2017 ವರ್ಷಾರಂಭದಲ್ಲಿ ನಿಸ್ಸಾನ್ ಎಕ್ಸ್ ಟ್ರೈಲ್ ಹೈಬ್ರಿಡ್ ಎಸ್ ಯುವಿ ಭಾರತಕ್ಕೆ

Written By:

ಶಿಪ್ರ ಗತಿಯಲ್ಲಿ ಬೆಳೆದು ಬರುತ್ತಿರುವ ಭಾರತೀಯ ವಾಹನ ಮಾರುಕಟ್ಟೆಯಲ್ಲಿ ಕ್ರೀಡಾ ಬಳಕೆಯ ವಾಹನಗಳಿಗೆ (ಎಸ್ ಯುವಿ) ಬೇಡಿಕೆ ಹೆಚ್ಚುತ್ತಿದ್ದು, ಇದನ್ನೇ ಗಮನ ಹರಿಸಿರುವ ಜಪಾನ್ ಮೂಲದ ದೈತ್ಯ ನಿಸ್ಸಾನ್ ಸಂಸ್ಥೆಯು ಅತಿ ನೂತನ ಎಕ್ಸ್ ಟ್ರೈಲ್ ಪ್ರೀಮಿಯಂ ಎಸ್ ಯುವಿ ಕಾರನ್ನು ದೇಶದಲ್ಲಿ ಬಿಡುಗಡೆ ಮಾಡಲಿದೆ. ಇದು ಹೈಬ್ರಿಡ್ ಅವತರಣಿಯಲ್ಲಿ ಬರುತ್ತಿರುವುದು ಹೆಚ್ಚಿನ ನಿರೀಕ್ಷೆಯನ್ನುಂಟು ಮಾಡಿದೆ.

2017 ವರ್ಷಾರಂಭದಲ್ಲಿ ನಿಸ್ಸಾನ್ ಎಕ್ಸ್ ಟ್ರೈಲ್ ಹೈಬ್ರಿಡ್ ಎಸ್ ಯುವಿ ಭಾರತಕ್ಕೆ

ಬಲ್ಲ ಮೂಲಗಳ ಪ್ರಕಾರ ನಿಸ್ಸಾನ್ ಎಕ್ಸ್ ಟ್ರೈಲ್ ಕಂಪ್ಲೀಟ್ ಬಿಲ್ಟ್ ಯುನಿಟ್ (ಸಿಬಿಯು) ಮುಖಾಂತರ ಭಾರತವನ್ನು ತಲುಪಲಿದೆ.

2017 ವರ್ಷಾರಂಭದಲ್ಲಿ ನಿಸ್ಸಾನ್ ಎಕ್ಸ್ ಟ್ರೈಲ್ ಹೈಬ್ರಿಡ್ ಎಸ್ ಯುವಿ ಭಾರತಕ್ಕೆ

ಸಾಮಾನ್ಯ ಎಸ್ ಯುವಿ ಗಿಂತಲೂ ವಿಭಿನ್ನವಾಗಿ ಹೊಸ ತಲೆಮಾರಿನ ನಿಸ್ಸಾನ್ ಎಕ್ಸ್ ಟ್ರೈಲ್ ಹೈಬ್ರಿಡ್ ಅವತರಣಿಯನ್ನು ಪಡೆಯಲಿದ್ದು, ಹೆಚ್ಚಿನ ಇಂಧನ ಕ್ಷಮತೆಯೊಂದಿಗೆ ಪರಿಸರ ಸ್ನೇಹಿ ಎನಿಸಿಕೊಳ್ಳಲಿದೆ.

2017 ವರ್ಷಾರಂಭದಲ್ಲಿ ನಿಸ್ಸಾನ್ ಎಕ್ಸ್ ಟ್ರೈಲ್ ಹೈಬ್ರಿಡ್ ಎಸ್ ಯುವಿ ಭಾರತಕ್ಕೆ

ಅತಿ ನೂತನ ನಿಸ್ಸಾನ್ ಎಕ್ಸ್ ಟ್ರೈಲ್ ಕಾರಿನಡಿಯಲ್ಲಿ 2.0 ಲೀಟರ್ ಪೆಟ್ರೋಲ್ ಎಂಜಿನ್ ಮತ್ತು 31 ಕೆಡಬ್ಲ್ಯು ಎಲೆಕ್ಟ್ರಿಕ್ ಮೋಟಾರು ಜೋಡಣೆಯಾಗಲಿದೆ. ಇವೆರಡು ಜೊತೆ ಸೇರಿ 180 ಅಶ್ವಶಕ್ತಿ ಉತ್ಪಾದಿಸಲಿದೆ.

2017 ವರ್ಷಾರಂಭದಲ್ಲಿ ನಿಸ್ಸಾನ್ ಎಕ್ಸ್ ಟ್ರೈಲ್ ಹೈಬ್ರಿಡ್ ಎಸ್ ಯುವಿ ಭಾರತಕ್ಕೆ

2016 ಆಟೋ ಎಕ್ಸ್ ಪೋದಲ್ಲಿ ಪ್ರದರ್ಶನ ಕಂಡಿದ್ದ ನಿಸ್ಸಾನ್ ಎಕ್ಸ್ ಟ್ರೈಲ್, ಮುಂಭಾಗದ ಚಕ್ರಗಳಿಗೆ ಸಿವಿಟಿ ಗೇರ್ ಬಾಕ್ಸ್ ಮುಖಾಂತರ ಶಕ್ತಿ ವಿತರಿಸಲಿದೆ.

2017 ವರ್ಷಾರಂಭದಲ್ಲಿ ನಿಸ್ಸಾನ್ ಎಕ್ಸ್ ಟ್ರೈಲ್ ಹೈಬ್ರಿಡ್ ಎಸ್ ಯುವಿ ಭಾರತಕ್ಕೆ

ಒಮ್ಮೆ ಭಾರತದಲ್ಲಿ ಬಿಡುಗಡೆಯಾದಾಗ ನಿಸ್ಸಾನ್ ಎಕ್ಸ್ ಟ್ರೈಲ್ 32 ಲಕ್ಷ ರುಪಾಯಿಗಳಿಂದ 38 ಲಕ್ಷ ರುಪಾಯಿಗಳ ವರೆಗೆ ದುಬಾರಿಯೆನಿಸುವ ಸಾಧ್ಯತೆಯಿದೆ.

2017 ವರ್ಷಾರಂಭದಲ್ಲಿ ನಿಸ್ಸಾನ್ ಎಕ್ಸ್ ಟ್ರೈಲ್ ಹೈಬ್ರಿಡ್ ಎಸ್ ಯುವಿ ಭಾರತಕ್ಕೆ

ಇದು ಮಾರುಕಟ್ಟೆಯಲ್ಲಿರುವ ಹೈಬ್ರಿಡ್ ತಳಿಗಳಾದ ಇತ್ತೀಚೆಗಷ್ಟೇ ಬಿಡುಗಡೆಯಾಗಿರುವ ಹೋಂಡಾ ಅಕಾರ್ಡ್ ಹೈಬ್ರಿಡ್ ಜೊತೆಗೆ ಟೊಯೊಟಾ ಕ್ಯಾಮ್ರಿ ಹೈಬ್ರಿಡ್ ಕಾರುಗಳಿಗೆ ಪೈಪೋಟಿಯನ್ನು ಒಡ್ಡಲಿದೆ. ಇದು ಹೋಂಡಾ ಸಿಆರ್ ವಿ ಮತ್ತು ಹೈಬ್ರಿಡ್ ಸಾಂಟಾ ಫೆ ಸವಾಲನ್ನು ಎದುರಿಸಲಿದೆ.

2017 ವರ್ಷಾರಂಭದಲ್ಲಿ ನಿಸ್ಸಾನ್ ಎಕ್ಸ್ ಟ್ರೈಲ್ ಹೈಬ್ರಿಡ್ ಎಸ್ ಯುವಿ ಭಾರತಕ್ಕೆ

ಇನ್ನು ವಿನ್ಯಾಸದ ಬಗ್ಗೆ ಮಾತನಾಡುವುದಾದ್ದಲ್ಲಿ ಮುಂಭಾಗದಲ್ಲಿ 'ವಿ' ಆಕಾರದ ಫ್ರಂಟ್ ಗ್ರಿಲ್ ಹಾಗೂ ಹನಿಕಾಂಬ್ ಗ್ರಿಲ್ ಇರಲಿದೆ.

2017 ವರ್ಷಾರಂಭದಲ್ಲಿ ನಿಸ್ಸಾನ್ ಎಕ್ಸ್ ಟ್ರೈಲ್ ಹೈಬ್ರಿಡ್ ಎಸ್ ಯುವಿ ಭಾರತಕ್ಕೆ

ಅಂತೆಯೇ ಆಧುನಿಕತೆಗೆ ತಕ್ಕಂತೆ ಡೇಟೈಮ್ ರನ್ನಿಂಗ್ ಲೈಟ್ಸ್ ಹಾಗೂ ಸಿಂಗಲ್ ಪ್ರೊಜೆಕ್ಟರ್ ಹೆಡ್ ಲ್ಯಾಂಪ್ ಪ್ರಮುಖ ಆಕರ್ಷಣೆಯಾಗಲಿದೆ.

2017 ವರ್ಷಾರಂಭದಲ್ಲಿ ನಿಸ್ಸಾನ್ ಎಕ್ಸ್ ಟ್ರೈಲ್ ಹೈಬ್ರಿಡ್ ಎಸ್ ಯುವಿ ಭಾರತಕ್ಕೆ

ಫಾಗ್ ಲ್ಯಾಂಪ್ ಗಳಿಗೂ ಕ್ರೋಮ್ ಸ್ಪರ್ಶವನ್ನು ಕೊಡಲಾಗಿದ್ದು, 5 ಟ್ವಿನ್ ಸ್ಪೋಕ್ ಅಲಾಯ್ ಚಕ್ರಗಳು ಇದರಲ್ಲಿರುತ್ತದೆ.

2017 ವರ್ಷಾರಂಭದಲ್ಲಿ ನಿಸ್ಸಾನ್ ಎಕ್ಸ್ ಟ್ರೈಲ್ ಹೈಬ್ರಿಡ್ ಎಸ್ ಯುವಿ ಭಾರತಕ್ಕೆ

ಕಾರಿನೊಳಗೆ ಡ್ಯುಯಲ್ ಟೋನ್ ಬದಲಾಗಿ ಸಿಂಗಲ್ ಟೋನ್ ಒಳಮೈಯನ್ನು ಕೊಡಲಾಗಿದೆ. ಅಲ್ಲದೆ ಕ್ಲೈಮೇಟ್ ಕಂಟ್ರೋಲ್, 3 ಸ್ಪೋಕ್ ಸ್ಟೀರಿಂಗ್ ವೀಲ್, ಸೆಮಿ ಅನಲಾಗ್ ಇನ್ಸ್ಟ್ರುಮೆಂಟ್ ಪರದೆ, ಡ್ಯುಯಲ್ ಎಸಿ ವೆಂಟ್ಸ್ ಇತ್ಯಾದಿ ವೈಶಿಷ್ಟ್ಯಗಳು ಪ್ರಮುಖ ಆಕರ್ಷಣೆಯಾಗಲಿದೆ.

English summary
All-New Nissan X-Trail Hybrid To Launch In India By Early 2017
Story first published: Saturday, October 29, 2016, 12:14 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark