬೈನಲ್ಲಿ ಸ್ಥಿತಗೊಂಡಿರುವುದರಿಂದ ಗರಿಷ್ಠ ಸಂಖ್ಯೆಯ ಉದ್ಯಮಿಗಳ ನೆಚ್ಚಿನ ಕಾರೆನಿಸಿಕೊಳ್ಳುವ ನಿರೀಕ್ಷೆಯಲ್ಲಿದೆ.

ಭಾರತಕ್ಕೆ ರಿ ಎಂಟ್ರಿ ಕೊಟ್ಟ ಐಕಾನಿಕ್ ಫೆರಾರಿ

ಭಾರತದಲ್ಲಿ ಫೆರಾರಿಗೆ ಅಸಂಖ್ಯಾತ ಸಂಖ್ಯೆಯ ಅಭಿಮಾನಿಗಳಿದ್ದು, ಖ್ಯಾತ ಉದ್ಯಮಿಗಳಾದ ರತನ್ ಟಾಟಾ ಹಾಗೂ ಗೌತಮ್ ಸಿಂಘಾನಿಯಾ ಅವರ ಬಳಿಕ ಈ ಐಕಾನಿಕ್ ಕಾರಿದೆ. ಈ ಹಿಂದೆ 2011ರಲ್ಲಿ ತಮ್ಮ ಫೆರಾರಿ ಕಾರನ್ನು ಸಚಿನ್ ತೆಂಡೂಲ್ಕರ್ ಮಾರಾಟ ಮಾಡಿರುವುದನ್ನು ನೀವಿಲ್ಲಿ ನೆನಪಿಸಿಕೊಳ್ಳಬಹುದಾಗಿದೆ.

ಭಾರತಕ್ಕೆ ರಿ ಎಂಟ್ರಿ ಕೊಟ್ಟ ಐಕಾನಿಕ್ ಫೆರಾರಿ

ಅಂಕಿಗಳ ಪ್ರಕಾರ ದೇಶದಲ್ಲಿ 50ರಿಂದ 60 ಫೆರಾರಿ ಕಾರುಗಳಿವೆ. ಈ ಸಂಖ್ಯೆಯಲ್ಲಿ ವೃದ್ಧಿಯಾಗುತ್ತಿದ್ದು, ಹೆಚ್ಚಿನ ಬೇಡಿಕೆ ಕಂಡುಬಂದಿದೆ. ಫೆರಾರಿ ಕಾರುಗಳನ್ನು ನೇರವಾಗಿ ಆಮದು ಮಾಡಿಕೊಳ್ಳುತ್ತಿರುವುದೇ ಇದಕ್ಕೆ ಉದಾಹರಣೆಯಾಗಿದೆ.

ಭಾರತಕ್ಕೆ ರಿ ಎಂಟ್ರಿ ಕೊಟ್ಟ ಐಕಾನಿಕ್ ಫೆರಾರಿ

ಕಳೆದ ಆಗಸ್ಟ್ ತಿಂಗಳಲ್ಲಿ ಫೆರಾರಿ ಕ್ಯಾಲಿಫೋರ್ನಿಯಾ ಟಿ ಬಿಡುಗಡೆಯಾದ ಬಳಿಕ ಎಂಟು ಇಂತಹ ಮಾದರಿಗಳಿಗೆ ಭಾರತದಲ್ಲಿ ಆರ್ಡರ್ ಲಭಿಸಿದ್ದವು. ಸದ್ಯ ಐದು ಮಾದರಿಗಳು ದೇಶದಲ್ಲಿ ಮಾರಾಟದಲ್ಲಿವೆ.

ಭಾರತಕ್ಕೆ ರಿ ಎಂಟ್ರಿ ಕೊಟ್ಟ ಐಕಾನಿಕ್ ಫೆರಾರಿ

2011ರಲ್ಲಿ ಮೊದಲ ಬಾರಿಗೆ ಮುಂಬೈ ಹಾಗೂ ದೆಹಲಿ ಶೋ ರೂಂ ಆರಂಭಿಸಿದ್ದ ಫೆರಾರಿ ಭಾರತಕ್ಕೆ ಎಂಟ್ರಿ ಕೊಟ್ಟಿತ್ತು. ಈಗ ಫರಾರಿ ಗ್ರಾಹಕರು ಎಕ್ಸ್ ಜೇಂಜ್ ಆಫರ್ ಮೂಲಕವೂ ತಮ್ಮ ಕಾರನ್ನು ಬದಲಾಯಿಸಿಕೊಳ್ಳಬಹುದಾಗಿದೆ.

ಭಾರತದಲ್ಲಿರುವ ಫೆರಾರಿ ಮಾದರಿಗಳು (ಎಕ್ಸ್ ಶೋ ರೂಂ)

ಭಾರತದಲ್ಲಿರುವ ಫೆರಾರಿ ಮಾದರಿಗಳು (ಎಕ್ಸ್ ಶೋ ರೂಂ)

  • ಫೆರಾರಿ ಕ್ಯಾಲಿಫೋರ್ನಿಯಾ ಟಿ: 3.45 ಕೋಟಿ ರು.
  • ಫೆರಾರಿ 488 ಜಿಟಿಬಿ: 3.99 ಕೋಟಿ ರು.
  • ಫೆರಾರಿ 458 ಸ್ಪೈಡರ್: 4.22 ಕೋಟಿ ರು.
  • ಫೆರಾರಿ 458 ಸ್ಪೆಷಲ್: 4.40 ಕೋಟಿ ರು.
  • ಫೆರಾರಿ ಎಫ್12 ಬರ್ಲಿನೆಟ್ಟಾ: 4.87 ಕೋಟಿ ರು.
  • ಭಾರತಕ್ಕೆ ರಿ ಎಂಟ್ರಿ ಕೊಟ್ಟ ಐಕಾನಿಕ್ ಫೆರಾರಿ

    ಸೂಪರ್ ಕಾರಲ್ಲಿ ಬೊಂಬೆಯಾಟ; ಪೊಲೀಸ್‌ ತಕ್ಕ ಶಾಸ್ತಿ

Most Read Articles

Kannada
English summary
Ferrari Inaugurates Showroom In Mumbai
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X