ಷೆವರ್ಲೆ ಸ್ಪಿನ್‌ ಮೋಡಿಗೆ ಕ್ಲೀನ್ ಬೌಲ್ಡ್ ಆದಿತೇ ಭಾರತ?

Written By:

ಅಮೆರಿಕ ಮೂಲದ ಐಕಾನಿಕ್ ಜನರಲ್ ಮೋಟಾರ್ಸ್ ಕಾರು ಬ್ರಾಂಡ್ ಆಗಿರುವ ಷೆವರ್ಲೆ ಮುಂದಿನ ವರ್ಷಗಳಲ್ಲಿ ಭಾರತಕ್ಕೆ ಆಕರ್ಷಕ ಮಾದರಿಗಳನ್ನು ಪರಿಚಯಿಸುವ ಯೋಜನೆ ಹೊಂದಿದೆ. ಇದರಲ್ಲಿ ಸ್ಪಿನ್ ಎಂಪಿವಿ ಕೂಡಾ ಒಂದಾಗಿದೆ.

ವರದಿಗಳ ಪ್ರಕಾರ ಷೆವರ್ಲೆ ಸ್ಪಿನ್ ಬಹು ಬಳಕೆಯ ವಾಹನವು ಭಾರತಕ್ಕೆ 2016ರಲ್ಲಿ ಪ್ರವೇಶಿಸಲಿದೆ. ಇದಕ್ಕೂ ಮೊದಲು ಪ್ರಸಕ್ತ ಸಾಲಿನಲ್ಲೇ ಟ್ರಯಲ್‌ಬ್ಲೇಜರ್ ಪರಿಚಯಿಸುವ ಯೋಜನೆಯನ್ನು ಸಂಸ್ಥೆಯು ಹೊಂದಿದೆ.

To Follow DriveSpark On Facebook, Click The Like Button
chevrolet spin

ಇದರಿಂದಾಗಿ ಷೆವರ್ಲೆ ಸ್ಪಿನ್ ಮೋಡಿಗೆ ಕ್ಲೀನ್ ಬೌಲ್ಡ್ ಆದಿತೇ ಭಾರತ ಎಂಬುದನ್ನು ಕಾದು ನೋಡಬೇಕಾಗಿದೆ. ಈ ಮೂಲಕ ಭಾರತದಲ್ಲಿರುವ ತನ್ನ ಶ್ರೇಣಿಯ ವಾಹನಗಳನ್ನು ವಿಸ್ತರಿಸುವ ಯೋಜನೆಯನ್ನು ಸಂಸ್ಥೆ ಹೊಂದಿದ್ದು, ಕುಸಿದಿರುವ ಮಾರಾಟಕ್ಕೆ ಪುನರ್ಜೀವ ನೀಡಲಿದೆ.

chevrolet trailblazer

ಬೆಳೆದು ಬರುತ್ತಿರುವ ಭಾರತ ಮಾರುಕಟ್ಟೆಯಲ್ಲಿ ಎಸ್‌ಯುವಿ ಜೊತೆಗೆ ಎಂಪಿವಿ ಮಾದರಿಗಳಿಗೆ ಅತಿ ಹೆಚ್ಚಿನ ಬೇಡಿಕೆಯಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಷೆವರ್ಲೆ ಮಾರಾಟ ತಂತ್ರ ಅನುಸರಿಸುತ್ತಿದೆ. ಬ್ಯಾಂಕಾಂಕ್‌ನಲ್ಲಿ ಫೆಬ್ರವರಿ 13ರಂದು ಸೇರಿದ ವಾರಷಿಕ ಸಭೆಯಲ್ಲಿ ಜನಲರ್ ಮೋಟಾರ್ಸ್ ಡೀಲರುಗಳು ಇದನ್ನು ಬಹಿರಂಗಪಡಿಸಿದ್ದು, ರಫ್ತು ಸಾಮರ್ಥ್ಯವನ್ನು ವೃದ್ಧಿಸುವುದಾಗಿ ಜಿಎಂ ಎಕ್ಸಿಕ್ಯೂಟಿವ್ ಉಪಾಧ್ಯಕ್ಷರಾಗಿರುವ ಸ್ಟಿಫನ್ ಜೆಕೊಬ್ ವಿವರಿಸಿದ್ದಾರೆ.

English summary
General Motors India to launch Chevrolet Trailblazer SUV in 2015 and Spin MPV in 2016
Story first published: Thursday, February 19, 2015, 8:52 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark