ದೇಶದ ಚೊಚ್ಚಲ ಕ್ರೀಡಾ ಕಾರಿನ ಬಗ್ಗೆ ನಿಮಗೆ ಗೊತ್ತಿರದ 10 ಸತ್ಯಗಳು!

By Nagaraja

ಭಾರತದ ಚೊಚ್ಚಲ ಕ್ರೀಡಾ ಕಾರು ಡಿಸಿ ಅವಂತಿ ದೇಶದ ರಸ್ತೆಗಿಳಿಯಲು ಸಜ್ಜಾಗಿ ನಿಂತಿದೆ. ವರದಿಗಳ ಪ್ರಕಾರ ಪ್ರಸಕ್ತ ತಿಂಗಳಿನಲ್ಲೇ ಡಿಸಿ ಅವಂತಿ ಭಾರತದಲ್ಲಿ ಭರ್ಜರಿ ಬಿಡುಗಡೆ ಕಾಣಲಿದೆ.

ಈ ಹಿಂದೆ 2014 ಆಟೋ ಎಕ್ಸ್ ಪೋದಲ್ಲಿ ಭರ್ಜರಿ ಅನಾವರಣ ಕಂಡಿದ್ದ ಡಿಸಿ ಡಿಸೈನ್ ಬಗ್ಗೆ ನಿಮಗೆ ಗೊತ್ತಿರದ 10 ಸತ್ಯಗಳನ್ನು ನಾವಿಲ್ಲಿ ಬಹಿರಂಗ ಪಡಿಸಲು ಇಚ್ಛಸುತ್ತಿದ್ದೇವೆ. ಇದಕ್ಕಾಗಿ ಫೋಟೊ ಸ್ಲೈಡ್ ನತ್ತ ಮುಂದುವರಿಯಿರಿ.

10. ದಿಲೀಪ್ ಛಾಬ್ರಿಯಾ - ಡಿಸಿ ಡಿಸೈನ್

10. ದಿಲೀಪ್ ಛಾಬ್ರಿಯಾ - ಡಿಸಿ ಡಿಸೈನ್

ನಿಮ್ಮಗೆಲ್ಲರಿಗೂ ತಿಳಿದಿರುವಂತೆಯೇ ಡಿಸಿ ಡಿಸೈನ್ ರೂವಾರಿ ದಿಲೀಪ್ ಛಾಬ್ರಿಯಾ ನೇತೃತ್ವದಲ್ಲಿ ದೇಶದ ಚೊಚ್ಚಲ ಸೂಪರ್ ಕಾರು ಡಿಸಿ ಅವಂತಿ ರಸ್ತೆಗಿಳಿಯಲು ಕ್ಷಣಗಣನೆ ಆರಂಭವಾಗಿದೆ. ಇದು ಪೂರ್ಣವಾಗಿಯೂ ಸ್ವದೇಶಿ ನಿರ್ಮಿತ ಕಾರು ಎಂದೆನಿಸಿಕೊಳ್ಳಲಿದೆ.

09. ಬೆಲೆ

09. ಬೆಲೆ

ದೇಶದ ಮೊದಲ ಕ್ರೀಡಾ ಕಾರಿನ ಅಂದಾಜು ಬೆಲೆ 30ರಿಂದ 40 ಲಕ್ಷ ರು.ಗಳ ಅಸುಪಾಸಿನಲ್ಲಿರಲಿದೆ. ವಿದೇಶಿ ಸ್ಪೋರ್ಟ್ಸ್ ಕಾರುಗಳಿಗೆ ಹೋಲಿಸಿದಾಗ ಡಿಸಿ ಅವಂತಿ ತುಂಬಾನೇ ಅಗ್ಗದ ದರಗಳಲ್ಲಿ ಗ್ರಾಹಕರನ್ನು ತಲುಪಲಿದೆ.

08. ಎಂಜಿನ್

08. ಎಂಜಿನ್

ಆರಂಭದಲ್ಲಿ ಫೋರ್ಡ್ ಇಕೊಬೂಸ್ಟ್ ಎಂಜಿನ್ ಆಳವಡಿಸುವ ಯೋಜನೆ ಇದ್ದರೂ ವೆಚ್ಚ ಕಡಿಮೆ ಮಾಡುವ ನಿಟ್ಟಿನಲ್ಲಿ ರೆನೊದಿಂದ ಆಮದು ಮಾಡಲಾದ 2.0 ಲೀಟರ್ ಫೋರ್ ಸಿಲಿಂಡರ್ ಟರ್ಬೊ ಚಾರ್ಜ್ಡ್ ಪೆಟ್ರೋಲ್ ಎಂಜಿನ್ ಜೋಡಣೆ ಮಾಡಲಾಗಿದೆ. ಇದು 340 ತಿರುಗುಬಲದಲ್ಲಿ 250 ಅಶ್ವಶಕ್ತಿ ಉತ್ಪಾದಿಸಲಿದೆ. ಹಾಗೆಯೇ ಭವಿಷ್ಯದಲ್ಲಿ ಹೋಂಡಾದ ಹೆಚ್ಚು ಶಕ್ತಿಶಾಲಿ ವಿ6 ಎಂಜಿನ್ (394 ಅಶ್ವಶಕ್ತಿ) ಆಮದು ಮಾಡುವ ಯೋಜನಯಿದೆ. ಇನ್ನು ಆರು ಸ್ಪಿಡ್ ಡ್ಯುಯಲ್ ಕ್ಲಚ್ ಗೇರ್ ಬಾಕ್ಸ್ ಇದರಲ್ಲಿರಲಿದೆ.

07. ಗರಿಷ್ಠ ವೇಗ

07. ಗರಿಷ್ಠ ವೇಗ

ಸಂಸ್ಥೆಯೇ ತಿಳಿಸುವಂತೆಯೇ ಹೆಸರಿಗೆ ತಕ್ಕಂತೆ ಡಿಸಿ ಅವಂತಿ 6 ಸಕೆಂಡುಗಳಲ್ಲೇ ಗಂಟೆಗೆ 0-100 ಕೀ.ಮೀ. ವೇಗವರ್ಧಿಸುವ ಸಾಮರ್ಥ್ಯ ಹೊಂದಿರಲಿದೆ.

 06. 125 ಕೋಟಿ ಹೂಡಿಕೆ

06. 125 ಕೋಟಿ ಹೂಡಿಕೆ

ಡಿಸಿ ಅವಂತಿ ಯೋಜನೆಗಾಗಿ ಬರೋಬ್ಬರಿ 125 ಕೋಟಿ ರು.ಗಳನ್ನು ಹೂಡಿಕೆ ಮಾಡಿರುವ ದಿಲೀಪ್, ಪುಣೆಯ ಘಟಕದಲ್ಲಿ ನಿರ್ಮಾಣ ಆರಂಭಿಸಿದ್ದಾರೆ. ಅಲ್ಲದೆ "ಈ ಮಹತ್ತರ ಯೋಜನೆಗಾಗಿ ಎಲ್ಲ ರೀತಿಯ ಅಪಾಯವನ್ನು ಆಹ್ವಾನಿಸಿಕೊಂಡಿದ್ದೇನೆ" ಎಂದಿದ್ದಾರೆ.

05. ತ್ವರಿತ ಬುಕ್ಕಿಂಗ್

05. ತ್ವರಿತ ಬುಕ್ಕಿಂಗ್

ಬಿಡುಗಡೆಗೂ ಮೊದಲೇ ಡಿಸಿ ಅವಂತಿ 500ರಷ್ಟು ಬುಕ್ಕಿಂಗ್ ತಲುಪಿದೆ. ವರ್ಷಕ್ಕೆ 200 ಸೇರಿದಂತೆ ಒಟ್ಟಾರೆ 2000 ಯುನಿಟ್ ನಿರ್ಮಿಸುವುದು ಸಂಸ್ಥೆಯ ಇರಾದೆಯಾಗಿದೆ.

 04. ವಿನ್ಯಾಸ, ಆಯಾಮ

04. ವಿನ್ಯಾಸ, ಆಯಾಮ

ಎರಡು ಡೋರಿನ ಕೂಪೆ ದೇಹ ಶೈಲಿಯನ್ನು ನೂತನ ಡಿಸಿ ಅವಂತಿ ಕ್ರೀಡಾ ಕಾರು ಹೊಂದಿದೆ.

ಚಂಕ್ರಾಂತರ - 2,700 ಎಂಎಂ

ಉದ್ದ - 4,623 ಎಂಎಂ

ಅಗಲ - 1,967 ಎಂಎಂ

ಎತ್ತರ - 1,213 ಎಂಎಂ

ಕರ್ಬ್ ಭಾರ - 1,562 ಕೆ.ಜಿ

03. ವಿಶೇಷತೆ

03. ವಿಶೇಷತೆ

ಪ್ರೀಮಿಯಂ ಎಕ್ಸ್ ಟೀರಿಯರ್ ಕಲರ್,

20 ಇಂಚುಗಳ ಅಲಾಯ್ ವೀಲ್,

ಗರಿಷ್ಠ ಸ್ಥಳಾವಕಾಶ,

ಗ್ರಾಹಕರ ಬಯಕೆಗೆ ತಕ್ಕಂತೆ ಕಸ್ಟಮೈಸ್ಡ್ ಮಾಡುವ ಅವಕಾಶ

02. ವಿಶೇಷತೆ

02. ವಿಶೇಷತೆ

ರೋಲ್ ಕೇಜ್ ಡಿಸೈನ್ ಬಾಡಿ,

ಉನ್ನತ ಗುಣಮಟ್ಟದ ಇಟಲಿಯನ್ ರಬ್ಬರ್,

ಎಲ್ಲ ಚಕ್ರಗಳಿಗೂ ಎಬಿಎಸ್,

ಸುರಕ್ಷತೆ ಹಾಗೂ ನಿರ್ವಹಣೆಯ ಸರಿಯಾದ ಹೊಂದಾಣಿಕೆ

01. ವಿಶೇಷತೆ

01. ವಿಶೇಷತೆ

ಹಗುರ ಹಾಗೂ ಐಷಾರಾಮಿ

ರಿವರ್ಸ್ ಕ್ಯಾಮೆರಾ

ಬೈ ಹ್ಯಾಲಗನ್ ಪ್ರೊಜೆಕ್ಟರ್ ಹೆಡ್ ಲ್ಯಾಂಪ್,

ದೂರವ್ಯಾಪ್ತಿಯ ವರೆಗೂ ಗೋಚರತೆ,

ಅದ್ಭುತ ಗ್ರೌಂಡ್ ಕ್ಲಿಯರನ್ಸ್,

ದೇಶದ ಚೊಚ್ಚಲ ಕ್ರೀಡಾ ಕಾರಿನ ಬಗ್ಗೆ ನಿಮಗೆ ಗೊತ್ತಿರದ 10 ಸತ್ಯಗಳು!

ಈಗ ದೇಶದ ಮೊದಲ ಕ್ರೀಡಾ ಕಾರಿನ ಬಗ್ಗೆ ನಿಮ್ಮ ಅನಿಸಿಕೆಗಳನ್ನು ನಮ್ಮ ಜೊತೆ ಹಂಚಿಕೊಳ್ಳಿರಿ.

Most Read Articles

Kannada
English summary
India's First Sports Car DC Avanti: Ten things to know
Story first published: Saturday, April 4, 2015, 17:06 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X