2015 ಮೇ ತಿಂಗಳಲ್ಲಿ ರೇಸ್ ಗೆದ್ದ ಅಗ್ರ 10 ಕಾರುಗಳಿವು!

By Nagaraja

ಮಾರಾಟ ಸಂಖ್ಯೆ ಹೆಚ್ಚಿಸುವ ಸಲುವಾಗಿ ಪ್ರತಿಯೊಂದು ವಾಹನ ತಯಾರಿಕ ಸಂಸ್ಥೆಗಳು ಏನೆಲ್ಲ ಪ್ರಚಾರದ ಗಿಮಿಕ್ ಗಳು ಮಾಡುತ್ತಲೇ ಇರುತ್ತವೆ. 2015 ಮೇ ತಿಂಗಳು ಸಹ ಇದರಿಂದ ಹೊರತಾಗಿರಲಿಲ್ಲ.

ಹಿಂದಿನ ತಿಂಗಳುಗಳಿಗೆ ಹೋಲಿಸಿದಾಗ ಮೇ ತಿಂಗಳಲ್ಲಿ ಸಾಮಾನ್ಯ ಉತ್ತಮ ಮಾರಾಟ ಕಂಡುಬಂದಿತ್ತು. ಈಗ ಮೇ ತಿಂಗಳಲ್ಲಿ ಮಾರಾಟದ ರೇಸ್ ಗೆದ್ದ ಅಗ್ರ 10 ಕಾರುಗಳ ಪಟ್ಟಿಯನ್ನು ಕೊಡಲಿದ್ದೇವೆ.

10. ಹ್ಯುಂಡೈ ಎಕ್ಸ್‌ಸೆಂಟ್

10. ಹ್ಯುಂಡೈ ಎಕ್ಸ್‌ಸೆಂಟ್

ಒಟ್ಟು ಮಾರಾಟ: 4871 ಯುನಿಟ್

ಎಕ್ಸ್‌ಸೆಂಟ್ ಕಾರು ದಕ್ಷಿಣ ಕೊರಿಯಾ ಮೂಲದ ಹ್ಯುಂಡೈ ಸಂಸ್ಥೆಯಿಂದ ಮಾರಾಟವಾಗುತ್ತಿರುವ ಕಾಂಪಾಕ್ಟ್ ಸೆಡಾನ್ ಮಾದರಿಯಾಗಿದೆ. ಇದರ ಪ್ರಮುಖ ಎದುರಾಳಿ ಮಾರುತಿ ಸ್ವಿಫ್ಟ್ ಡಿಜೈರ್ ಹಾಗೂ ಹೋಂಡಾ ಅಮೇಜ್ ಆಗಿದೆ.

09. ಹ್ಯುಂಡೈ ಇಯಾನ್

09. ಹ್ಯುಂಡೈ ಇಯಾನ್

ಒಟ್ಟು ಮಾರಾಟ: 6449 ಯುನಿಟ್

ದಕ್ಷಿಣ ಕೊರಿಯಾ ಮೂಲದ ಹ್ಯುಂಡೈನಿಂದಲೇ ಮಾರಾಟವಾಗುತ್ತಿರುವ ಎಂಟ್ರಿ ಲೆವೆಲ್ ಕಾರು ಇದಾಗಿದೆ. ಸಣ್ಣ ಕಾರು ವಿಭಾಗದಲ್ಲಿ ಅಗ್ರ 10ರ ಪಟ್ಟಿಯಲ್ಲಿ ಕಾಣಿಸಿಕೊಂಡಿರುವ ಇಯಾನ್ ಜನ ಮೆಚ್ಚುಗೆಗೆ ಪಾತ್ರವಾಗಿದೆ.

08. ಮಾರುತಿ ಸೆಲೆರಿಯೊ

08. ಮಾರುತಿ ಸೆಲೆರಿಯೊ

ಒಟ್ಟು ಮಾರಾಟ: 6653 ಯುನಿಟ್

ಮಾರುತಿ ಸೆಲೆರಿಯೊ ಡೀಸೆಲ್ ಆವೃತ್ತಿ ಬಿಡುಗಡೆಯಾಗಿರುವುದರ ಬಗ್ಗೆ ನಾವೀಗಷ್ಟೇ ವರದಿ ಮಾಡಿರುತ್ತೇವೆ []. ಈಗಾಗಲೇ ಪೆಟ್ರೋಲ್ ಎಎಂಟಿ ಹಾಗೂ ಸಿಎನ್ ಜಿ ವರ್ಷನ್ ಗಳಲ್ಲಿ ಲಭ್ಯವಿರುವ ಸೆಲೆರಿಯೊ ತನ್ನ ಛಾಪನ್ನು ಒತ್ತಿದೆ.

07. ಹೋಂಡಾ ಸಿಟಿ

07. ಹೋಂಡಾ ಸಿಟಿ

ಒಟ್ಟು ಮಾರಾಟ: 7562 ಯುನಿಟ್

ಸಿಟಿ ಪ್ರಸ್ತುತ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಏಕಮಾತ್ರ ಹೋಂಡಾ ಕಾರಾಗಿದೆ. ಮಾರುತಿ ಸಿಯಾಝ್‌ಗೆ ನೇರ ಪ್ರತಿಸ್ಪರ್ಧಿಯಾಗಿರುವ ಮಧ್ಯಮ ಗಾತ್ರದ ಸಿಟಿ ಸೆಡಾನ್ ಕಾರು ಎಲ್ಲ ಹಂತದಲ್ಲೂ ಗುಣಮಟ್ಟವನ್ನು ಕಾಯ್ದುಕೊಂಡಿದೆ.

06. ಎಲೈಟ್ ಐ20

06. ಎಲೈಟ್ ಐ20

ಒಟ್ಟು ಮಾರಾಟ: 8469 ಯುನಿಟ್

ಆರನೇ ಸ್ಥಾನವನ್ನು ಮಗದೊಂದು ಹ್ಯುಂಡೈ ಕಾರು ಕಸಿದುಕೊಂಡಿದ್ದು, ಎಲೈಟ್ ಐ20 ಅತ್ಯುತ್ತಮ ಮಾರಾಟ ಕಾಪಾಡಿಕೊಳ್ಳಲು ಯಶಸ್ವಿಯಾಗಿದೆ. ನಿಮ್ಮ ಮಾಹಿತಿಗಾಗಿ, ಎಲೈಟ್ ಐ20, ಪ್ರೀಮಿಯಂ ಹ್ಯಾಚ್ ಬ್ಯಾಕ್ ಕಾರಾಗಿದೆ.

05. ಗ್ರಾಂಡ್ ಐ10

05. ಗ್ರಾಂಡ್ ಐ10

ಒಟ್ಟು ಮಾರಾಟ: 10112 ಯುನಿಟ್

ಹ್ಯುಂಡೈ ಓಟ ಇಲ್ಲಿಗೆ ನಿಲ್ಲುವುದಿಲ್ಲ. ಈಗಾಗಲೇ ನಂ.1 ಸ್ಥಾನದಲ್ಲಿರುವ ಮಾರುತಿಗೆ ಬೆದರಿಕೆಯೊಡ್ಡಿರುವ ಹ್ಯುಂಡೈನ ಗ್ರಾಂಡ್ ಐ10 ಐದನೇ ಸ್ಥಾನದಲ್ಲಿ ಗುರುತಿಸಿಕೊಳ್ಳುವ ಸ್ಪಷ್ಟ ಸಂದೇಶವನ್ನು ರವಾನಿಸಿದೆ.

04. ವ್ಯಾಗನಾರ್

04. ವ್ಯಾಗನಾರ್

ಒಟ್ಟು ಮಾರಾಟ: 12467 ಯುನಿಟ್

ಆದರೆ ಹಿಂದಿನ ಬಾರಿಯಂತೆ ಅಗ್ರ ನಾಲ್ಕು ಸ್ಥಾನಗಳನ್ನು ದೇಶದ ನಂ.1 ಪ್ರಯಾಣಿಕ ಸಂಸ್ಥೆ ಮಾರುತಿ ಸುಜುಕಿ ಭದ್ರವಾಗಿರಿಸಿಕೊಂಡಿದೆ. ಈ ಪೈಕಿ 'ಟಾಲ್ ಬಾಯ್' ವಿನ್ಯಾಸಿತ ವ್ಯಾಗನಾರ್ ನಾಲ್ಕನೇ ಸ್ಥಾನದಲ್ಲಿದೆ.

03. ಸ್ವಿಫ್ಟ್

03. ಸ್ವಿಫ್ಟ್

ಒಟ್ಟು ಮಾರಾಟ: 17,195 ಯುನಿಟ್

ಇತ್ತೀಚೆಗಷ್ಟೇ ಮಾರುತಿ ಸುಜುಕಿ ಪರಿಷ್ಕೃತ ಆವೃತ್ತಿ ಬಿಡುಗಡೆಗೊಂಡಿತ್ತು. ಇವೆಲ್ಲದರ ನೆರವಿನೊಂದಿಗೆ ತನ್ನ ಜನಪ್ರಿಯತೆಯನ್ನು ಉಳಿಸಿಕೊಂಡಿರುವ ಸ್ವಿಫ್ಟ್ ಮೂರನೇ ಸ್ಥಾನದಲ್ಲಿ ಕಾಣಿಸಿಕೊಂಡಿದೆ.

02. ಸ್ವಿಫ್ಟ್ ಡಿಜೈರ್

02. ಸ್ವಿಫ್ಟ್ ಡಿಜೈರ್

ಒಟ್ಟು ಮಾರಾಟ: 19663 ಯುನಿಟ್

ಅದೇನೋ ಮಾಯೆ ಅಂಥ ಗೊತ್ತಿಲ್ಲ. ಪ್ರತಿ ತಿಂಗಳಲ್ಲೂ ಸ್ಥಿರತೆಯ ಮಾರಾಟ ಕಾಯ್ದುಕೊಂಡಿರುವ ಸ್ವಿಫ್ಟ್ ಡಿಜೈರ್ ಮಾರುತಿ ಪಾಲಿಗೆ ನೆಚ್ಚಿನ ಕಾರುಗಳಲ್ಲಿ ಒಂದೆನಿಸಿಕೊಂಡಿದೆ. ಅಲ್ಲದೆ ಮಾರಾಟದ ವಿಚಾರದಲ್ಲೂ ಇದು ಪ್ರತಿಫಲಿಸುತ್ತಿದೆ.

01. ಆಲ್ಟೊ

01. ಆಲ್ಟೊ

ಒಟ್ಟು ಮಾರಾಟ: 22,595 ಯುನಿಟ್

ಸದ್ಯಕ್ಕಂತೂ ಮಾರುತಿ ಅಗ್ರಸ್ಥಾನಕ್ಕೆ ಯಾವುದೇ ಧಕ್ಕೆಯುಂಟಾಗಲ್ಲ ಎಂಬುದು ಖಚಿತವೆನಿಸಿದೆ. ದೇಶದ ಮಧ್ಯಮ ವರ್ಗದ ಜನರ ಜನಪ್ರಿಯ ಮಾದರಿ ಎಂಬ ಪಟ್ಟವನ್ನು ಉಳಿಸಿಕೊಂಡಿರುವ ಆಲ್ಟೊ ಸರ್ವಕಾಲಿಕ ಶ್ರೇಷ್ಠ ಕಾರೆನಿಸಿಕೊಂಡಿದೆ.

Most Read Articles

Kannada
Read more on ಕಾರು cars
English summary
Looking at the brighter side, there have been new entrances as well. So now, let's take a look at top 10 selling cars in May 2015:
Story first published: Wednesday, June 3, 2015, 18:12 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X