ಹೊಸ ಸ್ಕೋಡಾ ರಾಪಿಡ್ ಆಗಮನಕ್ಕೆ ವೇದಿಕೆ ಸಿದ್ಧ

Written By:

ಹೊಸ ಸ್ಕೋಡಾ ರಾಪಿಡ್ ಆಗಮನಕ್ಕೆ ವೇದಿಕೆ ಸಿದ್ಧಗೊಂಡಿದೆ. ಜರ್ಮನಿಯ ಮೂಲದ ಫೋಕ್ಸ್ ವ್ಯಾಗನ್ ಭಾಗವಾಗಿರುವ ಸ್ಕೋಡಾ ಪರಿಷ್ಕೃತ ರೂಪವನ್ನು ಪಡೆದುಕೊಳ್ಳುತ್ತಿದ್ದು, ಹೊಸ ರಾಪಿಡ್ ಕಾರು 2016 ನವೆಂಬರ್ 03ರಂದು ಬಿಡುಗಡೆ ಭಾಗ್ಯ ಕಾಣಲಿದೆ. ವಿನ್ಯಾಸ ಹಾಗೂ ಗುಣಮಟ್ಟದಲ್ಲಿ ಯಾವುದೇ ರಾಜಿಗೂ ತಯಾರಾಗದ 2017 ಸ್ಕೋಡಾ ರಾಪಿಡ್ ಗಮನಾರ್ಹ ವೈಶಿಷ್ಟ್ಯಗಳನ್ನು ಪಡೆದುಕೊಳ್ಳಲಿದೆ.

ಹೊಸ ಸ್ಕೋಡಾ ರಾಪಿಡ್ ಆಗಮನಕ್ಕೆ ವೇದಿಕೆ ಸಿದ್ಧ

ಕಾರಿನ ಮುಂಭಾಗದಲ್ಲಿ ಪ್ರಮುಖವಾಗಿಯೂ ಬದಲಾವಣೆ ಕಂಡುಬಂದಿದ್ದು, ಯುರೋಪ್ ರಾಪಿಡ್ ಹಾಗೂ ಈಗಿನ ಫ್ಯಾಬಿಯಾದಿಂದ ಪ್ರೇರಣೆ ಪಡೆದುಕೊಂಡಿದೆ.

ಹೊಸ ಸ್ಕೋಡಾ ರಾಪಿಡ್ ಆಗಮನಕ್ಕೆ ವೇದಿಕೆ ಸಿದ್ಧ

ಹೆಚ್ಚು ತೀಕ್ಷ್ಣವಾದ ಫ್ರಂಟ್ ಗ್ರಿಲ್, ಪ್ರೊಜೆಕ್ಟರ್ ಹೆಡ್ ಲ್ಯಾಂಪ್ ಹಾಗೂ ಡೇಟೈಮ್ ರನ್ನಿಂಗ್ ಲೈಟ್ಸ್ ಸೇವೆಯಿರಲಿದೆ.

ಹೊಸ ಸ್ಕೋಡಾ ರಾಪಿಡ್ ಆಗಮನಕ್ಕೆ ವೇದಿಕೆ ಸಿದ್ಧ

ಒಕ್ಟಾವಿಯಾಗೆ ಸಮಾನವಾದ ಬಂಪರ್, ದೊಡ್ಡದಾದ ಫಾಂಗ್ ಲ್ಯಾಂಪ್, ಬಲೆಯಂಥಹ ಏರ್ ಇಂಟೇಕ್ ಇದರಲ್ಲಿರಲಿದೆ. ಹಿಂದುಗಡೆಯೂ ಪರಿಷ್ಕೃತ ಬಂಪರ್ ಹಾಗೂ ಟೈಲ್ ಲ್ಯಾಂಪ್ ಕಾಣಬಹುದಾಗಿದೆ.

ಹೊಸ ಸ್ಕೋಡಾ ರಾಪಿಡ್ ಆಗಮನಕ್ಕೆ ವೇದಿಕೆ ಸಿದ್ಧ

ಕಾರಿನೊಳಗೆ ಡ್ಯುಯಲ್ ಟೋನ್ ಬ್ಲ್ಯಾಕ್ ಮತ್ತು ಬೀಜ್ ಬಣ್ಣದ ಆಯ್ಕೆಯನ್ನು ಕೊಡಲಾಗಿದೆ. ಹಾಗಿದ್ದರೂ ಡ್ಯಾಶ್ ಬೋರ್ಡ್ ವಿನ್ಯಾಸ ಹಾಗೂ ಆಸನ ವ್ಯವಸ್ಥೆಗಳಲ್ಲಿ ಹೆಚ್ಚಿನ ಬದಲಾವಣೆಗಳು ಕಂಡುಬಂದಿಲ್ಲ.

ಹೊಸ ಸ್ಕೋಡಾ ರಾಪಿಡ್ ಆಗಮನಕ್ಕೆ ವೇದಿಕೆ ಸಿದ್ಧ

ನೂತನ ಸ್ಕೋಡಾ ರಾಪಿಡ್ ಟಚ್ ಸ್ಕ್ರೀನ್ ಇನ್ಪೋಟೈನ್ಮೆಂಟ್ ಸಿಸ್ಟಂ ಜೊತೆ ಮಿರರ್ ಲಿಂಕ್, ಬ್ಲೂಟೂತ್ ಸಪೋರ್ಟ್, ಜಿಪಿಎಸ್ ನೇವಿಗೇಷನ್ ಮತ್ತು ರಿವರ್ಸ್ ಕ್ಯಾಮೆರಾ ಸೌಲಭ್ಯಗಳನ್ನು ಪಡೆಯಲಿದೆ.

ಹೊಸ ಸ್ಕೋಡಾ ರಾಪಿಡ್ ಆಗಮನಕ್ಕೆ ವೇದಿಕೆ ಸಿದ್ಧ

ಎಂಜಿನ್ ತಾಂತ್ರಿಕತೆಯ ಬಗ್ಗೆ ಮೆಲುಕು ಹಾಗಿದ್ದಲ್ಲಿ 1.5 ಲೀಟರ್ ಟಿಡಿಐ ಎಂಜಿನ್ ಇದರಲ್ಲಿರಲಿದ್ದು, 250 ಎನ್ ಎಂ ತಿರುಗುಬಲದಲ್ಲಿ 110 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ.

ಹೊಸ ಸ್ಕೋಡಾ ರಾಪಿಡ್ ಆಗಮನಕ್ಕೆ ವೇದಿಕೆ ಸಿದ್ಧ

ಹಾಗೆಯೇ 1.6 ಲೀಟರ್ ಪೆಟ್ರೋಲ್ ಎಂಜಿನ್ ಆಯ್ಕೆಯೂ ಇದರಲ್ಲಿದ್ದು, ಐದು ಸ್ಪೀಡ್ ಮ್ಯಾನುವಲ್ ಜೊತೆಗೆ ಆರು ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಜೋಡಣೆಯಾಗಿದೆ.

ಹೊಸ ಸ್ಕೋಡಾ ರಾಪಿಡ್ ಆಗಮನಕ್ಕೆ ವೇದಿಕೆ ಸಿದ್ಧ

2017 ಸ್ಕೋಡಾ ರಾಪಿಡ್ ಬುಕ್ಕಿಂಗ್ ಪ್ರಕ್ರಿಯೆಯನ್ನು ಆರಂಭಿಸಲಾಗಿದ್ದು, ಆಸಕ್ತ ಗ್ರಾಹಕರು ಮುಂಗಡವಾಗಿ 25,000 ರು.ಗಳನ್ನು ಪಾವತಿಸಿ ಬುಕ್ಕಿಂಗ್ ಮಾಡಿಕೊಳ್ಳಬಹುದಾಗಿದೆ.

ಪ್ರತಿಸ್ಪರ್ಧಿಗಳು

ಪ್ರತಿಸ್ಪರ್ಧಿಗಳು

ಫೋಕ್ಸ್ ವ್ಯಾಗನ್ ವೆಂಟೊ,

ಹೋಂಡಾ ಸಿಟಿ,

ಹ್ಯುಂಡೈ ವೆರ್ನಾ,

ಮಾರುತಿ ಸುಜುಕಿ ಸಿಯಾಝ್

ಹೊಸ ಸ್ಕೋಡಾ ರಾಪಿಡ್ ಆಗಮನಕ್ಕೆ ವೇದಿಕೆ ಸಿದ್ಧ

ಇನ್ನೊಂದೆಡೆ ಈಗ ಮಾರಾಟದಲ್ಲಿರುವ ಸ್ಕೋಡಾ ರಾಪಿಡ್ ಕಾರಿಗೆ ಹಬ್ಬದ ಸಂಭ್ರಮದ ಅಂಗವಾಗಿ ಒಂದು ಲಕ್ಷ ರು.ಗಳ ವರೆಗೆ ಡಿಸ್ಕೌಂಟ್ ನೀಡಲಾಗುತ್ತಿದೆ.

Read more on ಸ್ಕೋಡಾ skoda
English summary
2017 Skoda Rapid Bookings Begin In India
Story first published: Tuesday, October 25, 2016, 20:00 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark