ಟೊಯೊಟಾ ರಿಮೆಂಬರ್ ಡಿಸೆಂಬರ್ ಆಫರ್

Written By:

ಜಪಾನ್ ಮೂಲದ ಪ್ರಖ್ಯಾತ ಕಾರು ಸಂಸ್ಥೆ ಟೊಯೊಟಾ ವರ್ಷಾಂತ್ಯದ ಈ ವೇಳೆಯಲ್ಲಿ ತನ್ನ ನೆಚ್ಚಿನ ಗ್ರಾಹಕರಿಗಾಗಿ ರಿಮೆಂಬರ್ ಡಿಸೆಂಬರ್ ಆಫರ್ ಗಳನ್ನು ಮುಂದಿಟ್ಟಿದೆ. ಇದರಂತೆ ಟೊಯೊಟಾದ ಆರು ಶ್ರೇಣಿಯ ಕಾರುಗಳಿಗೆ ಆಫರ್ ಗಳು ಲಭ್ಯವಾಗಲಿದೆ.

ಟೊಯೊಟಾ ರಿಮೆಂಬರ್ ಡಿಸೆಂಬರ್ ಆಫರ್ 2015 ಡಿಸೆಂಬರ್ 31ರ ವರೆಗೆ ಮಾತ್ರ ಲಭ್ಯವಾಗಲಿದೆ. ಆಯ್ದ 15 ಪ್ರದೇಶಗಳಲ್ಲಿ ಮಾತ್ರ ಟೊಯೊಟಾ ಆಫರ್ ಲಭ್ಯವಾಗಲಿದೆ.

ಟೊಯೊಟಾ ರಿಮೆಂಬರ್ ಡಿಸೆಂಬರ್ ಆಫರ್

ದೆಹಲಿ ಎನ್‌ಸಿಆರ್, ಗುರ್ಗಾಂವ್, ಹರಿಯಾಣ, ಪಂಜಾಬ್, ಹಿಮಾಚಲ, ಕೇರಳ, ತಮಿಳುನಾಡು, ಮುಂಬೈ, ಪಶ್ಚಿಮ ಬಂಗಾಳ, ಅಸ್ಸಾಂ, ಸಿಕ್ಕಿಂ, ಗೋವಾ, ತೆಲಂಗಾಣ, ಆಂಧ್ರ ಪ್ರದೇಶ ಹಾಗೂ ಕರ್ನಾಟಕ ರಾಜ್ಯಗಳಲ್ಲಿನ ಗ್ರಾಹಕರು ಟೊಯೊಟಾ ರಿಮೆಂಬರ್ ಡಿಸೆಂಬರ್ ಆಫರ್ ಗಿಟ್ಟಿಸಿಕೊಳ್ಳಬಹುದಾಗಿದೆ.

ಪ್ರತಿಯೊಂದು ಪ್ರದೇಶಗಳಲ್ಲೂ ಗ್ರಾಹಕರು ವಿವಿಧ ಆಫರ್ ಹಾಗೂ ಪ್ರಯೋಜನಗಳನ್ನು ಗಿಟ್ಟಿಸಿಕೊಳ್ಳಬಹುದಾಗಿದೆ. ಇದಕ್ಕಾಗಿ ನಿಕಟ ಶೋ ರೂಂಗಳಿಗೆ ಭೇಟಿ ಕೊಡಲು ಮರೆಯದಿರಿ.

ಕರೊಲ್ಲಾ ಅಲ್ಟೀಸ್

ಟೊಯೊಟಾ ಕರೊಲ್ಲಾ ಅಲ್ಟೀಸ್ ಖರೀದಿ ವೇಳೆಯಲ್ಲಿ ಗರಿಷ್ಠ 40,000 ರು.ಗ ವರೆಗೆ ಪ್ರಯೋಜನ ಪಡೆಯಬಹುದಾಗಿದೆ.

ಎಟಿಯೋಸ್ ಲಿವಾ

ಇನ್ನೊಂದೆಡೆ ಟೊಯೊಟಾ ಎಟಿಯೋಸ್ ಲಿವಾ ಖರೀದಿಯಲ್ಲಿ ಗರಿಷ್ಠ 20,000 ರು.ಗಳ ವರೆಗಿನ ಪ್ರಯೋಜನ ನಿಮ್ಮದಾಗಿಸಬಹುದಾಗಿದೆ.

ಎಟಿಯೋಸ್

ಅಂತೆಯೇ ಟೊಯೊಟಾ ಎಟಿಯೋಸ್ ಖರೀದಿಯಲ್ಲಿ 30,000 ರು.ಗಳ ವರೆಗಿನ ಪ್ರಯೋಜನ ಪಡೆಯಬಹುದಾಗಿದೆ.

ಇನ್ನೋವಾ

ಟೊಯೊಟಾದ ಜನಪ್ರಿಯ ಇನ್ನೋವಾ ಖರೀದಿ ವೇಳೆಯಲ್ಲೂ ಗರಿಷ್ಠ 40,000 ರು.ಗಳ ವರೆಗಿನ ಪ್ರಯೋಜನ ನೀಡಲಾಗುತ್ತಿದೆ.

ಎಟಿಯೋಸ್ ಕ್ರಾಸ್

ಟೊಯೊಟಾ ಎಟಿಯೋಸ್ ಕ್ರಾಸ್ ಖರೀದಿಯಲ್ಲೂ 20,000 ರು.ಗಳ ಪ್ರಯೋಜನ ಪಡೆಯಬಹುದಾಗಿದೆ.

ಫಾರ್ಚ್ಯುನರ್

ಟೊಯೊಟಾ ಐಷಾರಾಮಿ ಕ್ರೀಡಾ ಬಳಕೆಯ ವಾಹನ ಫಾರ್ಚ್ಯುನರ್ ಕಾರಿಗೂ ಡಿಸೆಂಬರ್ ರಿಮೆಂಬರ್ ಆಫರ್ ಲಭ್ಯವಾಗಲಿದೆ. ಇದರಂತೆ ಗ್ರಾಹಕರು ಶೇಕಡಾ 7.99ರ ಬಡ್ಡಿದರದಲ್ಲಿ ಹಣಕಾಸು ನೆರವನ್ನು ಪಡೆಯಬಹುದಾಗಿದೆ.

English summary
Toyota Introduces Remember December Offer In India
Story first published: Saturday, December 12, 2015, 9:35 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark