ಹೊಸ ಅವತಾರದಲ್ಲಿ ಹೋಂಡಾ ಸಿವಿಕ್...

Written By:

ಪ್ರತಿಷ್ಠಿತ 2015 ನ್ಯೂಯಾರ್ಕ್ ಆಟೋ ಶೋದಲ್ಲಿ ನೂತನ ಹೋಂಡಾ ಸಿವಿಕ್ ಕಾನ್ಸೆಪ್ಟ್ ಮಾದರಿ ಅನಾವರಣಗೊಂಡಿದೆ. ಇದು ನಿಜಕ್ಕೂ ವಾಹನ ಪ್ರೇಮಿಗಳಲ್ಲಿ ಕುತೂಹಲವನ್ನುಂಟು ಮಾಡಿದೆ.

ಹಿಂದೆಂದಿಗಿಂತಲೂ ಭಿನ್ನವಾಗಿ ಹೋಂಡಾ ಸಿವಿಕ್ ಕೂಪೆ ಶೈಲಿಯ ವಿನ್ಯಾಸದಲ್ಲಿ ಕಂಡುಬಂದಿದೆ. ಜಪಾನ್ ನ ಈ ಭವಿಷ್ಯತ್ತಿನ ಕಾರಿನ ಐದು ಮಹತ್ವಪೂರ್ಣ ಅಂಶಗಳನ್ನು ಅರಿಯಲು ಫೋಟೊ ಸ್ಲೈಡ್ ನತ್ತ ಮುಂದುವರಿಯಿರಿ...

05. ಕೂಪೆ ಶೈಲಿ

05. ಕೂಪೆ ಶೈಲಿ

ಈಗ ಅನಾವರಣಗೊಂಡಿರುವ ಕೂಪೆ ಪರಿಕಲ್ಪನೆಗೂ ಮೊದಲು ಸೆಡಾನ್ ಮಾದರಿಯನ್ನು ಬಿಡುಗಡೆ ಮಾಡುವುದಾಗಿ ಜಪಾನ್ ಮೂಲದ ಹೋಂಡಾ ಸಂಸ್ಥೆ ಪ್ರಕಟಿಸಿದೆ.

04. ಕ್ರೀಡಾತ್ಮಕ ವಿನ್ಯಾಸ

04. ಕ್ರೀಡಾತ್ಮಕ ವಿನ್ಯಾಸ

ನೂತನ ಕೂಪೆ ಶೈಲಿಯ ಸಿವಿಕ್ ಕಾರಿನಲ್ಲಿ ಕ್ರೀಡಾತ್ಮಕ ವಿನ್ಯಾಸಕ್ಕೆ ಹೆಚ್ಚಿನ ಆದ್ಯತೆ ಕೊಡಲಾಗಿದೆ.

 03. ಸಿಂಗಲ್ ಮಿಡ್ ಎಕ್ಸಾಸ್ಟ್

03. ಸಿಂಗಲ್ ಮಿಡ್ ಎಕ್ಸಾಸ್ಟ್

ಹಿಂದುಗಡೆ ಮಧ್ಯದಲ್ಲಿ ಎಕ್ಸಾಸ್ಟ್ ರಂಧ್ರವನ್ನು ನೀಡಿರುವುದು ವಿಶಿಷ್ಟತೆಗೆ ಕಾರಣವಾಗಿದೆ. ಇನ್ನು ಏರೋಡೈನಾಮಿಕ್ ಜೊತೆಗೆ ರಿಯರ್ ಸ್ಪಾಯ್ಲರ್ ಹಾಗೂ ಸುತ್ತುವರಿದ ಎಲ್ ಇಡಿ ಟೈಲ್ ಲ್ಯಾಂಪ್ ಆಕರ್ಷಣೆಗೆ ಪಾತ್ರವಾಗಿದೆ.

02. ಎಂಜಿನ್

02. ಎಂಜಿನ್

ನೂತನ ಸಿವಿಕ್ ಕೂಪೆ ಕಾರು 1.5 ಲೀಟರ್ ಟರ್ಬೊ ಚಾರ್ಜ್ಡ್ ಪೆಟ್ರೋಲ್ ಎಂಜಿನ್ ನಿಂದ ನಿಯಂತ್ರಿಸಲ್ಪಡಲಿದೆ. ಹಾಗೆಯೇ ಆರು ಸ್ಪೀಡ್ ಮ್ಯಾನುವಲ್ ಅಥವಾ ಸಿವಿಟಿ ಗೇರ್ ಬಾಕ್ಸ್ ಇದರಲ್ಲಿರಲಿದೆ.

01. ಸ್ಪಷ್ಟ ಸಂದೇಶ

01. ಸ್ಪಷ್ಟ ಸಂದೇಶ

ಒಟ್ಟಿನಲ್ಲಿ ನಾಲ್ಕು ವರ್ಷಗಳ ಹಿಂದೆ ಮೊದಲ ಬಾರಿಗೆ ಬಿಡುಗಡೆಯಾಗಿದ್ದಾಗ ಒಂದು ಸಾಮಾನ್ಯ ಕಾರಾಗಿದ್ದ ಸಿವಿಕ್ ಈಗ ಭವಿಷ್ಯದತ್ತ ದಿಟ್ಟ ಹೆಜ್ಜೆಯನ್ನಿಡುತ್ತಿರುವುದರ ಸೂಚನೆಯನ್ನು ಹೋಂಡಾ ಸಂಸ್ಥೆ ನೀಡುತ್ತಿದೆ.

English summary
There are certain cars no matter where they are showcased they will always have a following. Honda's Civic is one of those rare cars that draws attention in any part of the world.
Story first published: Friday, April 3, 2015, 11:28 [IST]
Please Wait while comments are loading...

Latest Photos