ನೂತನ ಸ್ಕೋಡಾ ಸೂಪರ್ಬ್ ಭಾರತಕ್ಕೆ ಎಂಟ್ರಿ

By Nagaraja

ಜೆಕ್ ಗಣರಾಜ್ಯದ ವಾಹನ ತಯಾರಿಕ ಸಂಸ್ಥೆ ಸ್ಕೋಡಾ, ಭಾರತ ಮಾರುಕಟ್ಟೆಯಲ್ಲಿ ಮೂರನೇ ತಲೆಮಾರಿನ ಸೂಪರ್ಬ್ ಕಾರನ್ನು ಬಿಡುಗಡೊಳಿಸಿದೆ. ಇದರ ಪ್ರಾರಂಭಿಕ ಬೆಲೆ 22.68 ಲಕ್ಷ ರು.ಗಳಾಗಿರಲಿದೆ. ಒಕ್ಟಾವಿಯಾ ಬಳಿಕ ಸ್ಕೋಡಾದ ತಾಜಾ ವಿನ್ಯಾಸ ತಂತ್ರಗಾರಿಕೆಯಲ್ಲಿ ಬಿಡುಗಡೆಯಾಗುತ್ತಿರುವ ಎರಡನೇ ಕಾರು ಸೂಪರ್ಬ್ ಆಗಿದೆ.

ನೂತನ ಸ್ಕೋಡಾ ಸೂಪರ್ ಹೊರಮೈಯಲ್ಲಿ ಬೈ ಕ್ಸೆನನ್ ಹೆಡ್ ಲ್ಯಾಂಪ್ ಜೊತೆ ಎಲ್ ಇಡಿ ಡೇಟೈಮ್ ರನ್ನಿಂಗ್ ಲೈಟ್ಸ್, 18 ಇಂಚುಗಳ ಅಲಾಯ್ ವೀಲ್, ಎಲ್ ಇಡಿ ಟೈಲ್ ಲ್ಯಾಂಪ್, ಪವರ್ ಓಪರೇಟಡ್ ಬೂಟ್ ರಿಲೀಸ್, ಪಾರ್ಕಿಂಗ್ ಅಸಿಸ್ಟ್ ಮತ್ತು ಸನ್ ರೂಫ್ ಇರಲಿದೆ.

ಬೆಲೆ ಮಾಹಿತಿ (ಎಕ್ಸ್ ಶೋ ರೂಂ ಮುಂಬೈ)

 • 2016 ಸ್ಕೋಡಾ ಸೂಪರ್ಬ್ 1.8 ಟಿಎಸ್‌ಐ ಎಂಟಿ ಸ್ಟೈಲ್: 22.68 ಲಕ್ಷ ರು.
 • 2016 ಸ್ಕೋಡಾ ಸೂಪರ್ಬ್ 1.8 ಟಿಎಸ್‌ಐ ಎಟಿ ಸ್ಟೈಲ್: 23.91 ಲಕ್ಷ ರು.
 • 2016 ಸ್ಕೋಡಾ ಸೂಪರ್ಬ್ 1.8 ಟಿಎಸ್‌ಐ ಎಟಿ ಎಲ್ ಆಂಡ್ ಕೆ: 26.81 ಲಕ್ಷ ರು.
 • 2016 ಸ್ಕೋಡಾ ಸೂಪರ್ಬ್ 2.0 ಟಿಡಿಐ ಎಟಿ ಸ್ಟೈಲ್: 26.39 ಲಕ್ಷ ರು.
 • 2016 ಸ್ಕೋಡಾ ಸೂಪರ್ಬ್ 2.0 ಟಿಡಿಐ ಎಟಿ ಎಲ್ ಆಂಡ್ ಕೆ: 29.36 ಲಕ್ಷ ರು.

ಕಾರಿನೊಳಗೆ ಪ್ರೀಮಿಯಂ ಚಾಲನಾ ಅನುಭವಕ್ಕೆ ಒತ್ತು ನೀಡಲಾಗಿದ್ದು, ಮೂರು ಚಾಲನಾ ವಿಧಗಳು, 12 ವಿಧಗಳಲ್ಲಿ ಹೊಂದಾಣಿಸಬಹುದಾದ ಫ್ರಂಟ್ ಸೀಟು ಜೊತೆ ಮೆಮರಿ, ಲಂಬರ್ ಸಪೋರ್ಟ್, ಮೂರು ವಿಧಗಳ ಕ್ಲೈಮೇಟ್ ಕಂಟ್ರೋಲ್, 6.5 ಇಂಚುಗಳ ಸ್ಮಾರ್ಟ್ ಲಿಂಕ್ ಇನ್ಪೋಟೈನ್ಮೆಂಟ್ ಸಿಸ್ಟಂ ಮತ್ತು 12 ಸ್ಪೀಕರ್ ಕ್ಯಾಂಟನ್ ಆಡಿಯೋ ಸಿಸ್ಟಂ ವ್ಯವಸ್ಥೆಗಳಿರಲಿದೆ.

ಸ್ಕೋಡಾ ಎಂಕ್ಯೂಬಿ ತಳಹದಿಯಲ್ಲಿ ನಿರ್ಮಾಣವಾಗಿರುವ ಸ್ಕೋಡಾ ಸೂಪರ್ಬ್, ತನ್ನ ಹಿಂದಿನ ಮಾದರಿಗಿಂತಲೂ 75 ಕೆ.ಜಿಗಳಷ್ಟು ಕಡಿಮೆ ಭಾರವನ್ನು ಹೊಂದಿರಲಿದೆ.

ಎಂಜಿನ್ ತಾಂತ್ರಿಕತೆ

ಪೆಟ್ರೋಲ್

1798 ಸಿಸಿ (ಮ್ಯಾನುವಲ್) - 177 ಅಶ್ವಶಕ್ತಿ - 320 ಎನ್ ಎಂ ತಿರುಗುಬಲ

1798 ಸಿಸಿ (ಆಟೋಮ್ಯಾಟಿಕ್) - 177 ಅಶ್ವಶಕ್ತಿ - 250 ಎನ್ ಎಂ ತಿರುಗುಬಲ

ಡೀಸೆಲ್

1968 ಸಿಸಿ (ಆಟೋಮ್ಯಾಟಿಕ್) - 174 ಅಶ್ವಶಕ್ತಿ - 350 ಎನ್ ಎಂ ತಿರುಗುಬಲ

ಮೈಲೇಜ್

 • ಪೆಟ್ರೋಲ್ ಮ್ಯಾನುವಲ್: 14.12km/l
 • ಪೆಟ್ರೋಲ್ ಆಟೋಮ್ಯಾಟಿಕ್: 14.67km/l
 • ಡೀಸೆಲ್ ಆಟೋಮ್ಯಾಟಿಕ್: 18.19km/l

ಗೇರ್ ಬಾಕ್ಸ್

ಪೆಟ್ರೋಲ್ ಮ್ಯಾನುವಲ್: 6 ಸ್ಪೀಡ್

ಪೆಟ್ರೋಲ್ ಆಟೋಮ್ಯಾಟಿಕ್: 7 ಸ್ಪೀಡ್ ಡಿಎಸ್‌ಜಿ ಆಟೋಮ್ಯಾಟಿಕ್

ಡೀಸೆಲ್ ಆಟೋಮ್ಯಾಟಿಕ್: 6 ಸ್ಪೀಡ್ ಡಿಎಸ್‌ಜಿ ಆಟೋಮ್ಯಾಟಿಕ್

ಸುರಕ್ಷತೆ

 • 8 ಏರ್ ಬ್ಯಾಗ್
 • ಎಬಿಎಸ್ ಜೊತೆ ಇಬಿಡಿ
 • ಕ್ರೂಸ್ ಕಂಟ್ರೋಲ್
 • ಹಿಲ್ ಹೋಲ್ಡ್ ಅಸಿಸ್ಟ್
 • ಟ್ರಾಕ್ಷನ್ ಕಂಟ್ರೋಲ್ ಜೊತೆ ಇಎಸ್ ಸಿ

ಪ್ರತಿಸ್ಪರ್ಧಿಗಳು

ಟೊಯೊಟಾ ಕ್ಯಾಮ್ರಿ

ಆಡಿ ಎ3

Most Read Articles

Kannada
English summary
Skoda's Stunning New Superb Arrives In India
Story first published: Tuesday, February 23, 2016, 16:05 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
X