ಢಿಕ್ಕಿ ಪರೀಕ್ಷೆ; ಷೆವರ್ಲೆ ಬೀಟ್ ಆದರೂ ಪಾರಾಯಿತೇ ?

Written By:

ವಾಹನಗಳ ಸುರಕ್ಷತೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಜಾಗತಿಕ ಮಟ್ಟದಲ್ಲಿ ನಿರಂತರ ಅಂತರಾಳದಲ್ಲಿ ನಡೆಯುತ್ತಿರುವ ಢಿಕ್ಕಿ ಪರೀಕ್ಷೆಯಲ್ಲಿ ಭಾರತೀಯ ಮೂಲದ ಕಾರುಗಳು ಪದೇ ಪದೇ ವೈಫಲ್ಯ ಕಾಣುತ್ತಿರುವುದು ಬೇಸರದ ಸಂಗತಿಯಾಗಿದೆ. ಇದಕ್ಕೊಂದು ಹೊಸ ಸೇರ್ಪಡೆಯೆಂಬಂತೆ ಭಾರತದಲ್ಲಿ ನಿರ್ಮಿತ ಷೆವರ್ಲೆ ಬೀಟ್ ಸಹ ಲ್ಯಾಟಿನ್ ಎನ್ ಸಿಎಪಿ ಕ್ರಾಶ್ ಟೆಸ್ಟ್ ನಲ್ಲಿ ಮುಗ್ಗರಿಸಿದೆ.

ಭಾರತದಲ್ಲಿ ನಿರ್ಮಿತ ಷೆವರ್ಲೆ ಸ್ಪಾರ್ಕ್ ಜಿಟಿ ಅಥವಾ ಷೆವರ್ಲೆ ಬೀಟ್ ಕಾರನ್ನು ಢಿಕ್ಕಿ ಪರೀಕ್ಷೆಗೆ ಒಳಪಡಿಸಲಾಗಿತ್ತು. ಆದರೆ ಪ್ರಾಪ್ತ ವಯಸ್ಕರ ಹಾಗೂ ಮಕ್ಕಳ ರಕ್ಷಣೆಯಲ್ಲಿ ಶೂನ್ಯಂಕ ಸಂಪಾದಿಸಿದೆ.

ಢಿಕ್ಕಿ ಪರೀಕ್ಷೆಯಲ್ಲಿ ಮುಗ್ಗರಿಸಿದ ಷೆವರ್ಲೆ ಬೀಟ್

ಮುಂಭಾಗ ಢಿಕ್ಕಿ ಪರೀಕ್ಷೆಯಲ್ಲಿ ಸ್ಥಿರತೆಯನ್ನು ಕಾಪಾಡಿಕೊಂಡರೂ ಏರ್ ಬ್ಯಾಗ್ ಗಳ ಕೊರತೆ ಕಾಡುತ್ತಿದೆ. ಮುಂಭಾಗದ ಢಿಕ್ಕಿ ಪರೀಕ್ಷೆಯಲ್ಲಿ ವಿಫಲತೆಯನ್ನು ಅನುಭವಿಸಿದ್ದರ ಹಿನ್ನಲೆಯಲ್ಲಿ ಬದಿಯ ಢಿಕ್ಕಿ ಪರೀಕ್ಷೆಗೊಳಪಡಿಸಲಾಗಲಿಲ್ಲ.

ಢಿಕ್ಕಿ ಪರೀಕ್ಷೆಯಲ್ಲಿ ಮುಗ್ಗರಿಸಿದ ಷೆವರ್ಲೆ ಬೀಟ್

ಮಗುವಿನ ರಕ್ಷಣೆ ವ್ಯವಸ್ಥೆಯಲ್ಲೂ ಷೆವರ್ಲೆ ಸ್ಪಾರ್ಕ್ ಹಿನ್ನಡೆ ಅನುಭವಿಸಿದೆ. ಒಟ್ಟಾರೆಯಾಗಿ ಮುಖಭಂಗಕ್ಕೊಳಗಾಗಿದೆ.

ಢಿಕ್ಕಿ ಪರೀಕ್ಷೆಯಲ್ಲಿ ಮುಗ್ಗರಿಸಿದ ಷೆವರ್ಲೆ ಬೀಟ್

ಷೆವರ್ಲೆ ಸ್ಪಾರ್ಕ್ ಯುರೋಪ್ ಆವೃತ್ತಿಯು ಆರು ಬ್ಯಾಗ್ ಗಳನ್ನು ಪಡೆದಿದ್ದು, ಯುರೋ ಎನ್ ಸಿಎಪಿ ಢಿಕ್ಕಿ ಪರೀಕ್ಷೆಯಲ್ಲಿ ನಾಲ್ಕು ಸ್ಟಾರ್ ಗೆಲ್ಲುವಲ್ಲಿ ಯಶಸ್ವಿಯಾಗಿತ್ತು.

ಢಿಕ್ಕಿ ಪರೀಕ್ಷೆಯಲ್ಲಿ ಮುಗ್ಗರಿಸಿದ ಷೆವರ್ಲೆ ಬೀಟ್

ಮೆಕ್ಸಿಕೊ ಹಾಗೂ ಕೊಲಂಬಿಯಾದಲ್ಲಿ ಹೆಚ್ಚಿನ ಜನಪ್ರಿಯತೆ ಕಾಪಾಡಿಕೊಂಡಿರುವ ಷೆವರ್ಲೆ ಸ್ಪಾರ್ಕ್ ಕಾರನ್ನು ಮಹಾರಾಷ್ಟ್ರದ ತಲೆಂಗಾವ್ ಘಟಕದಿಂದ ರಫ್ತು ಮಾಡಲಾಗುತ್ತದೆ.

ಢಿಕ್ಕಿ ಪರೀಕ್ಷೆಯಲ್ಲಿ ಮುಗ್ಗರಿಸಿದ ಷೆವರ್ಲೆ ಬೀಟ್

ಭಾರತದಲ್ಲೂ ಮುಂದಿನ ತಲೆಮಾರಿನ ಷೆವರ್ಲೆ ಬೀಟ್ ಬಿಡುಗಡೆ ಮಾಡುವ ತಯಾರಿಯಲ್ಲಿರುವ ಷೆವರ್ಲೆ, 2017 ವರ್ಷಾರಂಭದಲ್ಲಿ ಬಿಡುಗಡೆ ಮಾಡಲಿದೆ. ನಿಕಟ ಭವಿಷ್ಯದಲ್ಲೇ ಬೀಟ್ ಆಕ್ಟಿವ್ ಕ್ರಾಸೋವರ್ ಹಾಗೂ ನಾಲ್ಕು ಮೀಟರ್ ಉದ್ದ ಪರಿಧಿಯೊಳಗಿನ ಬೀಟ್ ಎಸ್ಸೆನ್ಷಿಯಾ ಸಹ ದೇಶಕ್ಕೆ ಪ್ರವೇಶಿಸಲಿದೆ.

ಷೆವರ್ಲೆ ಬೀಟ್ ಢಿಕ್ಕಿ ಪರೀಕ್ಷೆ ವಿಡಿಯೋ ವೀಕ್ಷಿಸಿ

English summary
‘Made-in-India’ Chevrolet Beat Fails Latin NCAP Crash Test
Story first published: Friday, September 23, 2016, 12:16 [IST]
Please Wait while comments are loading...

Latest Photos