ಹೊಸ ವರ್ಷದ ರೇಸ್ ನಲ್ಲಿ ಗೆದ್ದ ಕುದುರೆಗಳು..!

By Nagaraja

2016ನೇ ವರ್ಷ ಆರಂಭವಾಗಿರುವಂತೆಯೇ ಜನವರಿ ತಿಂಗಳಲ್ಲಿ ದೇಶದ ಪ್ರಯಾಣಿಕ ಮಾರುಕಟ್ಟೆ ಸ್ಥಿರವಾದ ಬೆಳವಣಿಗೆ ಕಂಡುಬಂದಿದೆ. ಈ ಅವಧಿಯಲ್ಲಿ ಪ್ರಯಾಣಿಕ ಕಾರುಗಳ ಮಾರಾಟ ಶೇಕಡಾ 0.4ರಷ್ಟು ಏರುಗತಿ ಸಾಧಿಸಿವೆ.

Also Read: ದೇಶದ ಶ್ರೇಷ್ಠ 10 ವಿಮಾನಯಾನ ಸಂಸ್ಥೆಗಳು

ಈ ನಡುವೆ ಹೊಸದಾಗಿ ಬಿಡುಗಡೆಯಾಗಿರುವ ಕೆಲವು ಕಾರುಗಳು ಅಚ್ಚರಿಯೆಂಬಂತೆ ಟಾಪ್ 10 ಪಟ್ಟಿಯನ್ನು ಭೇದಿಸಿವೆ. ಪ್ರಸ್ತುತ ಲೇಖನದಲ್ಲಿ 2016 ಜನವರಿ ತಿಂಗಳಲ್ಲಿ ರೇಸ್ ಗೆದ್ದ ಕುದುರೆಗಳ ಬಗ್ಗೆ ಮಾಹಿತಿಯನ್ನು ಕೊಡಲಿದ್ದೇವೆ.

10. ಹ್ಯುಂಡೈ ಕ್ರೆಟಾ - 6,589

10. ಹ್ಯುಂಡೈ ಕ್ರೆಟಾ - 6,589

6,589 ಯುನಿಟ್ ಗಳ ಮಾರಾಟವನ್ನು ಸಾಧಿಸಿರುವ ಹ್ಯುಂಡೈ ಕ್ರೆಟಾ ಕಾಂಪಾಕ್ಟ್ ಕ್ರೀಡಾ ಬಳಕೆಯ ವಾಹನವು ಮಗದೊಮ್ಮೆ ತಾನ್ಯಕೆ ವರ್ಷದ ಶ್ರೇಷ್ಠ ಕಾರು ಎಂಬುದನ್ನು ಸಾಬೀತುಪಡಿಸಿದೆ.

09. ಮಾರುತಿ ಸೆಲೆರಿಯೊ - 7141

09. ಮಾರುತಿ ಸೆಲೆರಿಯೊ - 7141

7141 ಯುನಿಟ್ ಗಳ ಮಾರಾಟ ಕಂಡಿರುವ ಮಾರುತಿ ಸುಜುಕಿ ಸೆಲೆರಿಯೊ, ಈಗಲೂ ಆಟೋಮ್ಯಾಟಡ್ ಮ್ಯಾನುವಲ್ ಟ್ರಾನ್ಸ್ ಮಿಷನ್ (ಎಎಂಟಿ) ಖರೀದಿಗಾರರ ಪೈಕಿ ನೆಚ್ಚಿನ ಕಾರೆನಿಸಿಕೊಂಡಿದೆ.

08. ಮಾರುತಿ ಬಲೆನೊ - 7698

08. ಮಾರುತಿ ಬಲೆನೊ - 7698

ಈಗಷ್ಟೇ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿರುವ ಮಾರುತಿ ಬಲೆನೊ ಪ್ರೀಮಿಯಂ ಹ್ಯಾಚ್ ಬ್ಯಾಕ್ ಕಾರು 7698 ಸಂಖ್ಯೆಗಳ ಮಾರಾಟದೊಂದಿಗೆ ಮುಂದಿನ ದಿನಗಳಲ್ಲಿ ಮತ್ತಷ್ಟು ಜನಪ್ರಿಯತೆ ಕಾಪಾಡಿಕೊಳ್ಳುವುದು ನಿಚ್ಚಳವೆನಿಸಿದೆ.

07. ಹೋಂಡಾ ಸಿಟಿ - 8,037

07. ಹೋಂಡಾ ಸಿಟಿ - 8,037

ಮಧ್ಯಮ ಗಾತ್ರದ ಸೆಡಾನ್ ವಿಭಾಗದಲ್ಲಿ ಮಾರುತಿ ಸಿಯಾಝ್ ಗಳಂತಹ ಸವಾಲುಗಳನ್ನು ಮೆಟ್ಟಿ ನಿಂತಿರುವ ಹೋಂಡಾ ಸಿಟಿ, 2016 ಜನವರಿ ತಿಂಗಳಲ್ಲಿ 8,037 ಯುನಿಟ್ ಗಳ ಮಾರಾಟವನ್ನು ಕಾಯ್ದುಕೊಂಡಿದೆ.

06. ಹ್ಯುಂಡೈ ಎಲೈಟ್ ಐ20 - 9604

06. ಹ್ಯುಂಡೈ ಎಲೈಟ್ ಐ20 - 9604

ಬಲೆನೊದಿಂದ ಎದುರಾಗುತ್ತಿರುವ ನಿಕಟ ಪೈಪೋಟಿಯ ನಡುವೆಯೂ ತನ್ನ ಗುಣಮಟ್ಟತೆಯನ್ನು ಕಾಯ್ದುಕೊಂಡಿರುವ ಹ್ಯುಂಡೈ ಎಲೈಟ್ ಐ20, ಒಟ್ಟು 9604 ಸಂಖ್ಯೆಗಳ ಮಾರಾಟದೊಂದಿಗೆ ಪಟ್ಟಿಯಲ್ಲಿ ಆರನೇ ಸ್ಥಾನ ಕಾಪಾಡಿಕೊಂಡಿದೆ.

05. ಹ್ಯುಂಡೈ ಗ್ರಾಂಡ್ ಐ10 - 9934

05. ಹ್ಯುಂಡೈ ಗ್ರಾಂಡ್ ಐ10 - 9934

ಕಳೆದ 2015 ಡಿಸೆಂಬರ್ ತಿಂಗಳಿಗೆ ಹೋಲಿಸಿದಾಗ ಮಾರಾಟದಲ್ಲಿ ಹಿನ್ನಡೆ ಅನುಭವಿಸಿದರೂ 2016 ಜನವರಿ ತಿಂಗಳ ಮಾರಾಟದಲ್ಲಿ ಅಗ್ರ ಐದರ ಸಾಲಿನಲ್ಲಿ ಕಾಣಿಸಿಕೊಳ್ಳುವಲ್ಲಿ ಹ್ಯುಂಡೈ ಗ್ರಾಂಡ್ ಐ10 ಯಶ ಕಂಡಿದೆ.

04. ಮಾರುತಿ ಸುಜುಕಿ ವ್ಯಾಗನಾರ್ - 12,744

04. ಮಾರುತಿ ಸುಜುಕಿ ವ್ಯಾಗನಾರ್ - 12,744

'ಟಾಲ್ ಬಾಯ್' ಖ್ಯಾತಿಯ ಮಾರುತಿ ವ್ಯಾಗನಾರ್ ಈಗಲೂ ಗ್ರಾಹಕರ ಪಾಲಿಗೆ ಕೈಗೆಟುಕುವ ಹ್ಯಾಚ್ ಬ್ಯಾಕ್ ಕಾರಾಗಿದ್ದು, 12,744 ಯುನಿಟ್ ಗಳಷ್ಟು ಮಾರಾಟ ಗಿಟ್ಟಿಸಿಕೊಂಡಿದೆ.

03. ಮಾರುತಿ ಸುಜುಕಿ ಸ್ವಿಫ್ಟ್ - 14,057

03. ಮಾರುತಿ ಸುಜುಕಿ ಸ್ವಿಫ್ಟ್ - 14,057

ದೇಶದ ಸರ್ವಕಾಲಿಕ ಶ್ರೇಷ್ಠ ಹ್ಯಾಚ್ ಬ್ಯಾಕ್ ಕಾರುಗಳಲ್ಲಿ ಒಂದಾಗಿರುವ ಮಾರುತಿ ಸುಜುಕಿ ಸ್ವಿಫ್ಟ್, 14,057 ಯುನಿಟ್ ಗಳಷ್ಟು ಮಾರಾಟದೊಂದಿಗೆ ಮೂರನೇ ಸ್ಥಾನ ಉಳಿಸಿಕೊಂಡಿದೆ.

02. ಮಾರುತಿ ಸುಜುಕಿ ಸ್ವಿಫ್ಟ್ ಡಿಜೈರ್ - 17,587

02. ಮಾರುತಿ ಸುಜುಕಿ ಸ್ವಿಫ್ಟ್ ಡಿಜೈರ್ - 17,587

ಪ್ರತಿ ತಿಂಗಳಲ್ಲಿ ಸರಾಸರಿ 20,000 ಯುನಿಟ್ ಗಳಷ್ಟು ಮಾರಾಟವನ್ನು ಕಾಯ್ದುಕೊಂಡಿರುವ ಮಾರುತಿ ಸುಜುಕಿ ಸ್ವಿಫ್ಟ್ ಡಿಜೈರ್, ಮಾರಾಟ ಕುಸಿತದ ನಡುವೆಯೂ ಎರಡನೇ ಸ್ಥಾನಕ್ಕೆ ಯಾವುದೇ ಧಕ್ಕೆಯುಂಟಾಗದೆ ನೋಡಿಕೊಂಡಿದೆ.

01. ಮಾರುತಿ ಸುಜುಕಿ ಆಲ್ಟೊ - 21,462

01. ಮಾರುತಿ ಸುಜುಕಿ ಆಲ್ಟೊ - 21,462

ಕಳೆದ ಹಲವಾರು ವರ್ಷಗಳಿಂದಲೂ ಸಣ್ಣ ಕಾರು ವಿಭಾಗದಲ್ಲಿ ಅತಿ ಹೆಚ್ಚು ಪ್ರಭಾವ ಬೀರಿರುವ ಮಾರುತಿ ಸುಜುಕಿ ಆಲ್ಟೊ, 2016 ಜನವರಿ ತಿಂಗಳಲ್ಲೂ ದೇಶದ ಸರ್ವಶ್ರೇಷ್ಠ ಪ್ರಯಾಣಿಕ ಕಾರೆನಿಸಿಕೊಂಡಿದೆ.

ಇವನ್ನೂ ಓದಿ

ಭಾರತೀಯ ಕಳ್ಳರ 10 ಫೇವರಿಟ್ ಗಾಡಿಗಳು

Most Read Articles

Kannada
English summary
Top 10 selling Cars in India for the month of January 2016
Story first published: Monday, February 22, 2016, 14:13 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X