ಭಾರತಕ್ಕೆ ಎಂಟ್ರಿ ಕೊಟ್ಟ ಹೊಚ್ಚ ಹೊಸ ಬಾಂಡ್ ಕಾರು

By Nagaraja

ಹಾಲಿವುಡ್ ರೋಚಕ ಪತ್ತೆದಾರಿ ಜೇಮ್ಸ್ ಬಾಂಡ್ ಚಿತ್ರಗಳಲ್ಲಿ ಜನಪ್ರಿಯವಾಗಿರುವ ಆಸ್ಟನ್ ಮಾರ್ಟಿನ್‌ ಸರಣಿಯ ಅತಿ ನೂತನ ಕಾರು ಭಾರತಕ್ಕೆ ಎಂಟ್ರಿ ಕೊಟ್ಟಿದೆ. ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಆಸ್ಟನ್ ಮಾರ್ಟಿನ್ ಡಿಬಿ11 ಕಾರು ಪ್ರವೇಶಿಸಿದೆ. ಅಷ್ಟೇ ಯಾಕೆ ನೂತನ ಆಸ್ಟನ್ ಮಾರ್ಟಿನ್ ಡಿಬಿ11 ಕಾರು ತನ್ನ ಶಕ್ತಿ ಪ್ರದರ್ಶನವನ್ನು ಆರಂಭಿಸಿದೆ.

ಭಾರತಕ್ಕೆ ಎಂಟ್ರಿ ಕೊಟ್ಟ ಹೊಚ್ಚ ಹೊಸ ಬಾಂಡ್ ಕಾರು

ನೂತನ ಆಸ್ಟನ್ ಮಾರ್ಟಿನ್ ಡಿಬಿ11 ಕಾರು ದೆಹಲಿ ಎಕ್ಸ್ ಶೋ ರೂಂ ಬೆಲೆಯ ಪ್ರಕಾರ 4.2 ಕೋಟಿ ರುಪಾಯಿಗಳಷ್ಟು ದುಬಾರಿಯೆನಿಸಲಿದೆ. ಇದು ಆಸ್ಟನ್ ಮಾರ್ಟಿನ್ ಡಿಬಿ9 ಕಾರಿನ ಉತ್ತರಾಧಿಕಾರಿಯಾಗಲಿದೆ.

ಭಾರತಕ್ಕೆ ಎಂಟ್ರಿ ಕೊಟ್ಟ ಹೊಚ್ಚ ಹೊಸ ಬಾಂಡ್ ಕಾರು

ಕೊನೆಗೂ ಜೇಮ್ಸ್ ಬಾಂಡ್ ಜನಪ್ರಿಯ ಕಾರನ್ನು ಭಾರತಕ್ಕೆ ತರಲು ಸಂಸ್ಥೆಯು ನಿರ್ಧರಿಸಿದೆ. ಇದು ಆಸ್ಟನ್ ಮಾರ್ಟಿನ್ ಇತಿಹಾಸವನ್ನು ದೇಶದಲ್ಲಿ ಸಾರಲಿದೆ.

ಭಾರತಕ್ಕೆ ಎಂಟ್ರಿ ಕೊಟ್ಟ ಹೊಚ್ಚ ಹೊಸ ಬಾಂಡ್ ಕಾರು

ಮಾರ್ಚ್ ನಲ್ಲಿ ನಡೆದ 2016 ಜಿನೆವಾ ಮೋಟಾರು ಶೋದಲ್ಲಿ ಮೊದಲ ಬಾರಿಗೆ ಎಂಟ್ರಿ ಕೊಟ್ಟಿರುವ ಆಸ್ಟನ್ ಮಾರ್ಟಿನ್ ಡಿಬಿ11, ಆಗಲೇ ಅನೇಕ ಜಾಗತಿಕ ಮಾರುಕಟ್ಟೆಗಳನ್ನು ತಲುಪಿದೆ.

ಭಾರತಕ್ಕೆ ಎಂಟ್ರಿ ಕೊಟ್ಟ ಹೊಚ್ಚ ಹೊಸ ಬಾಂಡ್ ಕಾರು

ಆಸ್ಟನ್ ಮಾರ್ಟಿನ್ 'ಸೆಕೆಂಡ್ ಸೆಂಚುರಿ' ಯೋಜನೆಯಡಿಯಲ್ಲಿ ಬಿಡುಗಡೆಯಾಗಿರುವ ಮೊದಲ ಕಾರು ಇದಾಗಿದೆ. ಮತ್ತಷ್ಟು ನೂತನ ಹಾಗೂ ಪರಿಷ್ಕತ ಆವೃತ್ತಿಗಳನ್ನು ಬಿಡುಗಡೆ ಮಾಡುವ ಗುರಿ ಹೊಂದಿದೆ.

ಭಾರತಕ್ಕೆ ಎಂಟ್ರಿ ಕೊಟ್ಟ ಹೊಚ್ಚ ಹೊಸ ಬಾಂಡ್ ಕಾರು

5.2 ಲಿಟರ್ ಟ್ವಿನ್ ಟರ್ಬೊ ವಿ12 ಎಂಜಿನ್ ನಿಂದ ನಿಯಂತ್ರಿಸಲ್ಪಡುವ ಆಸ್ಟನ್ ಮಾರ್ಟಿನ್ ಡಿಬಿ11 ಕಾರು 700 ಎನ್ ಎಂ ತಿರುಗುಬಲದಲ್ಲಿ 600 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ.

ಭಾರತಕ್ಕೆ ಎಂಟ್ರಿ ಕೊಟ್ಟ ಹೊಚ್ಚ ಹೊಸ ಬಾಂಡ್ ಕಾರು

ಆಸ್ಟನ್ ಮಾರ್ಟಿನ್ ಡಿಬಿ ಶ್ರೇಣಿಯ ಕಾರುಗಳಿಗೆ ಇದೇ ಎಂಜಿನ್ ಬಳಕೆಯಾಗಲಿದ್ದು, ಎಂಟು ಸ್ಪೀಡ್ ಗೇರ್ ಬಾಕ್ಸ್ ಇರುತ್ತದೆ.

ಭಾರತಕ್ಕೆ ಎಂಟ್ರಿ ಕೊಟ್ಟ ಹೊಚ್ಚ ಹೊಸ ಬಾಂಡ್ ಕಾರು

ಅಂದ ಹಾಗೆ ಜೇಮ್ಸ್ ಬಾಂಡ್ ಚಿತ್ರದ ಚೇಸಿಂಗ್ ನಲ್ಲೂ ಬಹು ಮುಖ್ಯ ಪಾತ್ರ ವಹಿಸುತ್ತಿರುವ ಆಸ್ಟನ್ ಮಾರ್ಟಿನ್ ನೂತನ ಡಿಬಿ11 ಕಾರು 3.9 ಸೆಕೆಂಡುಗಳಲ್ಲೇ ಗಂಟೆಗೆ 0-100 ಕೀ.ಮೀ. ವೇಗವರ್ಧನೆ ಹಾಗೂ ಗಂಟೆಗೆ ಗರಿಷ್ಠ 322 ಕೀ.ಮೀ. ವೇಗದಲ್ಲಿ ಸಂಚರಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ.

ಭಾರತಕ್ಕೆ ಎಂಟ್ರಿ ಕೊಟ್ಟ ಹೊಚ್ಚ ಹೊಸ ಬಾಂಡ್ ಕಾರು

ಆಸ್ಟನ್ ಮಾರ್ಟಿನ್ ಡಿಬಿ9 ಮಾದರಿಗೆ ಹೋಲಿಸಿದಾಗ ಹೊಸ ಕಾರು 20 ಎಂಎಂ ಗಳಷ್ಟು ಹೆಚ್ಚು ಅಗಲವನ್ನು ಪಡೆದಿದೆ. ಟ್ವಿನ್ ಟರ್ಬೊ ಎಂಜಿನ್ ಪಡೆದಿರುವ ಮೊದಲ ಆಸ್ಟನ್ ಮಾರ್ಟಿನ್ ಕಾರೆಂಬ ಗೌರವಕ್ಕೂ ಪಾತ್ರವಾಗಿದೆ.

ಭಾರತಕ್ಕೆ ಎಂಟ್ರಿ ಕೊಟ್ಟ ಹೊಚ್ಚ ಹೊಸ ಬಾಂಡ್ ಕಾರು

ವೈಶಿಷ್ಟ್ಯಗಳ ಬಗ್ಗೆ ಮಾತನಾಡುವುದಾದ್ದಲ್ಲಿ ಸಂಪೂರ್ಣ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಎಲ್ ಇಡಿ ಹೆಡ್ ಲೈಟ್, ಡೇಲೈಟ್ ರನ್ನಿಂಗ್ ಲೈಟ್ಸ್, ಲೊ ಸ್ಪೀಡ್ ಕಾರ್ನರಿಂಗ್ ಲೈಟ್ಸ್, 20 ಇಂಚುಗಳ ಚಕ್ರಗಳು, ಎಲ್ ಇಡಿ ಟೈಲ್ ಲೈಟ್, 12 ಇಂಚುಗಳ ಕಲರ್ ಟಿಎಫ್ ಟಿ ಎಲ್ ಸಿಡಿ ಡಿಸ್ ಪ್ಲೇ, ಇನ್ಪೋಟೈನ್ಮೆಂಟ್ ಸಿಸ್ಟಂಗಾಗಿ ಎಂಟು ಇಂಚುಗಳ ಟಿಎಫ್ ಟಿ ಸ್ಕ್ರೀನ್, ಬ್ಯಾಂಗ್ ಆಂಡ್ ಓಲುಫ್ಸೆನ್ ಆಡಿಯೋ ಸಿಸ್ಟಂ, ಪ್ಯಾರಲಲ್ ಮತ್ತು ಬೇ ಪಾರ್ಕಿ ಅಸಿಸ್ಟನ್ಸ್ ಮತ್ತು 360 ಡಿಗ್ರಿ ಐ ಕ್ಯಾಮೆರಾ ವ್ಯವಸ್ಥೆಗಳಿರಲಿದೆ.

Most Read Articles

Kannada
English summary
Aston Martin Previews Mr. Bond's Company Car In India — Launch Imminent?
Story first published: Tuesday, October 4, 2016, 17:44 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X