ಜಾಝ್ ರೇಸಿಂಗ್ ಕಾನ್ಸೆಪ್ಟ್‌ನೊಂದಿಗೆ ಮೈನೆರೆದ ಹೋಂಡಾ

ಇತ್ತೀಚೆಗಷ್ಟೇ ರಾಷ್ಟ್ರ ರಾಜಧಾನಿಯಲ್ಲಿ ನಡೆದ 2016 ಆಟೋ ಎಕ್ಸ್ ಪೋದಲ್ಲಿ ಅತಿ ನೂತನ ಜಾಝ್ ರೇಸಿಂಗ್ ಕಾನ್ಸೆಪ್ಟ್ ಕಾರನ್ನು ಪ್ರದರ್ಶಿಸಿರುವ ಜಪಾನ್ ಮೂಲದ ಹೋಂಡಾ ಸಂಸ್ಥೆಯು ಎಲ್ಲರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ.

ಪ್ರಸ್ತುತ ಮಾರಾಟದಲ್ಲಿರುವ ಜಾಝ್ ಕಾರಿನ ಶಕ್ತಿಶಾಲಿ ಆವೃತ್ತಿ ಇದಾಗಿದೆ. ಇದೇ ವೇಳೆಯಲ್ಲಿ ಅತಿ ನೂತನ ಕಾಂಪಾಕ್ಟ್ ಎಸ್‌ಯುವಿ ಹೋಂಡಾ ಬಿಆರ್ ವಿ ಎಂಟ್ರಿ ಕೊಟ್ಟಿರುವುದನ್ನು ನೀವಿಲ್ಲಿ ನೆನಪಿಸಿಕೊಳ್ಳಬಹುದಾಗಿದೆ.

ಜಾಝ್ ರೇಸಿಂಗ್ ಕಾನ್ಸೆಪ್ಟ್‌ನೊಂದಿಗೆ ಮೈನೆರೆದ ಹೋಂಡಾ

ನಿಮ್ಮ ಮಾಹಿತಿಗಾಗಿ, ಹೋಂಡಾ ಜಾಝ್ ರೇಸಿಂಗ್ ಕಾನ್ಸೆಪ್ಟ್ ಇದೀಗ ಸಂಸ್ಥೆಯ ಘಟಕದಲ್ಲಿ ಅಧ್ಯಯನ ಮತ್ತು ಅಭಿವೃದ್ಧಿ ಹಂತದಲ್ಲಿದೆ.

ಜಾಝ್ ರೇಸಿಂಗ್ ಕಾನ್ಸೆಪ್ಟ್‌ನೊಂದಿಗೆ ಮೈನೆರೆದ ಹೋಂಡಾ

ಭಾರತದಲ್ಲಿ ನೆಲೆಗೊಂಡಿರುವ ಹೋಂಡಾದ ಆರ್ ಆಂಡ್ ಡಿ ಅಥವಾ ಅಧ್ಯಯನ ಮತ್ತು ಅಭಿವೃದ್ಧಿ ತಂಡವು ಇದನ್ನು ತಯಾರಿಸಲಿದೆ.

ಜಾಝ್ ರೇಸಿಂಗ್ ಕಾನ್ಸೆಪ್ಟ್‌ನೊಂದಿಗೆ ಮೈನೆರೆದ ಹೋಂಡಾ

ರೇಸ್ ಕಾರಿಗೆ ಬೇಕಾದ ಎಲ್ಲ ವೈಶಿಷ್ಟ್ಯಗಳನ್ನು ಹೋಂಡಾ ರೇಸಿಂಗ್ ಕಾನ್ಸಪ್ಟ್ ಪಡೆದಿದೆ. ಇದು ವಿಶಿಷ್ಟ ಬಾಡಿ ಕಿಟ್, ಫ್ರಂಟ್ ಬಂಪರ್, ಗ್ರಾಫಿಕ್ಸ್, ರಿಕಾರೊ ಬಕೆಟ್ ಸೀಟುಗಳು ಮುಂತಾದ ವ್ಯವಸ್ಥೆಗಳಿರಲಿದೆ.

ಜಾಝ್ ರೇಸಿಂಗ್ ಕಾನ್ಸೆಪ್ಟ್‌ನೊಂದಿಗೆ ಮೈನೆರೆದ ಹೋಂಡಾ

ಹಾಗಿದ್ದರೂ ಎಂಜಿನ್ ತಾಂತ್ರಿಕತೆಗಳ ಬಗ್ಗೆ ವಿವರಗಳು ಬಹಿರಂಗವಾಗಿಲ್ಲ. ಸಾಮಾನ್ಯ ಜಾಝ್ 1.5 ಲೀಟರ್ ಐ ಡಿಟೆಕ್ ಎಂಜಿನ್ 99 ಅಶ್ವಶಕ್ತಿಯನ್ನು ಉತ್ಪಾದಿಸುತ್ತಿದ್ದು, 6 ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಇರಲಿದೆ. ಅಂತೆಯೇ 1.2 ಲೀಟರ್ ಪೆಟ್ರೋಲ್ ಐ ವಿಟೆಕ್ ಎಂಜಿನ್ 90 ಅಶ್ವಶಕ್ತಿಯನ್ನು ಉತ್ಪಾದಿಸುತ್ತದೆ. ಇದು 5 ಸ್ಪೀಡ್ ಮ್ಯಾನುವಲ್ ಅಥವಾ ಸಿಟಿವಿ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಪಡೆದಿರಲಿದೆ.

ಜಾಝ್ ರೇಸಿಂಗ್ ಕಾನ್ಸೆಪ್ಟ್‌ನೊಂದಿಗೆ ಮೈನೆರೆದ ಹೋಂಡಾ

ಇನ್ನುಳಿದಂತೆ ಬ್ರಿಡ್ಜ್ ಸ್ಟೋನ್ ಪೊಟೆನ್ಜಾ ರೇಸಿಂಗ್ ಚಕ್ರಗಳು, 5 ಸ್ಪೋಕ್ ಅಲಾಯ್ ರಿಮ್, ಕಾರ್ಬನ್ ಫೈಬರ್ ಪರಿಕರಗಳು, ಸಿಂಗಲ್ ಪೈಪ್ ಎಕ್ಸಾಸ್ಟ್ ಟಿಪ್ ಮತ್ತು ರಿಯರ್ ವಿಂಗ್ ಕಂಡುಬರಲಿದೆ.

ಜಾಝ್ ರೇಸಿಂಗ್ ಕಾನ್ಸೆಪ್ಟ್‌ನೊಂದಿಗೆ ಮೈನೆರೆದ ಹೋಂಡಾ

ಅಷ್ಟಕ್ಕೂ ಹೋಂಡಾ ಜಾಝ್ ರೇಸಿಂಗ್ ಕಾನ್ಸೆಪ್ಟ್ ನಿಮ್ಮ ಮನ ಸೆಳೆಯಿತೇ ? ಈ ಬಗ್ಗೆ ನಿಮ್ಮ ಅನಿಸಿಕೆಗಳನ್ನು ನಮ್ಮ ಜೊತೆ ಹಂಚಿಕೊಳ್ಳಿರಿ.

Most Read Articles

Kannada
English summary
Honda Jazz Racing Concept showcased at Auto Expo 2016
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X