ಅತಿ ಶೀಘ್ರದಲ್ಲೇ ಮಾರುತಿ ಸ್ವಿಫ್ಟ್ ಎಎಂಟಿ ಕಾರು ಬಿಡುಗಡೆ

By Nagaraja

ದೇಶದ ನಂ.1 ಪ್ರಯಾಣಿಕ ಕಾರು ಸಂಸ್ಥೆಯಾಗಿರುವ ಮಾರುತಿ ಸುಜುಕಿ, ಅತೀ ಶೀಘ್ರದಲ್ಲೇ ಸ್ವಿಫ್ಟ್ ಆಟೋಮ್ಯಾಟಿಕ್ ಕಾರನ್ನು ಬಿಡುಗಡೆ ಮಾಡಲಿದೆ. ಈ ಮೂಲಕ ಗರಿಷ್ಠ ಮಾರಾಟವನ್ನು ಗುರಿಯಿರಿಸಿಕೊಂಡಿದೆ.

Also Read: ಅಬ್ಬಬ್ಬಾ, ಮಾರುತಿ ಸ್ವಿಫ್ಟ್ ಮೈಲೇಜ್ 48.2 ಕೀ.ಮೀ. ಮುಂದಕ್ಕೆ ಓದಿ

ದೇಶದ ಸರ್ವಕಾಲಿಕ ಶ್ರೇಷ್ಠ ಕಾರುಗಳ ಸಾಲಿನಲ್ಲಿ ಗುರುತಿಸಿಕೊಂಡಿರುವ ಸ್ವಿಫ್ಟ್, ಆಟೋಮ್ಯಾಟಡ್ ಮ್ಯಾನುವಲ್ ಟ್ರಾನ್ಸ್ ಮಿಷನ್ (ಎಎಂಟಿ) ಗೇರ್ ಬಾಕ್ಸ್ ಜೊತೆಗೆ ಕೆಲವೊಂದು ಗಮನಾರ್ಹ ಬದಲಾವಣೆಗಳನ್ನು ಪಡೆಯಲಿದೆ.

ಅತಿ ಶೀಘ್ರದಲ್ಲೇ ಮಾರುತಿ ಸ್ವಿಫ್ಟ್ ಎಎಂಟಿ ಕಾರು ಬಿಡುಗಡೆ

ಇದಕ್ಕೂ ಮೊದಲು ಸೆಲೆರಿಯೊ ಹಾಗೂ ಆಲ್ಟೊ ಕೆ10 ಮಾದರಿಯಲ್ಲಿ ಕಂಡುಬಂದಿರುವದಕ್ಕೆ ಸಮಾನವಾದ ಎಎಂಟಿ ಗೇರ್ ಬಾಕ್ಸ್ ನಿರೀಕ್ಷೆ ಮಾಡಬಹುದಾಗಿದೆ. ಇದನ್ನು ಇಟಲಿಯ ಪ್ರಖ್ಯಾತ ಮ್ಯಾಗ್ನೆಟ್ಟಿ ಮರೆಲ್ಲಿ ಒದಗಿಸಲಿದೆ.

ಅತಿ ಶೀಘ್ರದಲ್ಲೇ ಮಾರುತಿ ಸ್ವಿಫ್ಟ್ ಎಎಂಟಿ ಕಾರು ಬಿಡುಗಡೆ

ನೂತನ ಸ್ವಿಫ್ಟ್ ಕಾರಲ್ಲಿ 1.2 ಲೀಟರ್ ಕೆ ಸಿರೀಸ್ ಪೆಟ್ರೋಲ್ ಎಂಜಿನ್ ನಲ್ಲಿ 4 ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಳವಡಿಕೆಯಾಗಲಿದೆ. ಆದರೆ ಡೀಸೆಲ್ ವೆರಿಯಂಟ್ ನಲ್ಲಿ ಈ ಸೌಲಭ್ಯ ದೊರಕವುದಿಲ್ಲ.

ಅತಿ ಶೀಘ್ರದಲ್ಲೇ ಮಾರುತಿ ಸ್ವಿಫ್ಟ್ ಎಎಂಟಿ ಕಾರು ಬಿಡುಗಡೆ

ಆಟೋ ಗೇರ್ ಬಾಕ್ಸ್ ಆಗಮನದೊಂದಿಗೆ ಸ್ವಿಫ್ಟ್ ದರದಲ್ಲೂ ಕೊಂಚ ಏರಿಕೆಯಾಗುವ ಸಾಧ್ಯತೆಯಿದೆ.

ಅತಿ ಶೀಘ್ರದಲ್ಲೇ ಮಾರುತಿ ಸ್ವಿಫ್ಟ್ ಎಎಂಟಿ ಕಾರು ಬಿಡುಗಡೆ

ಸ್ವಿಫ್ಟ್ ಪರಿಷ್ಕೃತ ಮಾದರಿಯು 2017ರಲ್ಲಿ ಎಂಟ್ರಿ ಕೊಡಲಿದ್ದು, ಇದೇ ವೇಳೆಯಲ್ಲಿ ಸಿಯಾಝ್ ಸಮಾನವಾದ ಸುಜುಕಿಯ ಸ್ಮಾರ್ಟ್ ಹೈಬ್ರಿಡ್ ವೆಹಿಕಲ್ (ಎಸ್‌ಎಚ್‌ವಿಎಸ್) ತಂತ್ರಜ್ಞಾನ ಬಳಕೆಯಾಗಲಿದೆ.

ಅತಿ ಶೀಘ್ರದಲ್ಲೇ ಮಾರುತಿ ಸ್ವಿಫ್ಟ್ ಎಎಂಟಿ ಕಾರು ಬಿಡುಗಡೆ

ತನ್ನ ಶ್ರೇಣಿಯ ಎಲ್ಲ ಕಾರುಗಳಲ್ಲಿ ಎಎಂಟಿ ಆಯ್ಕೆ ನೀಡುವುದು ಮಾರುತಿ ಗುರಿಯಾಗಿದೆ. ಇದು ಪಟ್ಟಣ ಪ್ರದೇಶದಲ್ಲೂ ಅತ್ಯುತ್ತಮ ಚಾಲನಾ ಅನುಭವ ನೀಡಲಿದೆ.

ಇವನ್ನೂ ಓದಿ

ಜನಪ್ರಿಯ ಸ್ವಿಫ್ಟ್ ಕುರಿತಾಗಿನ 9 ಸತ್ಯಗಳು!

Most Read Articles

Kannada
English summary
Maruti Suzuki Swift AMT Option Could Launch Soon
Story first published: Thursday, December 3, 2015, 11:08 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X