ಮಾರ್ಚ್ ತಿಂಗಳ ಟಾಪ್ 10 ಪಟ್ಟಿ; ನಿಮ್ಮ ನೆಚ್ಚಿನ ಕಾರು ಯಾವುದು?

Written By:

ದಿನದಿಂದ ದಿನಕ್ಕೆ ದೇಶದ ರಸ್ತೆಯಲ್ಲಿ ಓಡಾಡುವ ವಾಹನಗಳ ಸಂಖ್ಯೆ ವರ್ಧನೆಯಾಗುತ್ತಲೇ ಇದೆ. ಇದರಂತೆ ವಾಹನ ತಯಾರಿಕ ಸಂಸ್ಥೆಗಳು ಗ್ರಾಹಕರ ಬೇಡಿಕೆಗಳಿಗೆ ಅನುಸಾರವಾಗಿ ಹೊಸ ಹೊಸ ಮಾದರಿಗಳನ್ನು ಪರಿಚಯಿಸುವುದರಲ್ಲಿ ತಲ್ಲೀನವಾಗಿದೆ.

ಪ್ರಸ್ತುತ ಲೇಖನದಲ್ಲಿ 2015 ಮಾರ್ಚ್ ತಿಂಗಳಲ್ಲಿ ದೇಶದ ವಾಹನ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಮಾರಾಟವನ್ನು ಸಾಧಿಸಿರುವ ಅಗ್ರ 10 ಕಾರು ಸಂಸ್ಥೆಗಳು ಹಾಗೂ ಕಾರು ಮಾಡೆಲ್ ಗಳ ಬಗ್ಗೆ ಮಾಹಿತಿಯನ್ನು ಕೊಡುವ ಪ್ರಯತ್ನ ಮಾಡಲಿದ್ದೇವೆ. ನಿಮ್ಮ ನೆಚ್ಚಿನ ಕಾರು ಇಲ್ಲಿದೆಯೇ ಎಂಬುದನ್ನೊಮ್ಮೆ ಪರಿಶೀಲಿಸಿ...

10. ಫೋಕ್ಸ್ ವ್ಯಾಗನ್

10. ಫೋಕ್ಸ್ ವ್ಯಾಗನ್

ಒಟ್ಟು ಮಾರಾಟ: 4,577 ಯುನಿಟ್

2015 ಮಾರ್ಚ್ ತಿಂಗಳಲ್ಲಿ 2,862 ಯುನಿಟ್ ಗಳ ಮಾರಾಟ ಕಂಡಿರುವ ಪೊಲೊ, ಅತಿ ಹೆಚ್ಚು ಮಾರಾಟವಾದ ಫೋಕ್ಸ್ ವ್ಯಾಗನ್ ಕಾರು ಎಂದೆನಿಸಿಕೊಂಡಿದೆ.

09. ನಿಸ್ಸಾನ್

09. ನಿಸ್ಸಾನ್

ಒಟ್ಟು ಮಾರಾಟ: 4,717 ಯುನಿಟ್

ನಿಸ್ಸಾನ್ ಪೈಕಿ ಅತಿ ಹೆಚ್ಚು ಮಾರಾಟವಾದ ಕಾರು ಎಂದೆನಿಸಿಕೊಂಡಿರುವ ಟೆರನೊ, 2015 ಮಾರ್ಚ್ ತಿಂಗಳಲ್ಲಿ 1,434 ಯುನಿಟ್ ಗಳ ಮಾರಾಟ ಕಂಡಿದೆ.

08. ರೆನೊ

08. ರೆನೊ

ಒಟ್ಟು ಮಾರಾಟ: 4,785 ಯುನಿಟ್

ನಿರೀಕ್ಷೆಯಂತೆಯೇ ರೆನೊ ಪೈಕಿ ಡಸ್ಟರ್ ಅತಿ ಹೆಚ್ಚು ಮಾರಾಟವನ್ನು ಕಂಡಿದ್ದು, 2015 ಮಾರ್ಚ್ ತಿಂಗಳಲ್ಲಿ 3,800 ಯುನಿಟ್ ಗಳ ಮಾರಾಟ ದಾಖಲಿಸಿದೆ.

07. ಫೋರ್ಡ್

07. ಫೋರ್ಡ್

ಒಟ್ಟು ಮಾರಾಟ: 5,253

ಫೋರ್ಡ್ ಪೈಕಿ ಇಕೊಸ್ಪೋರ್ಟ್ ಕ್ರೀಡಾ ಬಳಕೆಯ ವಾಹನವು 3,751 ಯುನಿಟ್ ಗಳ ಮಾರಾಟ ದಾಖಲಿಸಿತ್ತು.

06. ಟೊಯೊಟಾ

06. ಟೊಯೊಟಾ

ಒಟ್ಟು ಮಾರಾಟ: 13,333

ಟೊಯೊಟಾದ ಅತ್ಯಂತ ಜನಪ್ರಿಯ ಕಾರು ಇನ್ನೋವಾ 2015 ಮಾರ್ಚ್ ತಿಂಗಳಲ್ಲೂ ತನ್ನ ಆವೇಗವನ್ನು ಕಾಪಾಡಿಕೊಂಡಿದ್ದು, 5,851 ಯುನಿಟ್ ಗಳ ಮಾರಾಟ ಸಾಧಿಸಿದೆ.

05. ಟಾಟಾ ಮೋಟಾರ್ಸ್

05. ಟಾಟಾ ಮೋಟಾರ್ಸ್

ಒಟ್ಟು ಮಾರಾಟ: 15,039

ಜೆಸ್ಟ್ ಹಾಗೂ ಬೋಲ್ಟ್ ಗಳಂತಹ ಹೊಸ ಮಾದರಿಗಳ ಆಗಮನದ ಹೊರತಾಗಿಯೂ 3,746 ಯುನಿಟ್ ಗಳ ಮಾರಾಟ ದಾಖಲಿಸಿರುವ ಇಂಡಿಕಾ ಈಗಲೂ ಅಗ್ರ ಟಾಟಾ ಕಾರೆನಿಸಿಕೊಂಡಿದೆ.

04. ಮಹೀಂದ್ರ ಆಂಡ್ ಮಹೀಂದ್ರ

04. ಮಹೀಂದ್ರ ಆಂಡ್ ಮಹೀಂದ್ರ

ಒಟ್ಟು ಮಾರಾಟ: 21,030 ಯುನಿಟ್

ಮಹೀಂದ್ರ ಪೈಕಿ ಅತಿ ಹೆಚ್ಚು ಮಾರಾಟ ಗಳಿಸಿದ ಕಾರು ಬೊಲೆರೊ ಆಗಿದೆ. ಪ್ರಸ್ತುತ ವಾಹನ 10,481 ಯುನಿಟ್ ಗಳ ಮಾರಾಟ ದಾಖಲಿಸಿತ್ತು.

03. ಹೋಂಡಾ

03. ಹೋಂಡಾ

ಒಟ್ಟು ಮಾರಾಟ: 22,696

ಮಹೀಂದ್ರ ಸಂಸ್ಥೆಯನ್ನು ಮೂರನೇ ಸ್ಥಾನದಿಂದ ಹೊರದಬ್ಬಿರುವ ಹೋಂಡಾ ಸಂಸ್ಥೆಯ ಯಶಸ್ಸಿನಲ್ಲಿ ಅತಿ ದೊಡ್ಡ ಪಾತ್ರ ವಹಿಸಿರುವ ಸಿಟಿ ಸೆಡಾನ್ ಕಾರು 2015 ಮಾರ್ಚ್ ತಿಂಗಳಲ್ಲಿ 9,777 ಯುನಿಟ್ ಗಳ ಮಾರಾಟ ದಾಖಲಿಸಿದೆ.

02. ಹ್ಯುಂಡೈ

02. ಹ್ಯುಂಡೈ

ಒಟ್ಟು ಮಾರಾಟ: 39,525 ಯುನಿಟ್

ಈಗಲೂ ದೇಶದ ವಾಹನ ಮಾರುಕಟ್ಟೆಯಲ್ಲಿ ನಂ.2 ಸ್ಥಾನ ಕಾಪಾಡಿಕೊಂಡಿರುವ ಹ್ಯುಂಡೈ ಕಾರುಗಳ ಪೈಕಿ ಎಲೈಟ್ ಐ20 ಅತಿ ಹೆಚ್ಚು ಮಾರಾಟವನ್ನು (12,812 ಯುನಿಟ್) ಕಂಡಿದೆ.

01. ಮಾರುತಿ ಸುಜುಕಿ

01. ಮಾರುತಿ ಸುಜುಕಿ

ಒಟ್ಟು ಮಾರಾಟ: 103719

ದೇಶದ ನಂ.1 ಕಾರು ಸಂಸ್ಥೆ ಮಾರುತಿಯ ಪೈಕಿ ಅತಿ ಹೆಚ್ಚು ಮಾರಾಟವಾದ ಕಾರು ಯಾವುದು ? ಎಂಬ ಪ್ರಶ್ನೆ ಕೇಳುವ ಅಗತ್ಯವೇ ಇಲ್ಲ. ಈ ಪ್ರಶ್ನೆಗೆ ಪ್ರತಿಯೊಬ್ಬ ವಾಹನ ಪ್ರೇಮಿ ಕಣ್ಣು ಮುಚ್ಚಿಕೊಂಡು ಉತ್ತರ ಹೇಳಬಹುದು. ಹೌದು, ಮಾರುತಿ ಆಲ್ಟೊ 24,961 ಯುನಿಟ್ ಗಳೊಂದಿಗೆ ಅಗ್ರ ಮಾರುತಿ ಕಾರೆನಿಸಿಕೊಂಡಿದೆ.

ಮಾರ್ಚ್ ತಿಂಗಳ ಟಾಪ್ 10 ಪಟ್ಟಿ; ನಿಮ್ಮ ನೆಚ್ಚಿನ ಕಾರು ಯಾವುದು?

ಈಗ ನಿಮ್ಮ ಅನಿಸಿಕೆಗಳನ್ನು ನಮ್ಮ ಜೊತೆ ಹಂಚಿಕೊಳ್ಳಿರಿ...

English summary
Here is a look at the top 10 best selling passenger vehicle makers, along with their top selling models in March 2015.
Story first published: Wednesday, April 8, 2015, 8:14 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark