ಅಧ್ಯಯನ; ಪಾರ್ಕಿಂಗ್ ವೇಳೆ ಹಾನಿಯಾಗುವ ಸಾಧ್ಯತೆ ಜಾಸ್ತಿ!

Written By:

ಅತಿ ಹೆಚ್ಚು ಬಾರಿ ಕಾರು ಹಾನಿಗೊಳಗಾಗುವ ಸಂದರ್ಭ ಯಾವಾಗ ಗೊತ್ತೇ? ಇದು ಯಾವುದೇ ಅಪಘಾತ ಪ್ರಸಂಗಳಲ್ಲಿ ಅಲ್ಲ. ಬದಲಾಗಿ ಪಾರ್ಕಿಂಗ್ ಸಂದರ್ಭದಲ್ಲಿ ಅತಿ ಹೆಚ್ಚು ಹಾನಿಯಾಗುವ ಸಂಭವವಿದೆ ಎಂದು ಅಧ್ಯಯನ ವರದಿಯೊಂದು ತಿಳಿಸಿದೆ.

ಅಲಯನ್ಸ್ (Allianz) ಸೆಂಟರ್ ಆಫ್ ಟೆಕ್ನಾಲಜಿ ಮತ್ತು ಕಾಂಟಿನೆಂಟಲ್ ಎಜಿ ನಡೆಸಿರುವ ಅಧ್ಯಯನದಲ್ಲಿ ಇದು ಬಯಲಾಗಿದ್ದು, ನಿಲ್ಲಿಸಿದ್ದ ವಾಹನ ಅಥವಾ ನಿಲ್ಲಿಸುವ ವಾಹನಗಳು ಮರಳಿ ತೆರಳುವಾಗ ಹಾನಿಗೊಳತ್ತಿದ್ದು, ಇದೇ ಕಾರಣಕ್ಕಾಗಿ ಅತಿ ಹೆಚ್ಚು ವಿಮೆ ಕ್ಲೈಮ್ ಆಗುತ್ತಿದೆ ಎಂದಿದೆ.

To Follow DriveSpark On Facebook, Click The Like Button
car park

ಪಾರ್ಕಿಂಗ್ ಹಾನಿಯಿಂದಾಗಿಯೇ ಶೇಕಡಾ 70ರಷ್ಟು ವಿಮೆ ವಾಪಸಾತಿಗೆ ಬೇಡಿಕೆ ಕಂಡುಬರುತ್ತದೆ. ಈ ಪೈಕಿ ಎಸ್ ಯುವಿ ಹಾಗೂ ವ್ಯಾನ್ ವಿಭಾಗದ ವಾಹನಗಳು ಅತಿ ಹೆಚ್ಚು ಅಪಘಾತ ಪ್ರಸಂಗಗಳಲ್ಲಿ ದಾಖಲಾಗಿದೆ.

ಇನ್ನು ನಿಲ್ಲಿಸಿದ ವಾಹನಗಳು ಮರಳಿ ತೆರಳುವಾಗ ಅಥವಾ ವಾಹನಗಳು ರಿವರ್ಸ್ ತೆಗೆದುಕೊಳ್ಳುವಾಗ ಅಪಘಾತ ಪ್ರಸಂಗಗಳು ಜಾಸ್ತಿ ಎದುರಾಗುತ್ತಿದೆ. ಇದಕ್ಕೆ ವಾಹನಗಳ ವಿನ್ಯಾಸದ ಜೊತೆಗೆ ಪಾರ್ಕಿಂಗ್ ಜಾಗ ಕೊರತೆ ಹಾಗೂ ವಾಹನ ದಟ್ಟಣೆಯು ಪ್ರಮುಖ ಸಮಸ್ಯೆಯಾಗಿ ಪರಿಣಮಿಸಿದೆ ಎಂದು ವರದಿಯು ತಿಳಿಸುತ್ತದೆ.

English summary
According to a recent research conducted by Allianz, most of the damage that happens to cars is during parking! Unbelievable.
Story first published: Saturday, May 9, 2015, 12:43 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark