ಸಪ್ಪೆಯಾದ ಆಲ್ಟೊ, ಕ್ವಿಡ್; ಮೌಲ್ಯ ಆಧಾರಿತ ಟಾಪ್ 10 ಕಾರುಗಳು

Written By:

ಭಾರತದಲ್ಲಿ ಅತಿ ಹೆಚ್ಚು ಮಾರಾಟವಾಗುವ ಅಗ್ರ 10 ಕಾರುಗಳ ವಿಚಾರಕ್ಕೆ ಬಂದಾಗ ಕಳೆದೈದು ವರ್ಷಗಳಿಂದ ಹೆಚ್ಚಿನ ಬದಲಾವಣೆಗಳು ಕಂಡುಬಂದಿಲ್ಲ. ಮಾರುತಿ ಆಲ್ಟೊ ಹಾಗೂ ಡಿಜೈರ್ ಮಾದರಿಗಳು ಮೊದಲೆರಡು ಸ್ಥಾನಗಳನ್ನು ಹಂಚಿಕೊಂಡರೆ, ಹ್ಯುಂಡೈ ಗ್ರಾಂಡ್ ಐ10, ಮಾರುತಿ ವ್ಯಾಗನಾರ್ ತನ್ನ ಸ್ಥಾನವನ್ನು ಗಟ್ಟಿಸಿಪಡಿಕೊಂಡಿದೆ. ಇದಕ್ಕೊಂದು ನೂತನ ಸೇರ್ಪಡೆ ರೆನೊ ಕ್ವಿಡ್ ಎಂದು ಹೇಳಬಹುದು.

ಆದರೆ ಮೌಲ್ಯದ ಆಧಾರದಲ್ಲಿ ಅಗ್ರ 10 ಕಾರುಗಳನ್ನು ಪರೀಶೀಲಿಸಿದಾಗ ಪರಿಸ್ಥಿತಿ ಬದಲಾಗುತ್ತದೆ. ಇಲ್ಲಿ ನಿರ್ದಿಷ್ಟ ಕಾರುಗಳ ಟಾಪ್ ಎಂಡ್ ವೆರಿಯಂಟ್ ಬೆಲೆಯನ್ನು ಒಟ್ಟು ಮಾರಾಟವಾದ ಸಂಖ್ಯೆಯಿಂದ ಇಮ್ಮಡಿಗೊಳಿಸುವ ಮೂಲಕ ಮೌಲ್ಯವನ್ನು ಅಳೆಯಲಾಗುತ್ತದೆ. ಪ್ರಸ್ತುತ ಪಟ್ಟಿಯಲ್ಲಿ ಮಾರುತಿ ಆಲ್ಟೊ ಹಾಗೂ ರೆನೊ ಕ್ವಿಡ್ ಕಾರುಗಳು ಸ್ಥಾನಗಳು ಕೊನೆಯ ಸ್ಥಾನಕ್ಕೆ ಕುಸಿತವನ್ನು ಕಂಡಿರುವುದು ಅಚ್ಚರಿ ಮೂಡಿಸುತ್ತದೆ. ಅಂದರೆ ಮೊದಲ ಸ್ಥಾನದಲ್ಲಿರುವ ಕಾರು ಯಾವುದು ಗೊತ್ತೇ? ಬನ್ನಿ ನೋಡೋಣ...

ಸಪ್ಪೆಯಾದ ಆಲ್ಟೊ, ಕ್ವಿಡ್; ಮೌಲ್ಯ ಆಧಾರಿತ ಟಾಪ್ 10 ಕಾರುಗಳು

ಈ ಎಲ್ಲ ಬದಲಾವಣೆಗಳಿಂದ ತಿಳಿದು ಬರುವ ವಿಚಾರವೇನೆಂದರೆ ಗ್ರಾಹಕರ ಮನೋಸ್ಥಿತಿ ಬದಲಾಗಿದ್ದು, ಅಗ್ಗದ ಕಾರಿಗೆ ಮೊರೆ ಹೋಗುವ ಬದಲಾಗಿ ಪ್ರೀಮಿಯಂ ವೈಶಿಷ್ಟ್ಯವನ್ನೊಳಗೊಂಡ ಕಾರುಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಈ ಸಂಬಂಧ ಮೌಲ್ಯ ಆಧಾರಿತ ದೇಶದ ಅಗ್ರ 10 ಕಾರುಗಳ ಸಂಸ್ಥೆಗಳ ಬಗ್ಗೆ ವಿವರವನ್ನು ನೀಡುವ ಪ್ರಯತ್ನವನ್ನು ಮಾಡಲಿದ್ದೇವೆ.

10. ರೆನೊ ಕ್ವಿಡ್

10. ರೆನೊ ಕ್ವಿಡ್

2016 ಜೂನ್ ತಿಂಗಳಲ್ಲಿ ದೇಶದಲ್ಲಿ ಅತಿ ಹೆಚ್ಚು ಮಾರಾಟವಾಗುವ ಕಾರುಗಳ (9459) ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿರುವ ಕ್ವಿಡ್ ಟಾಪ್ ಎಂಡ್ ಕ್ವಿಡ್ ಮಾರಾಟದ ಮೂಖಾಂತರ 338 ಕೋಟಿ ರುಪಾಯಿಗಳನ್ನು ಸಂಗ್ರಹಿಸಲಾಗಿದೆ.

ರೆನೊ ಕ್ವಿಡ್

ರೆನೊ ಕ್ವಿಡ್

ಅಂದರೆ ಗ್ರಾಹಕರು ಕ್ವಿಡ್ ನಲ್ಲಿರುವ ಟಚ್ ಸ್ಕ್ರೀನ್ ಇನ್ಪೋಟೈನ್ಮೆಂಟ್ ಸಿಸ್ಟಂ, ಮೀಡಿಯಾ ನೇವ್, ಬ್ಲೂಟೂತ್, ಯುಎಸ್ ಬಿ ಹಾಗೂ ಆಕ್ಸ್ ಇನ್ ವೈಶಿಷ್ಟ್ಯಗಳಿಗೆ ಮಹತ್ವವನ್ನು ಕೊಡುತ್ತಿರುವುದು ಕಂಡುಬಂದಿದೆ.

09. ಮಾರುತಿ ಆಲ್ಟೊ

09. ಮಾರುತಿ ಆಲ್ಟೊ

ಮಾರಾಟದ ಅಂಕಿಅಂಶದಲ್ಲಿ ಸದಾ ಅಗ್ರಸ್ಥಾನದಲ್ಲಿರುವ ಮಾರುತಿ ಆಲ್ಟೊ ಟಾಪ್ ಎಂಡ್ ವೆರಿಯಂಟ್ ಗಳ ಮಾರಾಟದ ಮುಖಾಂತರ 510 ಕೋಟಿ ರುಪಾಯಿಗಳನ್ನು ಸಂಗ್ರಹಿಸುವ ಮೂಲಕ ಒಂಬತ್ತನೇ ಸ್ಥಾನದಲ್ಲಿದೆ. ಮಾರುತಿ ಆಲ್ಟೊದಲ್ಲಿ ಎಎಂಟಿ ಆಯ್ಕೆಯೂ ಸುಲಭ ಚಾಲನೆಯನ್ನು ಖಾತ್ರಿಪಡಿಸುತ್ತದೆ. ಜೊತೆಗೆ ಅತ್ಯುತ್ತಮ ರಿಸೇಲ್ ಮಾರಾಟವನ್ನು ಕಾಪಾಡಿಕೊಂಡಿದೆ.

ಮಾರುತಿ ಆಲ್ಟೊ

ಮಾರುತಿ ಆಲ್ಟೊ

ಆದರೆ ಜೂನ್ ತಿಂಗಳಲ್ಲಿ 15,750 ಯುನಿಟ್ ಗಳ ಮಾರಾಟ ಸಾಧಿಸಿರುವ ಮಾರುತಿ ಆಲ್ಟೊ ಮಗದೊಮ್ಮೆ ಮಾರಾಟದ ವಿಚಾರದಲ್ಲಿ ಅಗ್ರ ಸ್ಥಾನ ಆಲಂಕರಿಸಿತ್ತು.

08. ಮಾರುತಿ ಸುಜುಕಿ ಬಲೆನೊ

08. ಮಾರುತಿ ಸುಜುಕಿ ಬಲೆನೊ

2016 ಜೂನ್ ತಿಂಗಳಲ್ಲಿ 6967 ಯುನಿಟ್ ಗಳ ಮಾರಾಟವನ್ನು ಕಂಡಿರುವ ಮಾರುತಿ ಬಲೆನೊ ಕೊನೆಯ ಸ್ಥಾನ ಆಲಂಕರಿಸಿರಬಹುದು. ಆದರೆ ಮೌಲ್ಯ ಆಧಾರಿತ ಟಾಪ್ 10 ಕಾರುಗಳ ಪಟ್ಟಿಯಲ್ಲಿ 530 ಕೋಟಿ ರುಪಾಯಿಗಳನ್ನು ಸಂಗ್ರಹಿಸುವ ಮೂಲಕ ಎಂಟನೇ ಸ್ಥಾನದಲ್ಲಿ ಗುರುತಿಸಿಕೊಂಡಿದೆ.

ಮಾರುತಿ ಸುಜುಕಿ ಬಲೆನೊ

ಮಾರುತಿ ಸುಜುಕಿ ಬಲೆನೊ

ಪ್ರೀಮಿಯಂ ಹ್ಯಾಚ್ ಬ್ಯಾಕ್ ಕಾರಿಗೆ ತಕ್ಕಂತೆ ಡ್ಯುಯಲ್ ಫ್ರಂಟ್ ಏರ್ ಬ್ಯಾಗ್, ಪ್ರೊಜೆಕ್ಟರ್ ಹೆಡ್ ಲ್ಯಾಂಪ್, ಆಟೋಮ್ಯಾಟಿಕ್ ಗೇರ್ ಬಾಕ್ಸ್, ಡೇಟೈಮ್ ರನ್ನಿಂಗ್ ಲೈಟ್ಸ್ ಟಚ್ ಸ್ಕ್ರೀನ್ ಇನ್ಪೋಟೈನ್ಮೆಂಟ್ ಸಿಸ್ಟಂ, ಆಪಲ್ ಕಾರ್ ಪ್ಲೇ ಇತ್ಯಾದಿ ವೈಶಿಷ್ಟ್ಯಗಳು ಇದರಲ್ಲಿದೆ.

07. ಮಾರುತಿ ವ್ಯಾಗನಾರ್

07. ಮಾರುತಿ ವ್ಯಾಗನಾರ್

ಟಾಲ್ ಬಾಯ್ ಎಂಬ ಅಕ್ಕರೆಯ ಹೆಸರಿನಿಂದ ಕರೆಯಲ್ಪಡುವ ಮಾರುತಿ ವ್ಯಾಗನಾರ್ ಜೂನ್ ತಿಂಗಳ ಮಾರಾಟದಲ್ಲಿ 11962 ಯುನಿಟ್ ಗಳ ಮಾರಾಟದ ಮುಖಾಂತರ ನಾಲ್ಕನೇ ಸ್ಥಾನವನ್ನು ಭದ್ರವಾಗಿಸಿದೆ. ಆದರೆ ಮೌಲ್ಯ ಆಧಾರಿತ ಕಾರುಗಳ ಪಟ್ಟಿಯಲ್ಲಿ 557 ಕೋಟಿ ರುಪಾಯಿಗಳ ವ್ಯವಹಾರದೊಂದಿಗೆ ಏಳನೇ ಸ್ಥಾನದಲ್ಲಿದೆ.

ಮಾರುತಿ ವ್ಯಾಗನಾರ್

ಮಾರುತಿ ವ್ಯಾಗನಾರ್

ವ್ಯಾಗನಾರ್ ಸಹ ತನ್ನ ವಿಭಾಗದಲ್ಲಿ ಅತ್ಯುತ್ತಮ ವೈಶಿಷ್ಟ್ಯಗಳನ್ನು ಒದಗಿಸುತ್ತಿದ್ದು, ಸ್ಟೋರೆಜ್ ಜಾಗ, ಮ್ಯೂಸಿಕ್ ಸಿಸ್ಟಂ, ಯುಎಸ್ ಬಿ, ಐಚ್ಛಿಕ ಏರ್ ಬ್ಯಾಗ್, ಎಎಂಟಿ ಗೇರ್ ಬಾಕ್ಸ್ ಇತ್ಯಾದಿ ಆಯ್ಕೆಗಳು ಇದರಲ್ಲಿರುತ್ತದೆ.

ಮಾರುತಿ ಸ್ವಿಫ್ಟ್

ಮಾರುತಿ ಸ್ವಿಫ್ಟ್

ಹೊಸತಾಗಿ ಎಂಟ್ರಿ ಕೊಟ್ಟಿರುವ ತನ್ನ ಹಿರಿಯ ಸೋದರ ಬಲೆನೊದಿಂದಲೇ ಅತಿ ಹೆಚ್ಚು ಸ್ಪರ್ಧೆಯನ್ನು ಎದುರಿಸುತ್ತಿರುವ ಸ್ವಿಫ್ಟ್, ಟಾಪ್ ಎಂಡ್ ವೆರಿಯಂಟ್ ಗಳ ಮಾರಾಟದ ಮುಖಾಂತರ 582 ಕೋಟಿ ರುಪಾಯಿಗಳನ್ನು ಸಂಗ್ರಹಿಸಿದೆ. ಇದರಲ್ಲಿರುವ ಆಟೋ ಕ್ಲೈಮೈಟ್ ಕಂಟ್ರೋಲ್, ಪುಶ್ ಬಟನ್ ಸ್ಟ್ಯಾರ್ಟ್/ಸ್ಟಾಪ್, ಕೀಲೆಸ್ ಎಂಟ್ರ ಹಾಗೂ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಗಳು ಇದರಲ್ಲಿರುತ್ತದೆ.

ಸಪ್ಪೆಯಾದ ಆಲ್ಟೊ, ಕ್ವಿಡ್; ಮೌಲ್ಯ ಆಧಾರಿತ ಟಾಪ್ 10 ಕಾರುಗಳು

ಅಂದ ಹಾಗೆ ಜೂನ್ ತಿಂಗಳಲ್ಲಿ 9033 ಯುನಿಟ್ ಗಳ ಮಾರಾಟ ಕಂಡಿರುವ ಸ್ವಿಫ್ಟ್ ಅಗ್ರ 10 ಮಾರಾಟದ ಕಾರುಗಳ ಪಟ್ಟಿಯಲ್ಲಿಯೂ ಆರನೇ ಸ್ಥಾನ ಆಲಂರಿಸಿತ್ತು.

05. ಹ್ಯುಂಡೈ ಎಲೈಟ್ ಐ20

05. ಹ್ಯುಂಡೈ ಎಲೈಟ್ ಐ20

ಪ್ರೀಮಿಯಂ ಹ್ಯಾಚ್ ಬ್ಯಾಕ್ ಕಾರಾಗಿರುವ ಹ್ಯುಂಡೈ ಎಲೈಟ್ ಐ20 ತನ್ನ ವಿಭಾಗದಲ್ಲಿ ಟಚ್ ಸ್ಕ್ರೀನ್ ಆಡಿಯೋ/ವಿಡಿಯೋ ಸಿಸ್ಟಂ, ಆಟೋ ಎಸಿ, ಟಿಲ್ಟ್ ಆ್ಯಂಡ್ ಟೆಲಿಸ್ಕಾಪಿಕ್ ಸ್ಟೀರಿಂಗ್ ವೀಲ್, ಕೂಲ್ಡ್ ಗ್ಲಾವ್ ಬಾಕ್ಸ್ ಇತ್ಯಾದಿ ವೈಶಿಷ್ಟ್ಯಗಳನ್ನು ನೀಡುತ್ತಿದೆ. ಅತಿ ಹೆಚ್ಚು ಮಾರಾಟವಾಗುವ ಅಗ್ರ 10 ಕಾರುಗಳ ಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿರುವ ಎಲೈಟ್ ಐ20 ಮೌಲ್ಯ ಆಧಾರಿತ ಟಾಪ್ 10 ಕಾರುಗಳ್ಲಿಲ 787 ಕೋಟಿ ರುಪಾಯಿಗಳ ಸಂಗ್ರಹದ ಮೂಲಕ ಐದನೇ ಸ್ಥಾನದಲ್ಲಿ ಗುರುತಿಸಿಕೊಂಡಿದೆ.

ಹ್ಯುಂಡೈ ಎಲೈಟ್ ಐ20

ಹ್ಯುಂಡೈ ಎಲೈಟ್ ಐ20

ಅತಿ ಹೆಚ್ಚು ಮಾರಾಟವಾಗುವ ಅಗ್ರ 10 ಕಾರುಗಳ ಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿರುವ ಎಲೈಟ್ ಐ20 ಮೌಲ್ಯ ಆಧಾರಿತ ಟಾಪ್ 10 ಕಾರುಗಳ್ಲಿಲ 787 ಕೋಟಿ ರುಪಾಯಿಗಳ ಸಂಗ್ರಹದ ಮೂಲಕ ಐದನೇ ಸ್ಥಾನದಲ್ಲಿ ಗುರುತಿಸಿಕೊಂಡಿದೆ.

04. ಹ್ಯುಂಡೈ ಗ್ರಾಂಡ್ ಐ10

04. ಹ್ಯುಂಡೈ ಗ್ರಾಂಡ್ ಐ10

ಡ್ಯುಯಲ್ ಫ್ರಂಟ್ ಏರ್ ಬ್ಯಾಗ್, ಎಬಿಎಸ್, ರಿವರ್ಸ್ ಪಾರ್ಕಿಂಗ್ ಅಸಿಸ್ಟ್, ಸ್ಮಾರ್ಟ್ ಕೀ, ಪುಶ್ ಸ್ಟ್ಯಾರ್ಟ್/ಸ್ಟಾಪ್ ಬಟನ್, ವಿದ್ಯುನ್ಮಾನವಾಗಿ ಹೊಂದಾಣಿಸಬಹುದಾದ ಹೊರಗಿನ ರಿಯರ್ ವ್ಯೂ ಮಿರರ್ ಮತ್ತು ರಿಯರ್ ಎಸಿ ಗಳಂತಹ ವೈಶಿಷ್ಟ್ಯಗಳನ್ನು ಹ್ಯುಂಡೈ ಗ್ರಾಂಡ್ ಐ10 ಪಡೆದುಕೊಂಡಿದೆ. ಇದರಂತೆ 824 ಕೋಟಿ ರುಪಾಯಿಗಳ ಸಂಗ್ರಹದೊಂದಿಗೆ ಮೌಲ್ಯ ಆಧಾರಿತ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ.

ಹ್ಯುಂಡೈ ಗ್ರಾಂಡ್ ಐ10

ಹ್ಯುಂಡೈ ಗ್ರಾಂಡ್ ಐ10

ಜೂನ್ ತಿಂಗಳಲ್ಲಿ 12,678 ಯುನಿಟ್ ಗಳ ಮಾರಾಟ ದಾಖಲಿಸಿರುವ ಗ್ರಾಂಡ್ ಐ20 ಅತಿ ಹೆಚ್ಚು ಮಾರಾಟವಾಗುವ ಅಗ್ರ 10 ಕಾರುಗಳ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ.

03. ಹ್ಯುಂಡೈ ಕ್ರೆಟಾ

03. ಹ್ಯುಂಡೈ ಕ್ರೆಟಾ

ಕ್ರೀಡಾ ಬಳಕೆಯ ವಾಹನದಲ್ಲಿ ಅತಿ ಹೆಚ್ಚು ಬೇಡಿಕೆಯನ್ನು ಕಾಪಾಡಿಕೊಂಡಿರುವ ಹ್ಯುಂಡೈ ಕ್ರೆಟಾ ಟಚ್ ಸ್ಕ್ರೀನ್ ಇನ್ಪೋಟೈನ್ಮೆಂಟ್ ಸಿಸ್ಟಂ, ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, ರಿಯರ್ ಎಸಿ, ಆರು ಏರ್ ಬ್ಯಾಗ್, ಹಿಲ್ ಕ್ಲೈಂಬ್ ಕಂಟ್ರೋಲ್, ಫಾಲೋ ಮಿ ಹೆಡ್ ಲ್ಯಾಂಪ್, ರಿಯರ್ ಪಾರ್ಕಿಂಗ್ ಅಸಿಸ್ಟ್ ಇನ್ನು ಹಲವಾರು ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ.

ಹ್ಯುಂಡೈ ಕ್ರೆಟಾ

ಹ್ಯುಂಡೈ ಕ್ರೆಟಾ

ಅಷ್ಟೇ ಅಲ್ಲದೆ ಟಾಪ್ ಎಂಡ್ ವೆರಿಯಂಟ್ ಗಳ ಮಾರಾಟದ ಮುಖಾಂತರ 952 ಕೋಟಿ ರುಪಾಯಿಗಳನ್ನು ಸಂಗ್ರಹಿಸಿದೆ. ಇನ್ನು 7700 ಯುನಿಟ್ ಗಳ ಮಾರಾಟದೊಂದಿಗೆ ಅಗ್ರ 10 ಅತಿ ಹೆಚ್ಚು ಮಾರಾಟವಾಗುವ ಕಾರುಗಳ ಪಟ್ಟಿಯಲ್ಲಿ ಒಂಬತ್ತನೇ ಸ್ಥಾನದಲ್ಲಿದೆ.

02. ಮಾರುತಿ ಸ್ವಿಫ್ಟ್ ಡಿಜೈರ್

02. ಮಾರುತಿ ಸ್ವಿಫ್ಟ್ ಡಿಜೈರ್

ನಾಲ್ಕು ಮೀಟರ್ ಉದ್ದ ಪರಿಧಿಯೊಳಗೆ ಅತ್ಯುತ್ತಮ ಕಾಂಪಾಕ್ಟ್ ಸೆಡಾನ್ ಕಾರನ್ನು ಒದಗಿಸುತ್ತಿರುವ ಮಾರುತಿ ಸ್ವಿಫ್ಟ್ ಡಿಜೈರ್ 2016 ಜೂನ್ ತಿಂಗಳಲ್ಲಿ 15,560 ಯುನಿಟ್ ಗಳ ಮಾರಾಟದೊಂದಿಗೆ ಎರಡನೇ ಸ್ಥಾನ ಭದ್ರವಾಗಿರಿಸಿದೆ.

ಮಾರುತಿ ಸ್ವಿಫ್ಟ್ ಡಿಜೈರ್

ಮಾರುತಿ ಸ್ವಿಫ್ಟ್ ಡಿಜೈರ್

ಎಂಜಿನ್ ಪುಶ್ ಸ್ಟ್ಯಾರ್ಟ್/ಸ್ಟಾಪ್ ಬಟನ್, ಬ್ಲೂಟೂತ್ ಆಡಿಯೋ ಸಿಸ್ಟಂ, ರಿವರ್ಸ್ ಕ್ಯಾಮೆರಾ ಸೆನ್ಸಾರ್, ಎಬಿಎಸ್, ಆಟೋ ಎಸಿ ಮತ್ತು ಎಎಂಟಿ ಗೇರ್ ಬಾಕ್ಸ್ ಗಳನ್ನು ಹೊಂದಿರುವ ಸ್ವಿಫ್ಟ್ ಡಿಜೈರ್ ಮೌಲ್ಯ ಆಧಾರಿತ ಕಾರುಗಳ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದು ಒಟ್ಟು 1103 ಕೋಟಿ ರುಪಾಯಿಗಳನ್ನು ಕಲೆ ಹಾಕಿದೆ.

01. ಟೊಯೊಟಾ ಇನ್ನೋವಾ

01. ಟೊಯೊಟಾ ಇನ್ನೋವಾ

ಇನ್ನೋವಾ ಕ್ರೈಸ್ಟಾ ಆಗಮನದೊಂದಿಗೆ ಟೊಯೊಟಾ ಅದೃಷ್ಟವೇ ಬದಲಾಗುತ್ತಿದೆ ಎಂಬುದಕ್ಕೆ ಇಲ್ಲಿದೆ ಪುರಾವೆ. ಜೂನ್ ತಿಂಗಳ ಮಾರಾಟದಲ್ಲಿ 8171 ಯುನಿಟ್ ಗಳ ಮಾರಾಟವನ್ನು ಕಂಡಿರುವ ಟೊಯೊಟಾ ಇನ್ನೋವಾ ಅತಿ ಹೆಚ್ಚು ಮಾರಾಟವಾಗುವ ಅಗ್ರ 10 ಕಾರುಗಳ ಪಟ್ಟಿಯಲ್ಲಿ ಎಂಟನೇ ಸ್ಥಾನದಲ್ಲಿದೆ.

ಟೊಯೊಟಾ ಇನ್ನೋವಾ

ಟೊಯೊಟಾ ಇನ್ನೋವಾ

ಆಟೋಮ್ಯಾಟಿಕ್ ಎಲ್ ಇಡಿ ಪ್ರೊಜೆಕ್ಟರ್ ಹೆಡ್ ಲ್ಯಾಂಪ್, ವೆಲ್ಕಂ ಲ್ಯಾಂಪ್, ಆ್ಯಂಬಿಯಂಟ್ ಎಲ್ ಇಡಿ ಇಲ್ಯೂಮಿನೇಷನ್, ಪ್ರೀಮಿಯಂ ಲೆಥರ್ ಸೀಟು, ರಿಯರ್ ಎಸಿ ಜೊತೆ ಡಿಜಿಟಲ್ ಡಿಸ್ ಪ್ಲೇ, ಸುಲಭವಾಗಿ ಮಡಚಬಹುದಾದ ಸೀಟು, ಬ್ಯಾಕ್ ಟೇಬಲ್, ಕಪ್ ಹೋಲ್ಡರ್, ಏಳು ಏರ್ ಬ್ಯಾಗ್, ಹಿಲ್ ಅಸಿಸ್ಟ್ ಕಂಟ್ರೋಲ್, ಎಬಿಎಸ್, ವೆಹಿಕಲ್ ಸ್ಟೆಬಿಲಿಟಿ ಕಂಟ್ರೋಲ್, ಆರು ಸ್ಪೀಡ್ ಸಿಕ್ವೇನ್ಸಿಯಲ್ ಆಟೋಯಮ್ಯಾಟಿಕ್ ಗೇರ್ ಬಾಕ್ಸ್ ಮುಂತಾದ ವೈಶಿಷ್ಟ್ಯಗಳನ್ನು ಹೊಂದಿರುವ ಇನ್ನೋವಾ ಕ್ರೈಸ್ಟಾ 1449 ಕೋಟಿ ರುಪಾಯಿಗಳನ್ನು ಸಂಗ್ರಹಿಸುವ ಮೂಲಕ ಮೌಲ್ಯ ಆಧಾರಿತ ಟಾಪ್ 10 ಕಾರುಗಳ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.

Read more on ಟಾಪ್ 10 top 10
English summary
Top 10 Selling Cars In Terms Of Value — Is Your Car On The List?
Story first published: Thursday, August 11, 2016, 11:46 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark