ಶಕ್ತಿಶಾಲಿ ಫಿಯೆಟ್ ಅಬಾರ್ತ್ ಪುಂಟೊ ಬಿಡುಗಡೆಗೆ ದಿನಾಂಕ ನಿಗದಿ

By Nagaraja

ಕೊನೆಗೂ ಫಿಯೆಟ್ ಅಬಾರ್ತ್ ಪುಂಟೊ ಬಿಡುಗಡೆಗೆ ದಿನಾಂಕ ನಿಗದಿಯಾಗಿದ್ದು, 2015 ಅಕ್ಟೋಬರ್ 19ರಂದು ಭಾರತ ಪ್ರವೇಶ ಪಡೆಯಲಿದೆ. ಇದಕ್ಕೆ ಸಂಬಂಧಪಟ್ಟಂತೆ ದೇಶದಲ್ಲಿ ಸ್ಥಿತಗೊಂಡಿರುವ ಇಟಲಿಯ ಈ ಐಕಾನಿಕ್ ಸಂಸ್ಥೆಯ ಅಧಿಕೃತ ಡೀಲರ್ ಶಿಪ್ ಗಳಲ್ಲಿ ಬುಕ್ಕಿಂಗ್ ಸ್ವೀಕರಿಸಲಾಗುತ್ತಿದೆ.

ಆಸಕ್ತ ಗ್ರಾಹಕರು ರು. 50,000 ಪಾವತಿಸಿ ಶಕ್ತಿಶಾಲಿ ಫಿಯೆಟ್ ಅಬಾರ್ತ್ ಪುಂಟೊ ಮುಂಗಡವಾಗಿ ಬುಕ್ಕಿಂಗ್ ಮಾಡಿಕೊಳ್ಳಬಹುದಾಗಿದೆ. ಪ್ರಸ್ತುತ ಕಾರು 10 ಲಕ್ಷ ರು.ಗಳೊಳಗಿನ ಬೆಲೆ ಪರಿಧಿಯಲ್ಲಿ ಬಿಡುಗಡೆಯಾಗಲಿದೆ.

ಫಿಯೆಟ್ ಅಬಾರ್ತ್ ಪುಂಟೊ

ಈ ವಿಭಾಗದಲ್ಲಿ ಫೋಕ್ಸ್ ವ್ಯಾಗನ್ ಪೊಲೊ ಜಿಟಿ ಟಿಎಸ್ ಐ ಹಾಗೂ ಟಿಡಿಐ ಮಾದರಿಗಳಿದ್ದರೂ ಫಿಯೆಟ್ ನಿರ್ವಹಣಾ ಕಾರು ಗ್ರಾಹಕರಿಗೆ ಹೊಸ ಅನುಭವ ನೀಡಲಿದೆ.

ಇದರಲ್ಲಿ 1.4 ಲೀಟರ್ ಟಿ-ಜೆಟ್ ಟರ್ಬೊಚಾರ್ಜ್ಡ್ ಪೆಟ್ರೋಲ್ ಎಂಜಿನ್ ಆಳವಡಿಕೆಯಾಗಲಿದ್ದು, 145 ಅಶ್ವಶಕ್ತಿ ಉತ್ಪಾದಿಸಲಿದೆ. ಇದಕ್ಕೆ ಸಮಾನವಾದ ಎಂಜಿನ್ ಅಬಾರ್ಬ್ ಅವೆಂಚ್ಯುರಾದಲ್ಲಿ (140 ಅಶ್ವಶಕ್ತಿ) ಬಳಕೆಯಾಗುತ್ತಿದೆ. ನಿಮ್ಮ ಮಾಹಿತಿಗಾಗಿ ಸಾಮಾನ್ಯ ಪುಂಟೊ ಇವೊ ಮಾದರಿಗಳು 1.2 ಲೀಟರ್, 1.4 ಲೀಟರ್ ಹಾಗೂ 1.3 ಲೀಟರ್ ಮಲ್ಟಿಜೆಟ್ ಡೀಸೆಲ್ ಎಂಜಿನ್ ಆಯ್ಕೆಗಳಲ್ಲಿ ಲಭ್ಯವಿರುತ್ತದೆ.

ಫಿಯೆಟ್ ಅಬಾರ್ತ್ ಪುಂಟೊ

ಸ್ಕಾರ್ಪಿಯೊ ಲಾಂಛನ, 16 ಇಂಚುಗಳ ಡ್ಯುಯಲ್ ಟೋನ್ ಅಲಾಯ್ ವೀಲ್, ಡಿಕಾಲ್ಸ್, ವಿಂಗ್ ಮಿರರ್, ಗ್ರಿಲ್ ಹೆಚ್ಚು ಆಕರ್ಷಣೆಯಾಗಲಿದೆ. ಹಾಗೆಯೇ ಕೆಂಪು, ಹಳದಿ ವರ್ಣದ ಸ್ಟಿಚ್ಚಿಂಗ್ ಸೀಟು, ಸ್ಟೀರಿಂಗ್ ವೀಲ್ ನಲ್ಲಿ ಅಬಾರ್ತ್ ಲಾಂಛನ ಇತರ ಪ್ರಮುಖ ವೈಶಿಷ್ಟ್ಯವಾಗಿರಲಿದೆ.
Most Read Articles

Kannada
Read more on ಫಿಯೆಟ್ fiat
English summary
Fiat Abarth Punto India Launch Confirmed For 19th October
Story first published: Friday, October 9, 2015, 14:37 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X