ಹೋಂಡಾ 100 ಮಿಲಿಯನ್ ಮೈಲುಗಲ್ಲು; ಇತಿಹಾಸದತ್ತ ಪಯಣ..!

Written By:

ಜಪಾನ್ ಮೂಲದ ಪ್ರಮುಖ ವಾಹನ ನಿರ್ಮಾಣ ಸಂಸ್ಥೆ ಹೋಂಡಾ ಮೋಟಾರ್ ಕಂಪನಿ ಜಾಗತಿಕ ವಾಹನ ಕ್ಷೇತ್ರದಲ್ಲಿ 100 ಮಿಲಿಯನ್ ವಾಹನಗಳ ಮಾರಾಟ ಮೈಲುಗಲ್ಲನ್ನು ತಲುಪಿದೆ. ಇದು ಜಾಗತಿಕ ಮಟ್ಟದಲ್ಲಿ ಹೋಂಡಾ ಯಶಸ್ಸಿಗೆ ಕೈಗನ್ನಡಿಯಾಗಿದೆ.

1963ನೇ ಇಸವಿಯಲ್ಲಿ ಆಟೋಮೊಬೈಲ್ ಕ್ಷೇತ್ರಕ್ಕೆ ಕಾಲಿರಿಸಿರುವ ಹೋಂಡಾ ತದಾ ಬಳಿಕ ಹಿಂತುರುಗಿ ನೋಡಿಲ್ಲ. ಗುಣಮಟ್ಟದ ಉತ್ಪನ್ನ ನೀಡುವಲ್ಲಿ ಹೋಂಡಾ ಎಂದು ಎತ್ತಿದ ಕೈ.

1963ನೇ ಇಸವಿಯಲ್ಲಿ ಆಟೋಮೊಬೈಲ್ ಕ್ಷೇತ್ರಕ್ಕೆ ಕಾಲಿರಿಸಿರುವ ಹೋಂಡಾ ತದಾ ಬಳಿಕ ಹಿಂತುರುಗಿ ನೋಡಿಲ್ಲ. ಗುಣಮಟ್ಟದ ಉತ್ಪನ್ನ ನೀಡುವಲ್ಲಿ ಹೋಂಡಾ ಎಂದು ಎತ್ತಿದ ಕೈ.

1963ನೇ ಸಾಲಿನಲ್ಲೇ ಎಸ್500 ಸಣ್ಣದಾದ ಕ್ರೀಡಾ ಕಾರು ನಿರ್ಮಾಣವನ್ನು ಆರಂಭಿಸಿದ್ದ ಹೋಂಡಾ 1964ರಲ್ಲಿ ಪೂರ್ಣ ಪ್ರಮಾಣದ ವಾಹನಗಳ ನಿರ್ಮಾಣಕ್ಕೆ ಕಾಲಿರಿಸಿತ್ತು.

ಸಯಾಮಾ ಸಿಟಿಯಲ್ಲಿರುವ ಸಯಾಮಾ ಫಾಕ್ಟರಿ 3 ಘಟಕವು ಸಂಪೂರ್ಣವಾಗಿ ವಾಹನಗಳ ನಿರ್ಮಾಣಕ್ಕೆ ಮೀಸಲಿಡಲಾಗಿತ್ತು. ಎಸ್600 ಕ್ರೀಡಾ ಕಾರಿನ ನಿರ್ಮಾಣದೊಂದಿಗೆ ಇದರ ಆರಂಭವಾಗಿತ್ತು.

ಬಳಿಕ 1967ನೇ ಇಸವಿಯಲ್ಲಿ ಮೊದಲ ಮಿನಿ ವಾಹನ ಎನ್360 ನಿರ್ಮಾಣಕ್ಕೆ ಚಾಲನೆ ನೀಡಿತ್ತು. ತದಾ ಬಳಿಕ ಹೋಂಡಾ ಹಿಂತುರಿಗಿ ನೋಡಿಯೇ ಇಲ್ಲ.

ಜಗತ್ತಿನ ವಾಹನ ವಲಯಕ್ಕೆ ಸಿವಿಕ್, ಅಕಾರ್ಡ್, ಸಿಆರ್ ವಿ ಮತ್ತು ಫಿಟ್ ಗಳಂತಹ ಜನಪ್ರಿಯ ಮಾದರಿಗಳನ್ನು ಕೊಡುಗೆಯಾಗಿ ನೀಡಲು ಹೋಂಡಾಗೆ ಸಾಧ್ಯವಾಗಿದೆ.

1969ರಲ್ಲಿ ಸಣ್ಣ ಪ್ರಯಾಣಿಕ ಕಾರು ಎನ್600 ನಿರ್ಮಾಣವನ್ನು ಆರಂಭಿಸಿತ್ತು. ಇದೇ ಸಂದರ್ಭದಲ್ಲಿ ತೈವಾನ್ ನಲ್ಲಿ ಟಿಎನ್360 ಮಿನಿ ಟ್ರಕ್ ತಯಾರಿಗೆ ಆರಂಭಿಸುವ ಮೂಲಕ ಅಲ್ಲಿನ ಸ್ಥಳೀಯ ಸಂಸ್ಥೆಯ ಜೊತೆಗೆ ಕೈಜೋಡಿಸಿಕೊಂಡಿತ್ತು. ಇದರೊಂದಿಗೆ ಜಪಾನ್ ಹೊರಗಡೆ ಮೊದಲ ಬಾರಿಗೆ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಿತ್ತು.

ಅಂತರಾಷ್ಟ್ರೀಯ ಮಾರುಕಟ್ಟೆಗೂ ಕಾಲಿಟ್ಟ ಹೋಂಡಾ 1982ರಲ್ಲಿ ಅಮೆರಿಕದ ಓಹಿಯೋದಲ್ಲಿ ಅಕಾರ್ಡ್ ಕಾರು ತಯಾರಿಯನ್ನು ಆರಂಭಿಸಿತ್ತು. ಇದು ಜಪಾನ್ ಹೊರಗಡೆ ಹೋಂಡಾದ ಮೊದಲ ಉಪಾಂಗ ಸಂಸ್ಥೆಯೆನಿಸಿಕೊಂಡಿದೆ. ಜಪಾನ್ ವಾಹನ ಸಂಸ್ಥೆ ಅಮೆರಿಕದಲ್ಲಿ ನಿರ್ಮಿಸಿದ ಮೊದಲ ಕಾರೆಂಬ ಗೌರವಕ್ಕೂ ಅಕಾರ್ಡ್ ಪಾತ್ರವಾಗಿದೆ.

ಹಂತ ಹಂತವಾಗಿ ವಿಶ್ವದರ್ಜೆಯ ಕಾರುಗಳನ್ನು ಪರಿಚಯಿಸಿದ ಹೋಂದಾ, ಏಷ್ಯಾ ಸೇರಿದಂತೆ ಯುರೋಪ್, ದಕ್ಷಿಣ ಅಮೆರಿಕ ಖಂಡಗಳಿಗೂ ತನ್ನ ವ್ಯಾಪ್ತಿಯನ್ನು ವಿಸ್ತರಿಸಿತ್ತು.

ಸಮಕಾಲೀನ ಪರಿಸ್ಥಿತಿಯಲ್ಲಿ 18 ದೇಶಗಳಲ್ಲಾಗಿ 34 ಆಟೋಮೊಬೈಲ್ ನಿರ್ಮಾಣ ಕೇಂದ್ರಗಳು ಕಾರ್ಯಾಚರಿಸುತ್ತಿದೆ. ಇವೆಲ್ಲದರ ಮೂಲಕ 2016 ಸೆಪ್ಟೆಂಬರ್ ತಿಂಗಳಲ್ಲಿ 10 ಕೋಟಿ ಮೈಲುಗಲ್ಲನ್ನು ತಲುಪಿರುವ ಹೋಂಡಾ 54 ವರ್ಷಗಳ ಬಳಿಕವೂ ವಿಶ್ವದ ನಿರ್ಣಾಯಕ ಆಟೋಮೊಬೈಲ್ ಸಂಸ್ಥೆಯಾಗಿ ಮೂಡಿಬಂದಿದೆ.

ಭಾರತದಲ್ಲೂ ಹೋಂಡಾ ಎರಡು ನಿರ್ಮಾಣ ಘಟಕಗಳನ್ನು ಹೊಂದಿದೆ. ಇವುಗಳು ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾ ಮತ್ತು ರಾಜಸ್ಥಾನದ ತಪುಕರದಲ್ಲಿ ಸ್ಥಿತಗೊಂಡಿದೆ.

ಈ ಎರಡು ಘಟಕಗಳು ಒಟ್ಟು ಸೇರಿ ಭಾರತದಲ್ಲಿ ವಾರ್ಷಿಕವಾಗಿ 2.5 ಲಕ್ಷ ಯುನಿಟ್ ಗಳನ್ನು ನಿರ್ಮಿಸಲಾಗುತ್ತದೆ. ಹೋಂಡಾ ಭಾರತ ಶ್ರೇಣಿಯ ಕಾರುಗಳು ಬ್ರಿಯೊ, ಮೊಬಿಲಿಯೊ, ಅಮೇಜ್, ಸಿಟಿ, ಬಿಆರ್ ವಿ ಮತ್ತು ಸಿಆರ್ ವಿ ಮಾದರಿಗಳು ಸೇರಿವೆ.

English summary
Honda Crosses A Significant 100 Million Milestone
Story first published: Saturday, December 24, 2016, 15:23 [IST]
Please Wait while comments are loading...

Latest Photos