2020ರೊಳಗೆ ಅಗ್ರ ಮೂರು ಸ್ಥಾನಕ್ಕೇರುವುದು ಟಾಟಾ ಗುರಿ

ನಿಕಟ ಭವಿಷ್ಯದಲ್ಲೇ ಮೂರು ಆಕರ್ಷಕ ಕಾರುಗಳನ್ನು ಟಾಟಾ ಮೋಟಾರ್ಸ್ ಬಿಡುಗಡೆ ಮಾಡಲಿದೆ.

By Nagaraja

2020ನೇ ಇಸವಿಯ ವೇಳೆಯಾಗುವ ದೇಶದ ಅಗ್ರ ಮೂರು ಪ್ರಯಾಣಿಕ ಕಾರುಗಳ ಸಂಸ್ಥೆಗಳ ಸಾಲಿನಲ್ಲಿ ಗುರುತಿಸಿಕೊಳ್ಳುವ ಇರಾದೆಯಲ್ಲಿರುವ ದೇಶದ ಅತಿ ದೊಡ್ಡ ವಾಹನ ಸಂಸ್ಥೆ ಟಾಟಾ ಮೋಟಾರ್ಸ್, ನಿಕಟ ಭವಿಷ್ಯದಲ್ಲೇ ಮೂರು ಆಕರ್ಷಕ ಕಾರುಗಳನ್ನು ಬಿಡುಗಡೆ ಮಾಡುವ ತಯಾರಿಯಲ್ಲಿ ತೊಡಗಿಸಿಕೊಂಡಿದೆ. ಮೂರು ವಿವಿಧ ವಿಭಾಗಗಳಲ್ಲಿ ಬಿಡುಗಡೆಯಾಗಲಿರುವ ತ್ರಿವಳಿ ಕಾರುಗಳು ಟಾಟಾ ಮೌಲ್ಯವನ್ನು ಮತ್ತಷ್ಟು ಹೆಚ್ಚಿಸಲು ನೆರವಾಗಲಿದೆ.

ಟಾಟಾ ಬಿಡುಗಡೆ ಮಾಡಲಿರುವ ಮೂರು ಕಾರುಗಳು ಇಂತಿದೆ

ಟಾಟಾ ಬಿಡುಗಡೆ ಮಾಡಲಿರುವ ಮೂರು ಕಾರುಗಳು ಇಂತಿದೆ

ಕಾಂಪಾಕ್ಟ್ ಸೆಡಾನ್ - ಟಾಟಾ ಕೈಟ್ 5

ಕಾಂಪಾಕ್ಟ್ ಎಸ್ ಯುವಿ - ಟಾಟಾ ನೆಕ್ಸನ್

ಕ್ರಾಸೋವರ್ ಎಸ್ ಯುವಿ - ಟಾಟಾ ಹೆಕ್ಸಾ

2020ರೊಳಗೆ ಅಗ್ರ ಮೂರು ಸ್ಥಾನಕ್ಕೇರುವುದು ಟಾಟಾ ಗುರಿ

ಸದ್ಯ ಪ್ರಯಾಣಿಕ ಮಾರುಕಟ್ಟೆಯಲ್ಲಿ ಐದನೇ ಸ್ಥಾನದಲ್ಲಿರುವ ಟಾಟಾ, ದೇಶದ ಅಗ್ರ ವಾಹನ ಸಂಸ್ಥೆಗಳಾದ ಮಾರುತಿ ಸುಜುಕಿ ಮತ್ತು ಹ್ಯುಂಡೈ ಸಂಸ್ಥೆಯನ್ನು ಟಾರ್ಗೆಟ್ ಮಾಡುತ್ತಿದೆ.

2020ರೊಳಗೆ ಅಗ್ರ ಮೂರು ಸ್ಥಾನಕ್ಕೇರುವುದು ಟಾಟಾ ಗುರಿ

ಎಲ್ಲ ವಿಭಾಗದಲ್ಲೂ ತನ್ನ ಸಾನಿಧ್ಯವನ್ನು ವ್ಯಕ್ತಪಡಿಸುವ ಮೂಲಕ ಪ್ರಯಾಣಿಕ ವಾಹನ ವಿಭಾಗದಲ್ಲಿರುವ ಅಂತರವನ್ನು ತುಂಬಿಕೊಳ್ಳುವುದು ಟಾಟಾ ಇರಾದೆಯಾಗಿದೆ. ಸದ್ಯಕ್ಕೆ ಪ್ರಯಾಣಿಕ ವಿಭಾಗದಲ್ಲಿ ಶೇಕಡಾ 60ರಷ್ಟು ಮಾತ್ರ ಸಾನಿಧ್ಯವನ್ನು ಹೊಂದಿದೆ.

2020ರೊಳಗೆ ಅಗ್ರ ಮೂರು ಸ್ಥಾನಕ್ಕೇರುವುದು ಟಾಟಾ ಗುರಿ

ಅಂತೆಯೇ ಭವಿಷ್ಯದಲ್ಲಿ ವಾಹನ ನಿರ್ಮಿಸುವ ತಳಹದಿಯನ್ನು ಕಡಿಮೆ ಮಾಡಿ ವೆಚ್ಚ ಕಡಿತ ಮಾಡುವ ಹಾಗೂ ಆಕರ್ಷಕ ಉತ್ಪನ್ನಗಳನ್ನು ನೀಡುವ ಇರಾದೆಯನ್ನು ಟಾಟಾ ಹೊಂದಿದೆ.

2020ರೊಳಗೆ ಅಗ್ರ ಮೂರು ಸ್ಥಾನಕ್ಕೇರುವುದು ಟಾಟಾ ಗುರಿ

ಟಾಟಾ ಈಗಾಗಲೇ ವಿವಿಧ ಉತ್ಪನ್ನಗಳ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡಿದೆ. ಇದನ್ನು ಹಂತ ಹಂತವಾಗಿ ಮಾರುಕಟ್ಟೆಗೆ ತರುವ ಯೋಜನೆಯನ್ನು ಸಂಸ್ಥೆಯು ಹೊಂದಿದೆ.

2020ರೊಳಗೆ ಅಗ್ರ ಮೂರು ಸ್ಥಾನಕ್ಕೇರುವುದು ಟಾಟಾ ಗುರಿ

ವಿನ್ಯಾಸ ನೀತಿಗೆ ಹೊಸ ಆಯಾಮವನ್ನು ತುಂಬಿಕೊಂಡಿರುವ ಟಾಟಾ, ಪುಣೆ, ಬ್ರಿಟನ್ ಹಾಗೂ ಇಟಲಿಯಲ್ಲಿ ಸ್ಥಿತಗೊಂಡಿರುವ ಡಿಸೈನ್ ಸ್ಟುಡಿಯೋದಲ್ಲಿ ನಾವೀನ್ಯ ತಂತ್ರಗಾರಿಕೆಯನ್ನು ಅಭಿವೃದ್ಧಿಪಡಿಸುತ್ತಿದೆ.

2020ರೊಳಗೆ ಅಗ್ರ ಮೂರು ಸ್ಥಾನಕ್ಕೇರುವುದು ಟಾಟಾ ಗುರಿ

ಸಮಯೋಚಿತವಾಗಿ ಕಾರುಗಳನ್ನು ಬಿಡುಗಡೆ ಮಾಡುವುದು ಟಾಟಾ ಗುರಿಯಾಗಿದೆ. ಟಾಟ ಟಿಯಾಗೊದಲ್ಲಿ ದಾಖಲಾಗಿರುವ ಅದೇ ಯಶಸ್ಸನ್ನು ಮುಂದುವರಿಸುವ ಯೋಜನೆಯನ್ನು ಹೊಂದಿದೆ.

2020ರೊಳಗೆ ಅಗ್ರ ಮೂರು ಸ್ಥಾನಕ್ಕೇರುವುದು ಟಾಟಾ ಗುರಿ

ಈ ಬಗ್ಗೆ ಹೇಳಿಕೆ ಕೊಟ್ಟಿರುವ ಟಾಟಾ ಮೋಟಾರ್ಸ್ ಪ್ರಯಾಣಿಕ ವಾಹನ ವಿಭಾಗದ ಅಧ್ಯಕ್ಷರಾಗಿರುವ ಮಯಾಂಕ್ ಪರೀಕರ್, ಮುಂದಿನ ಐದು ವರ್ಷಗಳಿಗಿರುವ ಯೋಜನೆಗಳನ್ನು ಅಂತಿಮಗೊಳಿಸಲಾಗಿದೆ ಎಂಬ ಆತ್ಮವಿಶ್ವಾಸದ ಮಾತುಗಳನ್ನಾಡಿದ್ದಾರೆ.

2020ರೊಳಗೆ ಅಗ್ರ ಮೂರು ಸ್ಥಾನಕ್ಕೇರುವುದು ಟಾಟಾ ಗುರಿ

ಪ್ರೀಮಿಯಂ ಹ್ಯಾಚ್ ಬ್ಯಾಕ್, ಕಾಂಪಾಕ್ಟ್ ಎಸ್ ಯುವಿ ಜೊತೆಗೆ ಕಾರ್ಯನಿರ್ವಾಹಕ ಸೆಡಾನ್ ಕಾರುಗಳತ್ತ ಟಾಟಾ ಕಣ್ಣಾಯಿಸಿದೆ. ಜನವರಿಯಲ್ಲಿ ಬಿಡುಗಡೆಯಾಗಲಿರುವ ಟಾಟಾ ಹೆಕ್ಸಾ ಇದಕ್ಕೆ ಮುನ್ನುಡಿ ಬರೆಯಲಿದೆ.

2020ರೊಳಗೆ ಅಗ್ರ ಮೂರು ಸ್ಥಾನಕ್ಕೇರುವುದು ಟಾಟಾ ಗುರಿ

ನೂತನ ಕಾರುಗಳ ಉತ್ಪನ್ನಕ್ಕೆ ಟಾಟಾ ಮೋಟಾರ್ಸ್ ಬರೋಬ್ಬರಿ 3,500 ಕೋಟಿ ರುಪಾಯಿಗಳಿಂದ 4,000 ಕೋಟಿ ರುಪಾಯಿಗಳ ವರೆಗೆ ಹೂಡಿಕೆ ಮಾಡುತ್ತಿದೆ.

2020ರೊಳಗೆ ಅಗ್ರ ಮೂರು ಸ್ಥಾನಕ್ಕೇರುವುದು ಟಾಟಾ ಗುರಿ

ಹಾಗೆಯೇ ಕಳೆಗುಂದಿರುವ ಹಳೆಯ ಮಾದರಿಗಳನ್ನು ವಿಸ್ಟಾ ಹಾಗೂ ಮಾಂಝಾ ರೀತಿಯಲ್ಲಿಯೇ ಮಾರುಕಟ್ಟೆಯಿಂದ ಗೇಟ್ ಪಾಸ್ ನೀಡಲಾಗುವುದು.

Most Read Articles

Kannada
English summary
Tata Motors Is Upbeat About The Future; To Launch Slew Of Vehicles
Story first published: Wednesday, October 26, 2016, 9:47 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X