ಹೊಸ ವರ್ಷದಿಂದ ಟಾಟಾ ಕಾರುಗಳು ದುಬಾರಿ

Written By:

ದೇಶದ ಅತಿ ದೊಡ್ಡ ವಾಹನ ಸಂಸ್ಥೆ ಟಾಟಾ ಮೋಟಾರ್ಸ್, ತನ್ನೆಲ್ಲ ಶ್ರೇಣಿಯ ಕಾರುಗಳಿಗೆ ಬೆಲೆ ಏರಿಕೆಗೊಳಿಸಲು ನಿರ್ಧರಿಸಿದೆ. ಇದರೊಂದಿಗೆ ಹೊಸ ವರ್ಷದಿಂದ ಟಾಟಾ ಕಾರುಗಳು ಮತ್ತಷ್ಟು ದುಬಾರಿಯೆನಿಸಲಿದೆ.

ಹೊಸ ವರ್ಷದಿಂದ ಟಾಟಾ ಕಾರುಗಳು ದುಬಾರಿ

ಭಾರತದಲ್ಲಿ ಟಾಟಾ ಶ್ರೇಣಿಯ ಕಾರುಗಳಿಗೆ 5,000 ರು.ಗಳಿಂದ ಆರಂಭವಾಗಿ ಗರಿಷ್ಠ 25,000 ರು.ಗಳ ವರೆಗೆ ಬೆಲೆ ಏರಿಕೆಗೊಳಿಸಲು ನಿರ್ಧರಿಸಲಾಗಿದೆ.

ಹೊಸ ವರ್ಷದಿಂದ ಟಾಟಾ ಕಾರುಗಳು ದುಬಾರಿ

2017 ಜನವರಿ 01ರಂದು ಜಾರಿಗೆ ಬರುವಂತೆಯೇ ಟಾಟಾ ಕಾರುಗಳಿಗೆ ಬೆಲೆ ಏರಿಕೆ ನೀತಿ ಅನ್ವಯವಾಗಲಿದೆ.

ಹೊಸ ವರ್ಷದಿಂದ ಟಾಟಾ ಕಾರುಗಳು ದುಬಾರಿ

ಸ್ಟೀಲ್, ಅಲ್ಯೂಮಿನಿಯಂ, ತಾಮ್ರ ಹಾಗೂ ರಬ್ಬರ್ ಗಳಂತಹ ಕಚ್ಚಾ ಸರಕು ವಸ್ತುಗಳ ದರ ಏರಿಕೆಗೊಂಡಿರುವುದರಿಂದ ಬೆಲೆ ಏರಿಕೆಯು ಅನಿವಾರ್ಯವಾಗಿದೆ ಎಂದು ಟಾಟಾ ಸಂಸ್ಥೆಯು ತಿಳಿಸಿದೆ.

ಹೊಸ ವರ್ಷದಿಂದ ಟಾಟಾ ಕಾರುಗಳು ದುಬಾರಿ

ಟಾಟಾ ಬೆಲೆ ಏರಿಕೆ ನೀತಿಯಿಂದಾಗಿ ಮಾರಾಟದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.

ಹೊಸ ವರ್ಷದಿಂದ ಟಾಟಾ ಕಾರುಗಳು ದುಬಾರಿ

ಯಾಕೆಂದರೆ ನೂತನವಾಗಿ ಬಿಡುಗಡೆಯಾಗಿರುವ ಟಿಯಾಗೊ ಹ್ಯಾಚ್ ಬ್ಯಾಕ್ ಕಾರಿನ ನೆರವಿನಿಂದ ಟಾಟಾ ಸಂಸ್ಥೆಯು ತಿಂಗಳಿಂದ ತಿಂಗಳಿಗೆ ಮಾರಾಟ ಏರುಗತಿಯನ್ನು ದಾಖಲಿಸಿತ್ತು.

ಹೊಸ ವರ್ಷದಿಂದ ಟಾಟಾ ಕಾರುಗಳು ದುಬಾರಿ

ಎಂಟ್ರಿ ಲೆವೆಲ್ ನ್ಯಾನೋ ಕಾರಿನಿಂದ ಆರಂಭವಾಗಿ ಆರಿಯಾ ಕ್ರಾಸೋವರ್ ಶ್ರೇಣಿಯ ವರೆಗಿನ ಕಾರುಗಳನ್ನು ಮಾರಾಟ ಮಾಡುತ್ತಿರುವ ಟಾಟಾ ಕಾರುಗಳು ದೇಶದಲ್ಲಿ ದೆಹಲಿ ಎಕ್ಸ್ ಶೋ ರೂಂ ಪ್ರಕಾರ 2.18 ಲಕ್ಷ ರು.ಗಳಿಂದ 17.29 ಲಕ್ಷ ರು.ಗಳಷ್ಟು ದುಬಾರಿಯೆನಿಸುತ್ತದೆ.

ಹೊಸ ವರ್ಷದಿಂದ ಟಾಟಾ ಕಾರುಗಳು ದುಬಾರಿ

ಅಂದ ಹಾಗೆ ಟಾಟಾ ಸಂಸ್ಥೆಯು ಮೂರು ಆಕರ್ಷಕ ಕಾರುಗಳನ್ನು ಬಿಡುಗಡೆ ಮಾಡಲು ಸಜ್ಜಾಗುತ್ತಿದೆ. ಇವುಗಳಲ್ಲಿ ಟಾಟಾ ಕೈಟ್ 5, ಟಾಟಾ ನೆಕ್ಸನ್ ಮತ್ತು ಹೆಕ್ಸಾ ಪ್ರೀಮಿಯಂ ಕ್ರಾಸೋವರ್ ಕಾರುಗಳು ಸೇರಿವೆ.

ಹೊಸ ವರ್ಷದಿಂದ ಟಾಟಾ ಕಾರುಗಳು ದುಬಾರಿ

ಇದರೊಂದಿಗೆ ಟಾಟಾ ಸಂಸ್ಥೆಯು ಟೊಯೊಟಾ ಹಾಗೂ ರೆನೊ ಸಂಸ್ಥೆಯ ಬೆಲೆ ಏರಿಕೆ ನೀತಿಯನ್ನು ಹಿಂಬಾಲಿಸಿದೆ. ಸದ್ಯದಲ್ಲೇ ಮತ್ತಷ್ಟು ವಾಹನ ಸಂಸ್ಥೆಗಳಿಂದ ಬೆಲೆ ಏರಿಕೆ ನೀತಿ ಪ್ರಕಟಗೊಳ್ಳುವ ಸಾಧ್ಯತೆಯಿದೆ.

English summary
Tata Motors Hikes Price Throughout Range — Read More
Story first published: Monday, December 12, 2016, 16:41 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark