2017ರಲ್ಲಿ ಮಿಟ್ಸುಬಿಸಿ ಎಂಪಿವಿ ಬಿಡುಗಡೆ; ಭಾರತಕ್ಕೆ ಬರುತ್ತಾ?

By Nagaraja

ಜಪಾನ್ ಮೂಲದ ಪ್ರಖ್ಯಾತ ವಾಹನ ತಯಾರಿಕ ಸಂಸ್ಥೆಯಾಗಿರುವ ಮಿಟ್ಸುಬಿಸಿ, 2017ರಲ್ಲಿ ನೂತನ ಬಹು ಬಳಕೆಯ ವಾಹನವನ್ನು (ಎಂಪಿವಿ) ಬಿಡುಗಡೆ ಮಾಡಲಿದೆ. ಪ್ರಸ್ತುತ ಮಾದರಿಯು ಭಾರತಕ್ಕೆ ಆಗಮಿಸಲಿದೆಯೇ ಎಂಬುದು ವಾಹನ ಪ್ರೇಮಿಗಳಲ್ಲಿ ಕುತೂಹಲಕ್ಕೆ ಕಾರಣವಾಗಿದೆ.

ಬೆಳೆದು ಬರುತ್ತಿರುವ ಭಾರತೀಯ ವಾಹನ ಮಾರುಕಟ್ಟೆಯಲ್ಲಿ ನೂತನ ಉತ್ಪನ್ನಗಳು ಬಿಡುಗಡೆಯಾಗುತ್ತಲೇ ಇದ್ದು, ಜಗತ್ತಿನ ಬಹುತೇಕ ಎಲ್ಲ ಸಂಸ್ಥೆಗಳು ಭಾರತದತ್ತ ಕಣ್ಣಾಯಿಸಿದೆ. ಹಾಗಿರುವ ಮಿಟ್ಸುಬಿಸಿ ಹೊಸ ಎಂಪಿವಿ ಭಾರತಕ್ಕೂ ಬರುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.

mitsubishi concept mpv

2017ರಲ್ಲಿ ಜಾಗತಿಕ ಪ್ರವೇಶ ಮಾಡಲಿರುವ ಮಿಟ್ಸುಬಿಸಿ ಎಂಪಿವಿ ಕಾನ್ಸೆಪ್ಟ್ ಮಾದರಿಯನ್ನು 2014 ಜನೆವಾ ಮೋಟಾರು ಶೋದಲ್ಲೇ ಪ್ರದರ್ಶಿಸಲಾಗಿತ್ತು. ಇದು ಹೆಚ್ಚಿನ ಪ್ರೀಮಿಯಂ ವೈಶಿಷ್ಟ್ಯಗಳನ್ನು ಪಡೆದುಕೊಂಡಿರುವುದರಿಂದ ಭಾರತ ಮಾದರಿಯಲ್ಲೂ ಇದಕ್ಕೆ ಸಮಾನವಾದ ವಿಶಿಷ್ಟತೆಗಳನ್ನು ನಿರೀಕ್ಷೆ ಮಾಡುವಂತಿಲ್ಲ.
mitsubishi concept mpv

ಮಿಟ್ಸುಬಿಸಿ ಬಹು ಬಳಕೆಯ ವಾಹನವು 1.5 ಲೀಟರ್ ಪೆಟ್ರೋಲ್ ಎಂಜಿನ್ ನಿಂದ ನಿಯಂತ್ರಿಸಲ್ಪಡಲಿದೆ. ಮೊದಲು ಇಂಡೋನೇಷ್ಯಾ ಪ್ರವೇಶಿಸಲಿರುವ ಈ ಬಹುನಿರೀಕ್ಷಿತ ಮಾದರಿಯು ತದಾ ಬಳಿಕ ಇತರ ಮಾರುಕಟ್ಟೆಯತ್ತ ದಾಪುಗಾಲನ್ನಿಡಲಿದೆ.
mitsubishi concept mpv

ಸದ್ಯಕ್ಕೆ ಮಿಟ್ಸುಬಿಸಿ ದೇಶದಲ್ಲಿ ಹಿಂದೂಸ್ತಾನ್ ಮೋಟಾರ್ಸ್ ಜೊತೆ ಹೊಂದಾಣಿಕೆ ಮಾಡಿಕೊಂಡಿದೆ. ಆದರೆ ಮುಂಬರುವ ದಿನಗಳಲ್ಲಿ ಸ್ವತಂತ್ರವಾಗಿ ದೇಶ ಪ್ರವೇಶಿಸುವ ಇರಾದೆಯನ್ನು ಸಂಸ್ಥೆ ಹೊಂದಿದೆ.
Most Read Articles

Kannada
English summary
The Indian market and customer is constantly evolving, new and exciting segments are being explored. Japanese automobile manufacturer Mitsubishi is planning on introducing new products in India.
Story first published: Thursday, April 2, 2015, 8:59 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X