ಜಿನೆವಾದಲ್ಲಿ ಮೋಡಿ ಮಾಡಿದ ಅಗ್ರ 10 ಕಾರುಗಳು

Written By:

ವಿಶ್ವದ ವಾಹನ ಪ್ರೇಮಿಗಳ ಪಾಲಿಗೆ 2016 ಜಿನೆವಾ ಮೋಟಾರು ಶೋ ಅತ್ಯಂತ ಸ್ಮರಣೀಯ ಕ್ಷಣಗಳನ್ನು ಹಂಚಿಕೊಂಡಿದೆ. ಜಗತ್ತಿನ ಅತಿ ದೊಡ್ಡ ವಾಹನ ಪ್ರದರ್ಶನ ಮೇಳಗಳಲ್ಲಿ ಒಂದಾಗಿರುವ ಜಿನೆವಾದಲ್ಲಿ ಅನೇಕ ನೂತನ ಕಾನ್ಸೆಪ್ಟ್ ಗಳ ಜೊತೆ ಜೊತೆಗೆ ಹೊಸ ಹೊಸ ಕಾರುಗಳು ಅನಾವರಣಗೊಂಡಿದ್ದವು.

ಪರ್ಯಾಯ ವ್ಯವಸ್ಥೆಯನ್ನು ಹುಡುಕುತ್ತಿರುವ ಆಟೋ ಕ್ಷೇತ್ರಕ್ಕೆ ಭರವಸೆಯ ಕಿರಣವಾಗಿ ಜಿನೆವಾ ಮೋಟಾರು ಶೋ ಮೂಡಿ ಬಂದಿತ್ತು. ಪ್ರಸ್ತುತ ಲೇಖನದಲ್ಲಿ ಜಿನೆವಾದಲ್ಲಿ ಪ್ರದರ್ಶನಗೊಂಡಿರುವ ಅಗ್ರ 10 ಕಾರುಗಳ ಬಗ್ಗೆ ಮಾಹಿತಿಯನ್ನು ಕೊಡುವ ಪ್ರಯತ್ನವನ್ನು ಮಾಡಲಿದ್ದೇವೆ.

To Follow DriveSpark On Facebook, Click The Like Button
ಆಡಿ ಕ್ಯೂ2

ಆಡಿ ಕ್ಯೂ2

ಕ್ಯೂ ಶ್ರೇಣಿಯ ಅತಿ ಸಣ್ಣ ಕಾರಾಗಿರುವ ಕ್ಯೂ2, 1.4 ಲೀಟರ್ ಟಿಎಸ್ ಐ ಎಂಜಿನ್ ನಿಂದ ನಿಯಂತ್ರಿಸಲ್ಪಡುತ್ತಿದ್ದು, 148 ಅಶ್ವಶಕ್ತಿಯನ್ನು ಉತ್ಪಾದಿಸುತ್ತದೆ. ಇದರ 2.0 ಲೀಟರ್ ಪೆಟ್ರೋಲ್ ಎಂಜಿನ್ 187 ಹಾಗೂ 248 ಅಶ್ವಶಕ್ತಿಯನ್ನು ನೀಡುತ್ತಿದೆ. ಹಾಗೆಯೇ 1.6 (115 ಅಶ್ವಶಕ್ತಿ) ಹಾಗೂ 2.0 ಲೀಟರ್ ಗಳೆಂಬ (148 ಅಶ್ವಶಕ್ತಿ) ಎರಡು ಟಿಡಿಐ ಡೀಸೆಲ್ ಎಂಜಿನ್ ಗಳ ಆಯ್ಕೆಯಲ್ಲೂ ಲಭ್ಯವಿರುತ್ತದೆ. ಇನ್ನು ಕಾರಿನೊಳಗೆ 8.4 ಇಂಚುಗಳ ಮಾಹಿತಿ ಮನರಂಜನಾ ಪರದೆಯೂ ಕಂಡುಬರಲಿದೆ.

ಮಸೆರಟಿ ಲೆವಂಟೆ

ಮಸೆರಟಿ ಲೆವಂಟೆ

ಮೆಡಿಟರೇನಿಯನ್ ಭೂಪ್ರದೇಶದಲ್ಲಿ ಮಾತ್ರ ಇರುವ ಸಾಧ್ಯವಾಗುವ ವೆವಂಟೆ ಎಂಬ ಗಾಳಿಯ ಹೆಸರನ್ನು ಇದಕ್ಕಿಡಲಾಗಿದೆ. ಈ ಎಸ್ ಯುವಿ ಕಾರು ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್ ಗಳಿಂದ ನಿಯಂತ್ರಿಸಲ್ಪಡಲಿದೆ. ಇದರ 3.0 ಲೀಟರ್ ವಿ6 ಟರ್ಬೊ ಚಾರ್ಜ್ಡ್ ಎಂಜಿನ್ 275 ಅಶ್ವಶಕ್ತಿಯನ್ನು ಉತ್ಪಾದಿಸುತ್ತದೆ. ಪ್ರಸ್ತುತ ಕಾರು ಭಾರತಕ್ಕೂ ಕಾಲಿಡುವ ಯೋಜನೆಯಲ್ಲಿದೆ.

ಪೋರ್ಷೆ 911 ಆರ್

ಪೋರ್ಷೆ 911 ಆರ್

ಐಕಾನಿಕ್ ರೇಸಿಗ್ ಕಾರಿನ 50ನೇ ವರ್ಷಾಚರಣೆಯ ಅಂಗವಾಗಿ ಪೋರ್ಷೆ 911 ಆರ್ ಕಾರನ್ನು ಪ್ರದರ್ಶಿಸಲಾಗಿತ್ತು. ಇದರ 4.0 ಲೀಟರ್ ಎಂಜಿನ್ 460 ಎನ್ ಎಂ ತಿರುಗುಬಲದಲ್ಲಿ 493 ಅಶ್ವಶಕ್ತಿಯನ್ನು ಉತ್ಪಾದಿಸುತ್ತದೆ. ಅಂತೆಯೇ 3.8 ಸೆಕೆಂಡುಗಳಲ್ಲೇ ಗಂಟೆಗೆ 100 ಕೀ.ಮೀ. ವೇಗವರ್ಧನೆ ಹಾಗೂ ಗಂಟೆಗೆ ಗರಿಷ್ಠ 323 ಕೀ.ಮೀ. ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿರುತ್ತದೆ.

ಫೆರಾರಿ ಜಿಟಿಸಿ4 ಲುಸ್ಸೊ

ಫೆರಾರಿ ಜಿಟಿಸಿ4 ಲುಸ್ಸೊ

ಫೆರಾರಿ ಜಿಟಿಸಿ4 ಲುಸ್ಸೊ ಜಿನೆವಾದಲ್ಲಿ ಪ್ರದರ್ಶನ ಕಂಡಿರುವ ಅತ್ಯಾಕರ್ಷಕ ಕಾರುಗಳಲ್ಲಿ ಒಂದಾಗಿದೆ. ಇದರಲ್ಲಿ ಜೋಡಣೆ ಮಾಡಲಾಗಿರುವ 6.3 ಲೀಟರ್ ವಿ12 ಎಂಜಿನ್ 697 ಎನ್ ಎಂ ತಿರುಗುಬಲದಲ್ಲಿ 681 ಅಶ್ವಶಕ್ತಿಯನ್ನು ಉತ್ಪಾದಿಸುತ್ತದೆ. ಇದು 7 ಸ್ಪೀಡ್ ಡ್ಯುಯಲ್ ಕ್ಲಚ್ ಗೇರ್ ಬಾಕ್ಸ್ ನಿಂದ ನಿಯಂತ್ರಿಸಲ್ಪಟ್ಟಿದೆ.

ಆಸ್ಟನ್ ಮಾರ್ಟಿನ್ ಡಿಬಿ11

ಆಸ್ಟನ್ ಮಾರ್ಟಿನ್ ಡಿಬಿ11

ಆಸ್ಟನ್ ಮಾರ್ಟಿನ್ ಜೇಮ್ಸ್ ಬಾಂಡ್ ಶ್ರೇಣಿಯ ಅತಿ ನೂತನ ಡಿಬಿ11 ಎಲ್ಲರ ಗಮನಕ್ಕೆ ಪಾತ್ರವಾಗಿತ್ತು. ನೂತನ ಡಿಬಿ11 ಮೂಲಕ ಸಂಸ್ಥೆಯು ನಿರ್ವಹಣೆ ಹಾಗೂ ಶೈಲಿಯ ವಿಚಾರದಲ್ಲಿ ಕ್ರಾಂತಿಕಾರಿ ಬದಲಾವಣೆಗೆ ಮುಂದಾಗಿದೆ. ಇದರಲ್ಲಿರುವ 5.2 ಲೀಟರ್ ಟ್ವಿನ್ ಟರ್ಬೊ ವಿ12 ಎಂಜಿನ್ 700 ಎನ್ ಎಂ ತಿರುಗುಬಲದಲ್ಲಿ 600 ಅಶ್ವಶಕ್ತಿಯನ್ನು ಉತ್ಪಾದಿಸುತ್ತದೆ.

ಫಿನಿನ್‌ಫರಿನಾ ಎಚ್2 ಸ್ಪೀಡ್

ಫಿನಿನ್‌ಫರಿನಾ ಎಚ್2 ಸ್ಪೀಡ್

ಮಹೀಂದ್ರ ಆಂಡ್ ಮಹೀಂದ್ರ ಸಂಸ್ಥೆಯ ಅಧೀನತೆಯಲ್ಲಿರುವ ಫಿನಿನ್ ಫರಿನಾ ಡಿಸೈನ್ ಸಂಸ್ಥೆಯು ಅತಿ ನೂತನ ಎಚ್2 ಸ್ಪೀಡ್ ಹೈಡ್ರೋಜನ್ ನಿಯಂತ್ರಿತ ಕಾರನ್ನು ಅನಾವರಣಗೊಳಿಸಿದೆ. ಇದರಲ್ಲಿರುವ ಹೈಡ್ರೋಜನ್ ಫ್ಯೂಯಲ್ ಸೆಲ್ 496 ಅಶ್ವಶಕ್ತಿಯನ್ನು ಉತ್ಪಾದಿಸುತ್ತದೆ. ಅಲ್ಲದೆ 3.4 ಸೆಕೆಂಡುಗಳಲ್ಲೇ ಗಂಟೆಗೆ 0-100 ಕೀ.ಮೀ. ವೇಗವರ್ಧಿಸುವ ಸಾಮರ್ಥ್ಯ ಹೊಂದಿದೆ.

ಪಗಾನಿ ಹ್ಯುರಾ ಬಿಸಿ

ಪಗಾನಿ ಹ್ಯುರಾ ಬಿಸಿ

ಭಾರತೀಯರ ಪಾಲಿಗೆ ಪಗಾನಿ ಹೊಸತೆನಿಸಿದರೂ ಯುರೋಪ್ ಖಂಡದಲ್ಲಿ ತನ್ನ ಸಾನಿಧ್ಯವನ್ನು ತೋರ್ಪಡಿಸಿದೆ. ಈಗ ಅನಾವರಣಗೊಳಿಸಿರುವ ನೂತನ ಹ್ಯುರಾ ಬಿಸಿ ಕಾರಿನಲ್ಲಿ ಆಳವಡಿಸಲಾಗಿರುವ 6.0 ಲೀಟರ್ ವಿ12 ಎಂಜಿನ್ 100 ಎನ್ ಎಂ ತಿರುಗುಬಲದಲ್ಲಿ 789 ಅಶ್ವಶಕ್ತಿಯನ್ನು ಉತ್ಪಾದಿಸುತ್ತದೆ.

ಲಂಬೋರ್ಗಿನಿ ಸೆಂಟೆನಾರಿಯೊ

ಲಂಬೋರ್ಗಿನಿ ಸೆಂಟೆನಾರಿಯೊ

ಲಂಬೋರ್ಗಿನಿ ಸ್ಥಾಪಕ ಫೆರುಸ್ಸಿಯೊ ಲಂಬೋರ್ಗಿನಿ ಅವರ 100ನೇ ಹುಟ್ಟುಹಬ್ಬದ ಸ್ಮರಣಾರ್ಥ ನಿರ್ಮಿಸಿರುವ ಲಂಬೋರ್ಗಿನಿ ಸೆಂಟೆನಾರಿಯೊ ಆಧುನಿಕ ಜಗತ್ತಿನಲ್ಲೂ ತನ್ನ ಪರಂಪರೆಯನ್ನು ಉಳಿಸಿಕೊಂಡಿದೆ. ಇದರಲ್ಲಿರುವ 6.5 ಲೀಟರ್ ಎಂಜಿನ್ 759 ಅಶ್ವಶಕ್ತಿಯನ್ನು ಉತ್ಪಾದಿಸುತ್ತದೆ.

ಕೊಯಿನಿಕ್ಸೆಗ್ ರೆಗೆರಾ

ಕೊಯಿನಿಕ್ಸೆಗ್ ರೆಗೆರಾ

ನಾವೀನ್ಯ ತಂತ್ರಗಾರಿಕೆಗಳಿಗೆ ಹೆಸರುವಾಸಿಯಾಗಿರುವ ಕೊಯಿನಿಕ್ಸೆಗ್ ಮಗದೊಮ್ಮೆ ನೂತನ ರೆಗೆರಾ ಮೂಲಕ ಮೋಡಿ ಮಾಡಿದೆ. ಪ್ರಸ್ತುತ ಹೈಬ್ರಿಡ್ ಕಾರು 200 ಎನ್ ಎಂ ತಿರುಗುಬಲದಲ್ಲಿ ಬರೋಬ್ಬರಿ 1479 ಅಶ್ವಶಕ್ತಿಯನ್ನು ಉತ್ಪಾದಿಸುತ್ತದೆ.

ಬುಗಾಟಿ ಕೈರಾನ್

ಬುಗಾಟಿ ಕೈರಾನ್

ಈ ಎಲ್ಲದರ ನಡುವೆ 2016 ಜಿನೆವಾ ಮೋಟಾರು ಶೋದಲ್ಲಿ ಬುಗಾಟಿ ಕೈರಾನ್ ಮೋಡಿ ಮಾಡಿರುವುದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು. ಇದರಲ್ಲಿ ಆಳವಡಿಸಲಾಗಿರುವ ಶಕ್ತಿಶಾಲಿ ಎಂಜಿನ್ 1500 ಎನ್ ಎಂ ತಿರುಗುಬಲದಲ್ಲಿ 1479 ಅಶ್ವಶಕ್ತಿಯನ್ನು ಉತ್ಪಾದಿಸುತ್ತದೆ. ಅಲ್ಲದೆ ಗಂಟೆಗೆ 420 ಕೀ.ಮೀ. ವೇಗದಲ್ಲಿ ಸಾಗಬಲ್ಲ ಈ ಕಾರು ಜಗತ್ತಿನ ಅತಿ ವೇಗದ ಕಾರೆಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.

English summary
Top 10 Cars From The 2016 Geneva Motor Show
Story first published: Monday, March 7, 2016, 9:18 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark