ಮಾರುತಿ ಸ್ವಿಫ್ಟ್ ಡಿಜೈರ್ ಆಟೋ ಗೇರ್ ಶಿಫ್ಟ್ ಕಾರು ಬಿಡುಗಡೆಗೆ ಕ್ಷಣಗಣನೆ

Written By:

ಆಟೋ ವಲಯದಿಂದ ಮಗದೊಂದು ಎಕ್ಸ್ ಕ್ಲೂಸಿವ್ ಸುದ್ದಿ ವಾಹನ ಪ್ರೇಮಿಗಳನ್ನು ತಲುಪಿದೆ. ನೀವೆಲ್ಲರೂ ಕಾತರದಿಂದ ಕಾದು ಕುಳಿತಿದ್ದ ಮಾರುತಿ ಸುಜುಕಿ ಸ್ವಿಫ್ಟ್ ಡಿಜೈರ್ ಸೆಮಿ ಆಟೋಮ್ಯಾಟಿಕ್ ಕಾರು ಬಿಡುಗಡೆಗೆ ಕಾಲ ಸನ್ನಿಹಿತವಾಗಿದೆ.

Also Read: ಸ್ವಿಫ್ಟ್ ಡಿಜೈರ್ 10 ಲಕ್ಷ ಮೈಲುಗಲ್ಲಿನ ಹಿಂದಿರುವ 10 ಗುಟ್ಟುಗಳು

ಮಾರುತಿ ಸುಜುಕಿ ಸ್ವಿಫ್ಟ್ ಡಿಜೈರ್ ಆಟೋಮ್ಯಾಟಡ್ ಮ್ಯಾನುವಲ್ ಟ್ರಾನ್ಸ್ ಮಿಷನ್ (ಎಎಂಟಿ) ಕಾರು ಅತಿ ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಈ ಮುಖಾಂತರ ಮಗದೊಂದು ಕಾಂಪಾಕ್ಟ್ ಸೆಡಾನ್ ಕಾರಿನ ಅಬ್ಬರಿಸಲು ಸಮಯ ಆಗಮನವಾಗಿದೆ.

ಮಾರುತಿ ಸ್ವಿಫ್ಟ್ ಡಿಜೈರ್ ಆಟೋ ಗೇರ್ ಶಿಫ್ಟ್ ಕಾರು ಬಿಡುಗಡೆಗೆ ಕ್ಷಣಗಣನೆ

ದೇಶದ ನಂ.1 ಸಂಸ್ಥೆಯು ಇದನ್ನು ಆಟೋ ಗೇರ್ ಶಿಫ್ಟ್ ಅಥವಾ ಎಜಿಎಸ್ ಎಂದು ವಿಶ್ಲೇಷಿಸಲಿದ್ದು, ಸ್ವಿಫ್ಟ್ ಡಿಜೈರ್ ಡೀಸೆಲ್ ವೆರಿಯಂಟ್ ನಲ್ಲಿ ಮಾತ್ರ ಈ ತಂತ್ರಗಾರಿಕೆ ಆಳವಡಿಸಲಾಗುವುದು.

ಚಿತ್ರ ಕೃಪೆ: ಗಾಡಿವಾಡಿ ಡಾಟ್ ಕಾಮ್

ಮಾರುತಿ ಸ್ವಿಫ್ಟ್ ಡಿಜೈರ್ ಆಟೋ ಗೇರ್ ಶಿಫ್ಟ್ ಕಾರು ಬಿಡುಗಡೆಗೆ ಕ್ಷಣಗಣನೆ

2016 ವರ್ಷಾರಂಭದಲ್ಲಿ ಮಾರುತಿ ಸುಜುಕಿ ಡಿಜೈರ್ ಎಜಿಎಸ್ ನಿರ್ಮಾಣ ಪ್ರಕ್ರಿಯೆ ಆರಂಭವಾಗಲಿದೆ. ತದಾ ಬಳಿಕ ಒಂದೆರಡು ತಿಂಗಳೊಳಗೆ ವಿತರಣೆ ಪ್ರಕ್ರಿಯೆಯೂ ನಡೆಯಲಿದೆ.

ಚಿತ್ರ ಕೃಪೆ: ಗಾಡಿವಾಡಿ ಡಾಟ್ ಕಾಮ್

ಮಾರುತಿ ಸ್ವಿಫ್ಟ್ ಡಿಜೈರ್ ಆಟೋ ಗೇರ್ ಶಿಫ್ಟ್ ಕಾರು ಬಿಡುಗಡೆಗೆ ಕ್ಷಣಗಣನೆ

ತನ್ನೆಲ್ಲ ಶ್ರೇಣಿಯ ಕಾರುಗಳಿಗೆ ಎಎಂಟಿ ತಂತ್ರಗಾರಿಕೆಯನ್ನು ವ್ಯಾಪಿಸುವ ಇರಾದೆ ಹೊಂದಿರುವ ಮಾರುತಿ, ಕೈಗೆಟುಕುವ ದರಗಳಲ್ಲಿ ಸೆಮಿ ಆಟೋಮ್ಯಾಟಿಕ್ ಕಾರುಗಳನ್ನು ಜನರನ್ನ ತಲುಪಿಸುವ ಇರಾದೆಯಲ್ಲಿದೆ.

ಚಿತ್ರ ಕೃಪೆ: ಗಾಡಿವಾಡಿ ಡಾಟ್ ಕಾಮ್

ಮಾರುತಿ ಸ್ವಿಫ್ಟ್ ಡಿಜೈರ್ ಆಟೋ ಗೇರ್ ಶಿಫ್ಟ್ ಕಾರು ಬಿಡುಗಡೆಗೆ ಕ್ಷಣಗಣನೆ

ಕೇವಲ ಆಟೋ ಗೇರ್ ಶಿಫ್ಟ್ ಮಾತ್ರವಲ್ಲದೆ ನೂತನ ಡಿಜೈರ್ ಕಾರಿನಲ್ಲಿ ಐಚ್ಛಿಕ ಏರ್ ಬ್ಯಾಗ್ ಹಾಗೂ ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಂ (ಎಬಿಎಸ್) ಸುರಕ್ಷತೆಯನ್ನು ಪಡೆಯಲಿದೆ.

ಮಾರುತಿ ಸ್ವಿಫ್ಟ್ ಡಿಜೈರ್ ಆಟೋ ಗೇರ್ ಶಿಫ್ಟ್ ಕಾರು ಬಿಡುಗಡೆಗೆ ಕ್ಷಣಗಣನೆ

ಇದಕ್ಕೂ ಮೊದಲು ಸೆಲೆರಿಯೊ ಹಾಗೂ ಆಲ್ಟೊ ಕೆ10 ಸಣ್ಣ ಕಾರುಗಳಲ್ಲಿ ಎಎಂಟಿ ತಂತ್ರಜ್ಞಾನವನ್ನು ಆಳವಡಿಸಿರುವ ಮಾರುತಿ ತದಾ ಬಳಿಕ ಇದೇ ಸೌಲಭ್ಯವನ್ನು ವ್ಯಾಗನಾರ್ ಹಾಗೂ ಸ್ಟ್ರೀಂಗ್ರೇ ಕಾರಿಗೂ ವಿಸ್ತರಿಸಿತ್ತು.

ಮಾರುತಿ ಸ್ವಿಫ್ಟ್ ಡಿಜೈರ್ ಆಟೋ ಗೇರ್ ಶಿಫ್ಟ್ ಕಾರು ಬಿಡುಗಡೆಗೆ ಕ್ಷಣಗಣನೆ

ಪ್ರಸ್ತುತ ಸ್ವಿಫ್ಟ್ ಡಿಜೈರ್ ಆಟೋ ಗೇರ್ ಶಿಫ್ಟ್ ಕಾರು ಪ್ರಮುಖವಾಗಿಯೂ ಮಾರುಕಟ್ಟೆಯಲ್ಲಿ ಟಾಟಾ ಜೆಸ್ಟ್ ಆಟೋಮ್ಯಾಟಿಕ್ ಸವಾಲನ್ನು ಎದುರಿಸಲಿದೆ. ಇದು ಆರರಿಂದ ಎಂಟು ಲಕ್ಷ ರು.ಗಳ ಬೆಲೆ ಪರಿಧಿಯಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ.

ಮಾರುತಿ ಸ್ವಿಫ್ಟ್ ಡಿಜೈರ್ ಆಟೋ ಗೇರ್ ಶಿಫ್ಟ್ ಕಾರು ಬಿಡುಗಡೆಗೆ ಕ್ಷಣಗಣನೆ

ಸದ್ಯ ಲಭ್ಯವಿರುವ ಮಾಹಿತಿಗಳ ಪ್ರಕಾರ ಮಾರುತಿ ಸ್ವಿಫ್ಟ್ ಡಿಜೈರ್ ಎಎಂಟಿ ಕಾರು ಪ್ರತಿ ಲೀಟರ್ ಗೆ 26 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿರುತ್ತದೆ. ಅಲ್ಲದೆ 1.3 ಲೀಟರ್ ಮಲ್ಟಿಜೆಟ್ ಫೋರ್ ವಾಲ್ವ್ ಡಿಒಎಚ್‌ಸಿ ಟರ್ಬೊ ಡೀಸೆಲ್ ಎಂಜಿನ್ ಪಡೆಯಲಿದೆ. ಇದು 190 ಎನ್‌ಎಂ ತಿರುಗುಬಲದಲ್ಲಿ 74 ಅಶ್ವಶಕ್ತಿ ಉತ್ಪಾದಿಸುವ ಸಾಮರ್ಥ್ಯ ಹೊಂದಿರುತ್ತದೆ.

ಮಾರುತಿ ಸ್ವಿಫ್ಟ್ ಡಿಜೈರ್ ಆಟೋ ಗೇರ್ ಶಿಫ್ಟ್ ಕಾರು ಬಿಡುಗಡೆಗೆ ಕ್ಷಣಗಣನೆ

ಅಂದ ಹಾಗೆ ಇಟಲಿಯ ಹೆಸರಾಂತ ಮ್ಯಾಗ್ನೆಟ್ಟಿ ಮರೆಲ್ಲಿ ಸಂಸ್ಥೆಯು ಮಾರುತಿಗೆ ಎಎಂಟಿ ಗೇರ್ ಬಾಕ್ಸ್ ಒದಗಿಸಲಿದೆ. ತಾಜಾ ವಾಹನ ಸುದ್ದಿಗಾಗಿ ಡ್ರೈವ್ ಸ್ಪಾರ್ಕ್ ಓದುತ್ತಿರಿ.

ಇವನ್ನೂ ಓದಿ

ಎಎಂಟಿ ಕುರಿತಾಗಿ ನೀವು ತಿಳಿದುಕೊಳ್ಳಲೇಬೇಕಾದ 10 ಅಂಶಗಳು

English summary
Maruti Suzuki Swift Dzire AMT Spotted At Dealership Yard - Spy Shots
Story first published: Friday, December 25, 2015, 13:30 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark