ಜನವರಿಯಲ್ಲಿ ಅರಳಲಿರುವ ಬಹುನಿರೀಕ್ಷಿತ ಟಾಟಾ ಹೆಕ್ಸಾ

Written By:

ಟಾಟಾ ಮೋಟಾರ್ಸ್ ಸಂಸ್ಥೆಯ ಮಗದೊಂದು ಬಹುನಿರೀಕ್ಷಿತ ಟಾಟಾ ಹೆಕ್ಸಾ ಕ್ರೀಡಾ ಬಳಕೆಯ ವಾಹನವು (ಎಸ್‌ಯುವಿ) 2017 ಜನವರಿ ತಿಂಗಳಲ್ಲಿ ಅರಳಲಿದೆ. ಹೊಸ ವರ್ಷದಲ್ಲಿ ಬಿಡುಗಡೆಯಾಗಲಿರುವ ಟಾಟಾ ಹೆಕ್ಸಾ ವಿತರಣೆ ಪ್ರಕ್ರಿಯೆಯು ಫೆಬ್ರವರಿ ತಿಂಗಳಿಂದ ಆರಂಭವಾಗಲಿದೆ.

ಜನವರಿಯಲ್ಲಿ ಅರಳಲಿರುವ ಬಹುನಿರೀಕ್ಷಿತ ಟಾಟಾ ಹೆಕ್ಸಾ

ಟಾಟಾ ಟಿಯಾಗೊ ಹ್ಯಾಚ್ ಬ್ಯಾಕ್ ಕಾರಿನ ಯಶಸ್ಸಿನ ಬಳಿಕ ಟಾಟಾ ಬಿಡುಗಡೆ ಮಾಡುತ್ತಿರುವ ಬಹುನಿರೀಕ್ಷಿತ ಮಾದರಿ ಹೆಕ್ಸಾ ಆಗಿದೆ. ಇದು ಪ್ರೀಮಿಯಂ ಎಸ್ ಯುವಿ ವಿಭಾಗದಲ್ಲಿ ತನ್ನದೇ ಆದ ವಿಶಿಷ್ಟತೆಯನ್ನು ಕಾಪಾಡಿಕೊಳ್ಳಲಿದೆ.

ಜನವರಿಯಲ್ಲಿ ಅರಳಲಿರುವ ಬಹುನಿರೀಕ್ಷಿತ ಟಾಟಾ ಹೆಕ್ಸಾ

2017 ಜನವರಿ 18ರಂದು ಬಿಡುಗಡೆಯಾಗಲಿರುವ ಟಾಟಾ ಹೆಕ್ಸಾ ಬುಕ್ಕಿಂಗ್ ಪ್ರಕ್ರಿಯೆಯನ್ನು ಈಗಾಗಲೇ ಆರಂಭಿಸಲಾಗಿದೆ. ಭಾರತದಲ್ಲಿ ಎಸ್ ಯುವಿ ಕಾರುಗಳಿಗೆ ಹೆಚ್ಚಿನ ಬೇಡಿಕೆಯಿರುವುದು ಟಾಟಾಗೆ ನೆರವಾಗಲಿದೆ.

ಜನವರಿಯಲ್ಲಿ ಅರಳಲಿರುವ ಬಹುನಿರೀಕ್ಷಿತ ಟಾಟಾ ಹೆಕ್ಸಾ

ಟಾಟಾ ಹೆಕ್ಸಾ ಎಸ್ ಯುವಿ ಬೆಲೆ 13.8 ಲಕ್ಷ ರು.ಗಳಿಂದ ಆರಂಭವಾಗುವ ನಿರೀಕ್ಷೆಯಿದೆ. ಅಂತೆಯೇ ಆರು ವೆರಿಯಂಟ್ ಗಳಲ್ಲಿ ಲಭ್ಯವಾಗಲಿದೆ. ಹಾಗೆಯೇ ಟಾಪ್ ಎಂಡ್ ಮಾದರಿಯು 19.43 ಲಕ್ಷ ರು.ಗಳಷ್ಟು ದುಬಾರಿಯಾಗಲಿದೆ.

ಜನವರಿಯಲ್ಲಿ ಅರಳಲಿರುವ ಬಹುನಿರೀಕ್ಷಿತ ಟಾಟಾ ಹೆಕ್ಸಾ

ಆರು ಹಾಗೂ ಏಳು ಸೀಟುಗಳ ಆಯ್ಕೆಗಳಲ್ಲಿ ಟಾಟಾ ಹೆಕ್ಸಾ ಲಭ್ಯವಾಗಲಿದೆ. ಕಾರಿನಡಿಯಲ್ಲಿ 2.2 ಲೀಟರ್ ವ್ಯಾರಿಕೋರ್ 320 ಎಂಜಿನ್ ಜೋಡಣೆಯಾಗಲಿದ್ದು, 320 ಎನ್ ಎಂ ತಿರುಗುಬಲದಲ್ಲಿ 148 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ.

ಜನವರಿಯಲ್ಲಿ ಅರಳಲಿರುವ ಬಹುನಿರೀಕ್ಷಿತ ಟಾಟಾ ಹೆಕ್ಸಾ

ಇದೇ ಎಂಜಿನ್ ಇನ್ನು ಹೆಚ್ಚು ಟ್ಯೂನ್ ಮಾಡಲಾಗಿದ್ದು, 400 ಎನ್ ಎಂ ತಿರುಗುಬಲದಲ್ಲಿ 154 ಅಶ್ವಶಕ್ತಿಯನ್ನು ಉತ್ಪಾದಿಸುವಷ್ಟು ಸಮರ್ಥವಾಗಿರುತ್ತದೆ.

ಜನವರಿಯಲ್ಲಿ ಅರಳಲಿರುವ ಬಹುನಿರೀಕ್ಷಿತ ಟಾಟಾ ಹೆಕ್ಸಾ

ಗೇರ್ ಬಾಕ್ಸ್ ಬಗ್ಗೆ ಮಾತನಾಡುವುದಾದ್ದಲ್ಲಿ ಫೈವ್ ಸ್ಪೀಡ್ ಮ್ಯಾನುವಲ್, ಸಿಕ್ಸ್ ಸ್ಪೀಡ್ ಮ್ಯಾನುವಲ್ ಹಾಗೂ ಆರು ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಇದರಲ್ಲಿರುತ್ತದೆ.

ಚಾಲನಾ ವಿಧಗಳು

ಚಾಲನಾ ವಿಧಗಳು

ಆಟೋ,

ಕಂಫರ್ಟ್,

ಡೈನಾಮಿಕ್,

ರಫ್ ರೋಡ್

English summary
Tata Hexa Deliveries To Commence From February 2017
Story first published: Saturday, December 24, 2016, 10:13 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark