ಮಗದೊಮ್ಮೆ 'ಡಸ್ಟರ್' ಅಸ್ತ್ರ ಪ್ರಯೋಗಿಸಲಿರುವ ರೆನೊ

Written By:

'ಡಸ್ಟರ್' ಎಂಬ ಕ್ರೀಡಾ ಬಳಕೆಯ ವಾಹನದ (ಎಸ್‌ಯುವಿ) ಮೂಲದ ಭಾರತದ ಯುವ ಪೀಳಿಗೆಯ ಮನ ಗೆದ್ದಿರುವ ಫ್ರಾನ್ಸ್ ಮೂಲದ ರೆನೊ ಮಗದೊಮ್ಮೆ ದೇಶದ ವಾಹನ ಪ್ರೇಮಿಗಳ ಮೇಲೆ ಡಸ್ಟರ್ ಅಸ್ತ್ರವನ್ನು ಪ್ರಯೋಗಿಸುವ ಇರಾದೆಯಲ್ಲಿದೆ.

ವಾಹನೋದ್ಯಮದ ನಿಕಟ ಮೂಲಗಳಿಂದ ಬಂದಿರುವ ಮಾಹಿತಿಗಳ ಪ್ರಕಾರ ಪರಿಷ್ಕೃತ ರೆನೊ ಡಸ್ಟರ್ ಇದೇ ಮುಂಬರುವ 2016 ಆಟೋ ಎಕ್ಸ್ ಪೋದಲ್ಲಿ ಬಿಡುಗಡೆಯಾಗುವ ಎಲ್ಲ ಸಾಧ್ಯತೆಗಳಿವೆ.

To Follow DriveSpark On Facebook, Click The Like Button
ಅತಿ ಶೀಘ್ರದಲ್ಲೇ 2016 ರೆನೊ ಡಸ್ಟರ್ ಭಾರತದಲ್ಲಿ ಬಿಡುಗಡೆ

ಫೆಬ್ರವರಿ ತಿಂಗಳಲ್ಲಿ ನಡೆಯಲಿರುವ 2016 ಆಟೋ ಎಕ್ಸ್ ಪೋದಲ್ಲಿ ಮೋಡಿ ಮಾಡಲಿರುವ ನೂತನ ರೆನೊ ಡಸ್ಟರ್ ತದಾ ಬೆನ್ನಲ್ಲೇ ಮಾರಾಟಕ್ಕೆ ಲಭ್ಯವಾಗಲಿದೆ.

ಅತಿ ಶೀಘ್ರದಲ್ಲೇ 2016 ರೆನೊ ಡಸ್ಟರ್ ಭಾರತದಲ್ಲಿ ಬಿಡುಗಡೆ

ಚೆನ್ನೈನಲ್ಲಿ ಸ್ಥಿತಗೊಂಡಿರುವ ಘಟಕದಲ್ಲೇ 2016 ರೆನೊ ಡಸ್ಟರ್ ನಿರ್ಮಾಣ ಪ್ರಕ್ರಿಯೆ ನಡೆಯಲಿದೆ. ಇದು ಜಾಗತಿಕ ಮಾರುಕಟ್ಟೆಯಲ್ಲಿರುವ ಡೇಸಿಯಾ ಡಸ್ಟರ್‌ಗೆ ಮಾದರಿಗೆ ಸಮಾನವಾದ ವಿನ್ಯಾಸವನ್ನು ಪಡೆದುಕೊಳ್ಳಲಿದೆ.

ಅತಿ ಶೀಘ್ರದಲ್ಲೇ 2016 ರೆನೊ ಡಸ್ಟರ್ ಭಾರತದಲ್ಲಿ ಬಿಡುಗಡೆ

ಭಾರತೀಯ ರಸ್ತೆಗಳಲ್ಲಿ 2016 ರೆನೊ ಡಸ್ಟರ್ ಟೆಸ್ಟಿಂಗ್ ಪ್ರಕ್ರಿಯೆ ಭರದಿಂದ ಸಾಗುತ್ತಿದೆ. ಇನ್ನು ವಿಶೇಷವೆಂದರೆ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆಯಿಂದಲೂ ಲಭ್ಯವಾಗಲಿದೆ.

ಅತಿ ಶೀಘ್ರದಲ್ಲೇ 2016 ರೆನೊ ಡಸ್ಟರ್ ಭಾರತದಲ್ಲಿ ಬಿಡುಗಡೆ

ಇನ್ನುಳಿದಂತೆ ಪರಿಷ್ಕೃತ ಗ್ರಿಲ್, ಹೆಡ್ ಲ್ಯಾಂಪ್, ಗ್ರಾಫಿಕ್ಸ್ ಹಾಗೂ ವಿಶೇಷ ಬಣ್ಣಗಳ ಆಯ್ಕೆಯನ್ನು ಪ ಡೆಯಲಿದೆ. ಒಟ್ಟಾರೆಯಾಗಿ ತನ್ನ ಹಿಂದಿನ ಮಾದರಿಗಿಂತಲೂ ಹೆಚ್ಚು ಪರಿಣಾಮಕಾರಿ ವಿನ್ಯಾಸ ರೂಪವನ್ನು ಪಡೆಯಲಿದೆ.

ಅತಿ ಶೀಘ್ರದಲ್ಲೇ 2016 ರೆನೊ ಡಸ್ಟರ್ ಭಾರತದಲ್ಲಿ ಬಿಡುಗಡೆ

ಹಾಗಿದ್ದರೂ ಈಗ ಮಾರುಕಟ್ಟೆಯಲ್ಲಿರುವ ಮಾದರಿಗಿಂತಲೂ ಕೊಂಚ ದುಬಾರಿಯೆನಿಸಲಿದೆ. ಇದು ಪ್ರಮುಖವಾಗಿಯೂ ಹ್ಯುಂಡೈ ಕ್ರೆಟಾ ಸವಾಲನ್ನು ಎದುರಿಸಲಿದೆ.

English summary
New Renault Duster To Enter Production By February 2016
Story first published: Monday, January 11, 2016, 16:20 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark