ಭಾರತದತ್ತ ಮುಖ ಮಾಡಿದ ಲೆಕ್ಸಸ್ ಐಷಾರಾಮಿ ಎಸ್ ಯುವಿ

ಟೊಯೊಟಾ ಅಧೀನತೆಯಲ್ಲಿರುವ ಲೆಕ್ಸಸ್ ಐಷಾರಾಮಿ ಎಸ್ ಯುವಿ ಭಾರತಕ್ಕೆ ಕಾಲಿಡಲು ಸಜ್ಜಾಗಿದೆ.

By Nagaraja

ಜಪಾನ್ ಮೂಲದ ಟೊಯೊಟಾದ ಐಷಾರಾಮಿ ಕಾರು ಬ್ರಾಂಡ್ ಆಗಿರುವ ಲೆಕ್ಸಸ್ ಐಷಾರಾಮಿ ಕ್ರೀಡಾ ಬಳಕೆಯ ವಾಹನವೊಂದು (ಎಸ್ ಯುವಿ) ಭಾರತಕ್ಕೆ ಕಾಲಿಡಲು ಸಜ್ಜಾಗುತ್ತಿದೆ. ಒಂದಲ್ಲ ಎರಡಲ್ಲ ಲೆಕ್ಸಸ್ ನ ಮೂರು ಮಾದರಿಗಳು ಭಾರತಕ್ಕೆ ಎಂಟ್ರಿ ಕೊಡಲು ಸಜ್ಜಾಗುತ್ತಿದೆ.

ಭಾರತದತ್ತ ಮುಖ ಮಾಡಿದ ಲೆಕ್ಸಸ್ ಐಷಾರಾಮಿ ಎಸ್ ಯುವಿ

ಈ ಮೊದಲೇ ತಿಳಿಸಿರುವಂತೆಯೇ ಮೂರು ಮಾದರಿಗಳನ್ನು ಲೆಕ್ಸಸ್ ಭಾರತದಲ್ಲಿ ಬಿಡುಗಡೆ ಮಾಡಲಿದೆ. ಅವುಗಳೆಂದರೆ, ಇಎಸ್ ಸೆಡಾನ್, ಆರ್ ಎಕ್ಸ್ ಎಸ್ ಯುವಿ ಮತ್ತು ಎಲ್ ಎಕ್ಸ್ ಎಸ್ ಯುವಿ.

ಭಾರತದತ್ತ ಮುಖ ಮಾಡಿದ ಲೆಕ್ಸಸ್ ಐಷಾರಾಮಿ ಎಸ್ ಯುವಿ

ಐಷಾರಾಮಿ ಗ್ರಾಹಕರಿಗಂತೂ ಇದು ಸುಗ್ಗಿಯ ಕಾಲವಾಗಿರಲಿದೆ. ಇಡೀ ವಿಶ್ವದಲ್ಲೇ ಟೊಯೊಟಾದ ಲೆಕ್ಸಸ್ ಐಷಾರಾಮಿ ಕ್ರೀಡಾ ಬಳಕೆಯ ವಾಹನಗಳಿಗೆ ಅತೀವ ಬೇಡಿಕೆಯಿದೆ.

ಭಾರತದತ್ತ ಮುಖ ಮಾಡಿದ ಲೆಕ್ಸಸ್ ಐಷಾರಾಮಿ ಎಸ್ ಯುವಿ

ಭಾರತಕ್ಕೆ ಪರಿಚಯವಾಗಲಿರುವ ನಾಲ್ಕನೇ ತಲೆಮಾರಿನ ಲೆಕ್ಸಸ್ ಆರ್ ಎಕ್ಸ್450 ಎಚ್ ಮಾದರಿಯು ಹೈಬ್ರಿಡ್ ತಂತ್ರಗಾರಿಕೆಯನ್ನು ಹೊಂದಲಿದೆ.

ಭಾರತದತ್ತ ಮುಖ ಮಾಡಿದ ಲೆಕ್ಸಸ್ ಐಷಾರಾಮಿ ಎಸ್ ಯುವಿ

ಲೆಕ್ಸನ್ ನೂತನ ಎಸ್ ಯುವಿ ಪ್ರಮುಖವಾಗಿಯೂ ಮರ್ಸಿಡಿಸ್ ಜಿಎಲ್ ಸಿ, ಆಡಿ ಕ್ಯೂ5 ಮುಂತಾದ ಮಾದರಿಗಳಿಗೆ ಪ್ರತಿಸ್ಪರ್ಧೆಯನ್ನು ಒಡ್ಡಲಿದೆ.

ಭಾರತದತ್ತ ಮುಖ ಮಾಡಿದ ಲೆಕ್ಸಸ್ ಐಷಾರಾಮಿ ಎಸ್ ಯುವಿ

ಪ್ರತಿಸ್ಪರ್ಧಿಗಳನ್ನು ಹೋಲಿಸಿದಾಗ ದೇಶದಲ್ಲಿ ಲೆಕ್ಸಸ್ ಹೈಬ್ರಿಡ್ ಕಾರು ಕೊಂಚ ದುಬಾರಿಯೆನಿಸುವ ಸಾಧ್ಯತೆಯಿದೆ.

ಭಾರತದತ್ತ ಮುಖ ಮಾಡಿದ ಲೆಕ್ಸಸ್ ಐಷಾರಾಮಿ ಎಸ್ ಯುವಿ

ಇದರಲ್ಲಿ ಪೆಟ್ರೋಲ್ ಎಂಜಿನ್ ಮತ್ತು ಎಲೆಕ್ಟ್ರಿಕ್ ಮೋಟಾರು ಜೋಡಣೆಯಾಗಲಿದ್ದು, 307 ಅಶ್ವಶಕ್ತಿ ಉತ್ಪಾದಿಸಲಿದೆ. ಹಾಗೆಯೇ 3.5 ಲೀಟರ್ ವಿ6 ಪೆಟ್ರೋಲ್ ಎಂಜಿನ್ ಪಡೆಯಲಿದೆ.

ಭಾರತದತ್ತ ಮುಖ ಮಾಡಿದ ಲೆಕ್ಸಸ್ ಐಷಾರಾಮಿ ಎಸ್ ಯುವಿ

ಅಂತೆಯೇ ಸಿವಿಟಿ ಗೇರ್ ಬಾಕ್ಸ್ ಮುಖಾಂತರ ಎಲ್ಲ ನಾಲ್ಕು ಚಕ್ರಗಳಿಗೆ ಶಕ್ತಿ ರವಾನೆಯಾಗಲಿದೆ.

ಭಾರತದತ್ತ ಮುಖ ಮಾಡಿದ ಲೆಕ್ಸಸ್ ಐಷಾರಾಮಿ ಎಸ್ ಯುವಿ

ವಿವಿಧ ಚಾಲನಾ ಪರಿಸ್ಥಿತಿಗೆ ಹೊಂದಿಕೆಯಾಗುವ ಡ್ರೈವಿಂಗ್ ಮೋಡ್, ಡ್ಯುಯಲ್ ಝೋನ್ ಕ್ಲೈಮೇಟ್ ಕಂಟ್ರೋಲ್, ಹೊಂದಾಣಿಸುವ ಸ್ಟೀರಿಂಗ್ ವಿಲ್, ಹೀಟಡ್ ಸೀಟು, ಎಲ್ ಇಡಿ ಹೆಡ್ ಲ್ಯಾಂಪ್, ರಿವರ್ಸ್ ಕ್ಯಾಮೆರಾ ಇತ್ಯಾದಿ ಸೌಲಭ್ಯಗಳನ್ನು ಪಡೆಯಲಿದೆ.

ಭಾರತದತ್ತ ಮುಖ ಮಾಡಿದ ಲೆಕ್ಸಸ್ ಐಷಾರಾಮಿ ಎಸ್ ಯುವಿ

ಇನ್ನುಳಿದಂತೆ ಸನ್ ರೂಫ್, ಪಾರ್ಕ್ ಅಸಿಸ್ಟ್ ಜೊತೆ ಆಟೋ ಬ್ರೇಕಿಂಗ್, ಇನ್ಪೋಟೈನ್ಮೆಂಟ್ ಜೊತೆ ನೇವಿಗೇಷನ್ ವ್ಯವಸ್ಥೆಯು ದೊರಕಲಿದೆ.

ಭಾರತದತ್ತ ಮುಖ ಮಾಡಿದ ಲೆಕ್ಸಸ್ ಐಷಾರಾಮಿ ಎಸ್ ಯುವಿ

ಸುರಕ್ಷತೆಯತ್ತ ಗಮನ ಹಾಯಿಸಿದಾಗ ಏರ್ ಬ್ಯಾಗ್, ವೆಹಿಕಲ್ ಸ್ಟೆಬಿಲಿಟಿ ಕಂಟ್ರೋಲ್ ಇತ್ಯಾದಿ ವ್ಯವಸ್ಥೆಗಳನ್ನು ಪಡೆಯಲಿದೆ

Most Read Articles

Kannada
English summary
Lexus RX450h SUV India Launch Scheduled For 2017
Story first published: Thursday, November 17, 2016, 18:18 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X