ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯಲ್ಲಿ ಇಳಿಕೆ
ಜಾಗತಿಕ ಕಚ್ಚಾ ತೈಲ ಮಾರುಕಟ್ಟೆಯಲ್ಲಿ ಬೆಲೆ ಇಳಿಕೆಗೊಂಡಿರುವ ಹಿನ್ನೆಲೆಯಲ್ಲಿ ದೇಶದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಗಳು ಇಳಿಕೆಗೊಂಡಿದೆ.
- ಪೆಟ್ರೋಲ್ ಬೆಲೆ 50 ಪೈಸೆ ಇಳಿಕೆ
- ಡೀಸೆಲೆ ಬೆಲೆ 46 ಪೈಸೆ ಇಳಿಕೆ

ಈ ಮೂಲಕ ಕಳೆದ 15 ದಿನಗಳೆಡೆ ಎರಡನೇ ಬಾರಿಗೆ ಇಂಧನ ಬೆಲೆಗಳಲ್ಲಿ ಇಳಿಕೆ ಕಂಡುಬಂದಿದೆ. ಈ ಮೊದಲು ಡಿಸೆಂಬರ್ 1ರಂದು ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯಲ್ಲಿ ಅನುಕ್ರಮವಾಗಿ 58 ಹಾಗೂ 25 ಪೈಸೆಗಳಷ್ಟು ಇಳಿಕೆಯಾಗಿತ್ತು.
ಅಂತರಾಷ್ಟ್ರೀಯ ಕಚ್ಚಾ ತೈಲ ಬೆಲೆಯನ್ನು ಅವಲಂಬಿಸಿ ಪ್ರತಿ 15 ದಿನಕ್ಕೊಮ್ಮೆ ದೇಶದ ತೈಲದ್ಯೋಮ ಸಂಸ್ಥೆಗಳು ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ನೀತಿಯನ್ನು ಪ್ರಕಟಿಸುತ್ತಿದೆ.


Click it and Unblock the Notifications








