ಫಿಯೆಟ್ ಡಬಲ್ ಧಮಾಕಾ ಜೊತೆ 1 ಲಕ್ಷ ವರೆಗೂ ಪ್ರಯೋಜನ

Written By:

ಇಟಲಿ ಮೂಲದ ಐಕಾನಿಕ್ ಸಂಸ್ಥೆಯಾಗಿರುವ ಫಿಯೆಟ್ ಇಂಡಿಯಾ, ದೇಶದಲ್ಲಿ ಮಾರಾಟದಲ್ಲಿರುವ ತನ್ನೆಲ್ಲ ಶ್ರೇಣಿಯ ಕಾರುಗಳಿಗೆ ಡಬಲ್ ಧಮಾಕಾ ಸೇರಿದಂತೆ ಗರಿಷ್ಠ ಒಂದು ಲಕ್ಷ ರು.ಗಳ ವರೆಗಿನ ಪ್ರಯೋಜನವನ್ನು ಮುಂದಿಟ್ಟಿದೆ.

ಪ್ರಸ್ತುತ ಹಬ್ಬದ ಆವೃತ್ತಿಯಲ್ಲಿ ಗರಿಷ್ಠ ಸಂಖ್ಯೆಯ ಮಾರಾಟವನ್ನು ಗುರಿಯಾಗಿರಿಸಿಕೊಂಡಿರುವ ಫಿಯೆಟ್ ಆಯ್ದ ಮಾದರಿಗಳಿಗೆ ಡಬಲ್ ಧಮಾಕಾ ಆಫರ್ ಮುಂದಿಡುತ್ತಿದೆ. ಇದರಂತೆ ಅದೃಷ್ಟವಂತ ಗ್ರಾಹಕರು ಡಬಲ್ ಕ್ಯಾಶ್ ಬ್ಯಾಕ್ ಆಫರ್ ಪಡೆಯಬಹುದಾಗಿದೆ.

ಫಿಯೆಟ್

ಲಿನಿಯಾ ಕ್ಲಾಸಿಕ್

ಫಿಯೆಟ್ ಸಂಸ್ಥೆಯು ತನ್ನ ಜನಪ್ರಿಯ ಲಿನಿಯಾ ಕ್ಲಾಸಿಕ್ ಮಾದರಿಗೆ 40,000 ರು.ಗಳ ವರೆಗಿನ ಪ್ರಯೋಜನ ನೀಡುತ್ತಿದೆ.

ಪುಂಟೊ ಇವೊ

ಅದೇ ರೀತಿ ಫಿಯೆಟ್ ಪುಂಟೊ ಇವೊ ಖರೀದಿ ವೇಳೆಯಲ್ಲಿ ಗರಿಷ್ಠ 70,000 ರು.ಗಳ ವರೆಗಿನ ಪ್ರಯೋಜನ ನಿಮ್ಮದಾಗಿಸಬಹುದಾಗಿದೆ.

ಅವೆಂಚ್ಯುರಾ

ಅದೇ ರೀತಿ ಅವೆಂಚ್ಯುರಾ ಖರೀದಿ ವೇಳೆಯಲ್ಲಿ 80,000 ರು.ಗಳ ವರೆಗಿನ ಪ್ರಯೋಜನ ನಿಮ್ಮದಾಗಲಿದೆ.

ನ್ಯೂ ಲಿನಿಯಾ

ಇತ್ತೇಚೆಗಷ್ಟೇ ಮಾರುಕಟ್ಟೆ ಪ್ರವೇಶಿಸಿರುವ ಹೊಸ ಲಿನಿಯಾ ಖರೀದಿಯಲ್ಲಿ ಅತಿ ಹೆಚ್ಚು ಅಂದರೆ 1.10 ಲಕ್ಷ ರು.ಗಳ ವರೆಗಿನ ಪ್ರಯೋಜನ ನಿಮ್ಮದಾಗಲಿದೆ.

ಸದ್ಯ ಫಿಯೆಟ್ ಸಂಸ್ಥೆಯು ದೇಶದ್ಯಾಂತ 131 ಡೀಲರ್ ಶಿಪ್ ಹಾಗೂ 125ರಷ್ಟು ಸರ್ವಿಸ್ ಕೇಂದ್ರಗಳನ್ನು ಹೊಂದಿದೆ. ಅಲ್ಲದೆ ಅಕ್ಟೋಬರ್ ತಿಂಗಳಲ್ಲಿ ಆಫರ್ ಲಭ್ಯವಾಗಲಿದೆ.

ಈ ನಡುವೆ ಕೆಲವು ದಿನಗಳ ಹಿಂದೆಯಷ್ಟೇ ಎಂಟ್ರಿ ಕೊಟ್ಟಿರುವ ಅಬಾರ್ತ್ 595 Competizione ಮಾದರಿಗೆ ಯಾವುದೇ ಆಫರ್ ಗಳು ಅನ್ವಯವಾಗುವುದಿಲ್ಲ. ಸಂಸ್ಥೆಯೀಗ ಮುಂದಿನ 19ರಂದು ತನ್ನ ಎರಡನೇ ಅಬಾರ್ತ್ ಪುಂಟೊ ಮಾದರಿಯನ್ನು ಬಿಡುಗಡೆ ಮಾಡುವ ತಯಾರಿಯಲ್ಲಿ ತೊಡಗಿದೆ.

Read more on ಫಿಯೆಟ್ fiat
English summary
Fiat Announce Benefits Worth INR One Lakh & Double Dhamaka
Story first published: Tuesday, October 13, 2015, 14:28 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark