ಜನಮನ ಸೆಳೆದ ರೆನೊ ಕ್ವಿಡ್ ಕಲಾ ಚಿತ್ತಾರ

Written By:

ಫ್ರಾನ್ಸ್ ಮೂಲದ ಪ್ರಮುಖ ವಾಹನ ಸಂಸ್ಥೆಯಾಗಿರುವ ರೆನೊ ಇದೇ ಮೊದಲ ಬಾರಿಗೆ ಕಲಾ ಚಿತ್ತಾರದಿಂದ ಕೂಡಿರುವ ವರ್ಣಮಯ ಕ್ವಿಡ್ ಕಾರನ್ನು ಅನಾವರಣಗೊಳಿಸಿದೆ. ಭಾರತೀಯ ಮೂಲದ ಫ್ರಾನ್ಸ್ ಕಲಾವಿದ ಶೊಂಬಿತ್ ಸೆನ್ ಗುಪ್ತಾ ಎಂಬವರು ರೆನೊ ಕಾರಿಗೆ ಅತ್ಯಾಕರ್ಷಕ ರಂಗು ಮೂಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಜನಮನ ಸೆಳೆದ ರೆನೊ ಕ್ವಿಡ್ ಕಲಾ ಚಿತ್ತಾರ

ಮುಂಬೈನ ಐಸಿಐಎ ಗ್ಯಾಲರಿಯಲ್ಲಿ ನಡೆದ ಸಮಾರಂಭದಲ್ಲಿ ಕಾನ್ಸುಲ್ ಜನರಲ್ ಆಫ್ ಫ್ರಾನ್ಸ್ ವೈಸ್ ಪೆರ್ರಿನ್ ಎಂಬವರು ಉದ್ಘಾಟಿಸಿದ್ದರು. ಇದು ನವೆಂಬರ್ 14ರ ವರೆಗೆ ಪ್ರದರ್ಶನದಲ್ಲಿರಲಿದೆ.

ಜನಮನ ಸೆಳೆದ ರೆನೊ ಕ್ವಿಡ್ ಕಲಾ ಚಿತ್ತಾರ

ಪ್ರಸ್ತುತ ಚಿತ್ತಾಕರ್ಷಕದ ಕಾರು ಬಳಿಕ 2016 ಡಿಸೆಂಬರ್ 10ರಿಂದ 27ರ ವರೆಗೆ ಫ್ರಾನ್ಸ್ ತಲುಪಲಿದೆ. ತದಾ ಬಳಿಕ ಅಂತರಾಷ್ಟ್ರೀಯ ವಾಹನ ಪ್ರದರ್ಶನ ಮೇಳಗಳಲ್ಲೂ ತನ್ನ ಮಹಿಮೆ ಸಾರಲಿದೆ.

ಜನಮನ ಸೆಳೆದ ರೆನೊ ಕ್ವಿಡ್ ಕಲಾ ಚಿತ್ತಾರ

ರಂಗು ರಂಗಿನ ರೆನೊ ಕ್ವಿಡ್ ಕಾರು ಅಂತಿಮವಾಗಿ ಫ್ರಾನ್ಸ್ ನ, ರೆನೊ ಹೇರಿಟೇಜ್ ಮ್ಯೂಸಿಯಂಗೆ ತಲುಪಲಿದೆ.

ಜನಮನ ಸೆಳೆದ ರೆನೊ ಕ್ವಿಡ್ ಕಲಾ ಚಿತ್ತಾರ

ಪ್ಯಾರಿಸ್ ನಲ್ಲಿರುವ ರೆನೊ ವಿನ್ಯಾಸ ನಿರ್ದೇಶಕರ ಆಹ್ವಾನದ ಮೆರೆಗೆ ರೆನೊ ಕ್ವಿಡ್ ಕಾರಿನಲ್ಲಿ ವಿಶೇಷ ಕಲಾ ಪ್ರದರ್ಶನವನ್ನು ಬಳಿಯಲಾಗಿದೆ.

ಜನಮನ ಸೆಳೆದ ರೆನೊ ಕ್ವಿಡ್ ಕಲಾ ಚಿತ್ತಾರ

ಕಲಾವಿದ ತನ್ನದೇ ಆದ ಶೈಲಿಯಲ್ಲಿ ಕಾರಿನಲ್ಲಿ ವಿನೂತನ ಕಥೆಯನ್ನು ಬರೆಯುವಲ್ಲಿ ಹಾಗೂ ಅದನ್ನು ಅಭಿಮಾನಿಗಳಿಗೆ ತಲುಪಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಜನಮನ ಸೆಳೆದ ರೆನೊ ಕ್ವಿಡ್ ಕಲಾ ಚಿತ್ತಾರ

ಚೆನ್ನೈನಲ್ಲಿರುವ ವಿನ್ಯಾಸ ಕೇಂದ್ರದಲ್ಲಿ ರೆನೊ ಕ್ವಿಡ್ ಕಾರಿಗೆ ಗೆಸ್ಟೂರಿಸಂ ಆರ್ಟ್ ಶೈಲಿಯನ್ನು ಬಳಿಯಲಾಗಿತ್ತು.

ಜನಮನ ಸೆಳೆದ ರೆನೊ ಕ್ವಿಡ್ ಕಲಾ ಚಿತ್ತಾರ

ರೆನೊ ಕ್ವಿಡ್ ಕಾರಿಗೆ ದೇಶೀಯ ಮಾರುಕಟ್ಟೆಯಲ್ಲಿ ಅತಿ ಹೆಚ್ಚಿನ ಬೇಡಿಕೆ ವ್ಯಕ್ತವಾಗುತ್ತಿದ್ದು, ಅತಿ ಶೀಘ್ರದಲ್ಲೇ ಆಟೋಮ್ಯಾಟಡ್ ಮ್ಯಾನುವಲ್ ಟ್ರಾನ್ಸ್ ಮಿಷನ್ (ಎಎಂಟಿ) ವೆರಿಯಂಟ್ ಸಹ ಬಿಡುಗಡೆಯಾಗಲಿದೆ.

Read more on ರೆನೊ renault
English summary
Renault Unveils First Ever Kwid Art Car In Mumbai
Story first published: Friday, November 11, 2016, 17:02 [IST]
Please Wait while comments are loading...

Latest Photos