ಮಹೀಂದ್ರ ವೆರಿಟೊ ವೈಬ್ ನಿರ್ಮಾಣಕ್ಕೆ ಬ್ರೇಕ್ ?

Written By:

ಉಪಯುಕ್ತ ವಾಹನ ನಿರ್ಮಾಣದಲ್ಲಿ ಅಗ್ರ ಪಟ್ಟ ಅಲಂಕರಿಸಿರುವ ದೇಶದ ಮುಂಚೂಣಿಯ ಮಹೀಂದ್ರ ಆಂಡ್ ಮಹೀಂದ್ರ ಸಂಸ್ಥೆಯು ಪ್ರಯಾಣಿಕ ಕಾರು ವಿಭಾಗಕ್ಕೆ ಬಂದಾಗ ಯೋಜನೆಗಳೆಲ್ಲ ತಲೆಕೆಳಗಾಗಿತ್ತು. ಪ್ರಯಾಣಿಕ ಕಾರು ವಿಭಾಗದಲ್ಲಿ ಮಾರುತಿ ಹಾಗೂ ಹ್ಯುಂಡೈಗಳಂತಹ ಅಗ್ರ ಸಂಸ್ಥೆಗಳ ಮುಂದೆ ಸ್ಪರ್ಧೆಯೊಡ್ಡುವಲ್ಲಿ ಮಹೀಂದ್ರ ಸಂಪೂರ್ಣವಾಗಿ ವಿಫಲವಾಗಿರುವುದು ಕಂಡುಬರುತ್ತದೆ.

ಇದಕ್ಕೊಂದು ಉತ್ತಮ ಉದಾಹರಣೆ ಹ್ಯಾಚ್ ಬ್ಯಾಕ್ ಕಾರಾಗಿರುವ ಮಹೀಂದ್ರ ವೆರಿಟೊ ವೈಬ್. 2013ನೇ ಸಾಲಿನಲ್ಲಿ ಬಿಡುಗಡೆಯಾಗಿರುವ ಮಹೀಂದ್ರ ವೆರಿಟೊ ವೈಬ್ ಕಳಪೆಯ ಮಾರಾಟದ ಹಿನ್ನಲೆಯಲ್ಲಿ ನಿರ್ಮಾಣ ಸ್ಥಗಿತಗೊಳಿಸಲಾಗಿದೆ ಎಂಬ ಮಾಹಿತಿಗಳು ಹೊರಬಂದಿದೆ.

ಮಹೀಂದ್ರ ವೆರಿಟೊ ವೈಬ್ ನಿರ್ಮಾಣಕ್ಕೆ ಬ್ರೇಕ್ ?

ಶಾಶ್ವತವಾಗಿ ಮಹೀಂದ್ರ ವೆರಿಟೊ ವೈಬ್ ನಿರ್ಮಾಣವನ್ನು ನಿಲುಗಡೆಗೊಳಿಸುವ ಯಾವುದೇ ಇರಾದೆ ಸಂಸ್ಥೆಗಿಲ್ಲ. ಅಲ್ಲದೆ ಈಗಿರುವ ಸ್ಟೋಕ್ ಗಳನ್ನು ಆದಷ್ಟು ಬೇಗನೇ ಮಾರಾಟ ಮಾಡುವ ಗುರಿಯನ್ನು ಹೊಂದಿದೆ.

ಮಹೀಂದ್ರ ವೆರಿಟೊ ವೈಬ್ ನಿರ್ಮಾಣಕ್ಕೆ ಬ್ರೇಕ್ ?

ಪ್ರಸಕ್ತ ಆರ್ಥಿಕ ಸಾಲಿನಲ್ಲಿ ವೆರಿಟೊ ವೈಬ್ ನ ಒಂದೇ ಒಂದು ಯುನಿಟ್ ಕೂಡಾ ಮಹೀಂದ್ರ ನಿರ್ಮಾಣ ಮಾಡಿಲ್ಲ ಎಂಬುದು ಅಷ್ಟೇ ಕಟುವಾದ ಸತ್ಯ. ಇದರಲ್ಲಿ ಅನೇಕ ಅಂಶಗಳು ವೆರಿಟೊ ವೈಬ್ ಗೆ ನಕರಾತ್ಮಕವಾಗಿ ಪರಿಣಮಿಸಿತ್ತು.

ಮಹೀಂದ್ರ ವೆರಿಟೊ ವೈಬ್ ನಿರ್ಮಾಣಕ್ಕೆ ಬ್ರೇಕ್ ?

ಹಳೆಯ ವಿನ್ಯಾಸ, ಕಳಪೆ ವೈಶಿಷ್ಟ್ಯಗಳು, ಒರಟಾಗಿ ಗೋಚರಿಸುವ ಹಿಂಭಾಗ ಇವೆಲ್ಲವೂ ವೆರಿಟೊ ವೈಬ್ ಹಿನ್ನಡೆಗೆ ಕಾರಣವಾಗಿತ್ತು. ಇದರಿಂದಾಗಿ ಗ್ರಾಹಕರು ಇತ್ತ ತಲೆಯೆತ್ತಿಯೂ ನೋಡಲಿಲ್ಲ.

ಮಹೀಂದ್ರ ವೆರಿಟೊ ವೈಬ್ ನಿರ್ಮಾಣಕ್ಕೆ ಬ್ರೇಕ್ ?

ಕಳೆದ ಆರ್ಥಿಕ ಸಾಲಿನಲ್ಲಿ 619 ಯುನಿಟ್ ಗಳಷ್ಟು ಮಾರಾಟವಾಗಿದ್ದ ಮಹೀಂದ್ರ ವೆರಿಟೊ ವೈಬ್ ಪ್ರಸಕ್ತ ಆರ್ಥಿಕ ಸಾಲಿನ ಎಪ್ರಿಲ್ ನಿಂದ ಆಗಸ್ಟ್ ವರೆಗೆ ಬರಿ 619 ಯುನಿಟ್ ಗಳಷ್ಟು ಮಾತ್ರ ಮಾರಾಟ ಕಂಡಿದೆ. ಇದರಿಂದಲೇ ಬೇಡಿಕೆ ಕುಸಿಯುತ್ತಿರುವುದು ಕಂಡುಬಂದಿದೆ.

ಮಹೀಂದ್ರ ವೆರಿಟೊ ವೈಬ್ ನಿರ್ಮಾಣಕ್ಕೆ ಬ್ರೇಕ್ ?

ಇದಕ್ಕೂ ಮೊದಲು ಬಿಡುಗಡೆಗೊಂಡ 2013-14ರ ಆರ್ಥಿಕ ಸಾಲಿನಲ್ಲಿ 5,213 ಯುನಿಟ್ ಗಳಿಷ್ಟಿದ್ದ ಮಾರಾಟ ಸಂಖ್ಯೆಯು 2015-16ರ ಆರ್ಥಿಕ ಸಾಲಿನಲ್ಲಿ 1,361 ಯುನಿಟ್ ಗಳಿಗೆ ಕುಸಿದಿತ್ತು.

ಮಹೀಂದ್ರ ವೆರಿಟೊ ವೈಬ್ ನಿರ್ಮಾಣಕ್ಕೆ ಬ್ರೇಕ್ ?

ಸದ್ಯ ಮಾರಾಟದಲ್ಲಿರುವ ಮಹಿಂದ್ರ ವೆರಿಟೊ ವೈಬ್ ದೆಹಲಿ ಎಕ್ಸ್ ಶೋ ರೂಂ ಬೆಲೆಯ ಪ್ರಕಾರ 6.39 ಲಕ್ಷ ರುಪಾಯಿಗಳಿಂದ 7.32 ಲಕ್ಷ ರುಪಾಯಿಗಳಷ್ಟು ದುಬಾರಿಯೆನಿಸುತ್ತದೆ.

ಮಹೀಂದ್ರ ವೆರಿಟೊ ವೈಬ್ ನಿರ್ಮಾಣಕ್ಕೆ ಬ್ರೇಕ್ ?

ಅಂದ ಹಾಗೆ ರೆನೊದ 1.5 ಲೀಟರ್ ಡಿಸಿಐ ಡೀಸೆಲ್ ಎಂಜಿನ್ ನಿಂದ ನಿಯಂತ್ರಿಸಲ್ಪಡುವ ಮಹಿಂದ್ರ ವೆರಿಟೊ ವೈಬ್ 160 ಎನ್ ಎಂ ತಿರುಗುಬಲದಲ್ಲಿ 65 ಅಶ್ವಶಕ್ತಿಯನ್ನು ಉತ್ಪಾದಿಸುತ್ತದೆ. ಅಲ್ಲದೆ ಡಿ2, ಡಿ4, ಹಾಗೂ ಡಿ6 ಗಳೆಂಬ ಮೂರು ವೆರಿಯಂಟ್ ಗಳಲ್ಲಿ ಲಭ್ಯವಾಗುತ್ತದೆ.

English summary
Mahindra stops production of verito vibe
Story first published: Tuesday, September 20, 2016, 17:53 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark